ETV Bharat / bharat

ಬೋಟ್ ದುರಂತ: ಇಬ್ಬರು ಅಪ್ರಾಪ್ತರು ನಾಪತ್ತೆ, 10 ಮಂದಿ ರಕ್ಷಣೆ

author img

By

Published : Jan 29, 2022, 7:05 AM IST

Updated : Jan 29, 2022, 7:44 AM IST

ಧಾರ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್​ ಆಗುತ್ತಿದ್ದಾಗ ಬೋಟ್ ಮಗುಚಿ ಇಬ್ಬರು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

MP: Two go missing as boat capsizes in Bhind district
ಬೋಟ್ ಮುಳುಗಿ ಬಾಲಕ, ಬಾಲಕಿ ನಾಪತ್ತೆ, 10 ಮಂದಿ ರಕ್ಷಣೆ

ಭಿಂಡ್(ಮಧ್ಯಪ್ರದೇಶ): ನದಿಯಲ್ಲಿ ದೋಣಿ ಮಗುಚಿ ಹದಿಹರೆಯದ ಹುಡುಗ ಮತ್ತು ಹುಡುಗಿ ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಸಿಂಧ್ ನದಿಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೋಟ್​​ನಲ್ಲಿ ಒಟ್ಟು 12 ಮಂದಿ ಪ್ರಯಾಣಿಸುತ್ತಿದ್ದು, ಕೆಲವರು ಈಜಿಕೊಂಡು ದಡ ಸೇರಿದರೆ, ಮತ್ತೆ ಕೆಲವರನ್ನು ರಕ್ಷಿಸಲಾಗಿದೆ. ಆದರೆ ದ್ರೌಪದಿ ಬಾಘೆಲ್ (16) ಮತ್ತು ಓಂ ಬಾಘೆಲ್ (13) ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಿಂಧ್ ನದಿಯ ಮತ್ತೊಂದು ದಡದಲ್ಲಿರುವ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಸ್​​ ಆಗುತ್ತಿದ್ದಾಗ ದುರಂತ ಸಂಭವಿಸಿದೆ. ದುರಂತ ನಡೆದ ಸ್ಥಳ ಭಿಂಡ್​​ ನಗರದಿಂದ 40 ಕಿಲೋಮೀಟರ್ ದೂರದಲ್ಲಿದೆ ಎಂದು ನಾಯಾಗಾಂವ್ ಪೊಲೀಸ್ ಠಾಣೆಯ ಅಧಿಕಾರಿ ನರೇಂದ್ರ ಸಿಂಗ್ ಕುಶ್ವಾಹಾ ಮಾಹಿತಿ ನೀಡಿದ್ದಾರೆ.

ಬೋಟ್ ದುರಂತದ ದೃಶ್ಯ

ಈಗ ಸದ್ಯಕ್ಕೆ ನಾಪತ್ತೆಯಾದವರಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 29, 2022, 7:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.