ETV Bharat / bharat

ಮಸಾಜ್​​​ ಪಾರ್ಲರ್​ನಲ್ಲಿ ಎಂಟು ಸ್ಪೈ ಕ್ಯಾಮೆರಾ.. ಸಂತ್ರಸ್ತೆಯಿಂದ ಆರೋಪ

author img

By

Published : Oct 22, 2021, 7:44 PM IST

ವ್ಯಕ್ತಿಯೊಬ್ಬ ನಡೆಸುತ್ತಿದ್ದ ಮಸಾಜ್​ ಪಾರ್ಲರ್​ನಲ್ಲಿ ಬರೋಬ್ಬರಿ 8 ಸ್ಪೈ ಕ್ಯಾಮೆರಾ ಅಳವಡಿಕೆ ಮಾಡಿ, ಮಹಿಳೆಯರ ನಗ್ನ ವಿಡಿಯೋ ಸೆರೆ ಹಿಡಿಯಲಾಗಿದೆ ಎಂದು ಸಂತ್ರಸ್ತ ಬಾಲಕಿಯೊಬ್ಬಳು ದೂರು ದಾಖಲು ಮಾಡಿದ್ದಾರೆ.

massage parlour
massage parlour

ಎರ್ನಾಕುಲಂ(ಕೇರಳ): ವ್ಯಾಪಾರಿಯೊಬ್ಬ ತನ್ನ ಮಸಾಜ್​ ಪಾರ್ಲರ್​​​ನಲ್ಲಿ ಬರೋಬ್ಬರಿ ಎಂಟು ಸ್ಪೈ ಕ್ಯಾಮೆರಾ ಅಳವಡಿಕೆ ಮಾಡಿದ್ದಾನೆಂದು ಸಂತ್ರಸ್ತ ಬಾಲಕಿಯೊಬ್ಬರು ದೂರು ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಆತನ ವಿರುದ್ಧ ಪ್ರಕರಣ ಕೂಡಾ ದಾಖಲಾಗಿದೆ.

ಎರ್ನಾಕುಲಂನಲ್ಲಿ ವ್ಯಾಪಾರಿಯಾಗಿರುವ ಮಾನ್ಸನ್​ ಮಾವುಂಗಲ್​​ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿದ್ದು, ಇದೀಗ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಆತನ ಮಸಾಜ್​ ಪಾರ್ಲರ್​​ನಲ್ಲಿ ಸ್ಪೈ ಕ್ಯಾಮೆರಾ ಅಳವಡಿಕೆ ಮಾಡಿದ್ದು, ಅಲ್ಲಿಗೆ ಬರುವ ಗ್ರಾಹಕರ ದೃಶ್ಯ ಸೆರೆ ಹಿಡಿದಿದ್ದಾನೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿರಿ: T-20 ವಿಶ್ವಕಪ್​​ನಲ್ಲಿ ಐರ್ಲೆಂಡ್​ ಕನಸು ಭಗ್ನ.. ಸೂಪರ್​-12 ಹಂತಕ್ಕೆ ನಮೀಬಿಯಾ ಎಂಟ್ರಿ

ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಬಾಲಕಿ ಮಾಹಿತಿ ನೀಡಿದ್ದು, ವ್ಯಾಪಾರಿ ಮಾನ್ಸನ್​ ಪಾರ್ಲರ್​ ಒಳಗೆ ಕ್ಯಾಮೆರಾ ಅಳವಡಿಕೆ ಮಾಡಿ ತನ್ನ ಹಾಗೂ ಇತರರ ನಗ್ನ ದೃಶ್ಯ ಸೆರೆ ಹಿಡಿದಿದ್ದಾನೆಂದು ಆರೋಪ ಮಾಡಿದ್ದಾರೆ. ಆತನ ಬ್ಲಾಕ್​ ಮೇಲ್​ಗೆ ಹೆದರಿ ದೂರು ನೀಡಲು ಯಾರು ಕೂಡ ಮುಂದೆ ಬರುತ್ತಿಲ್ಲ ಎಂದು ಬಾಲಕಿ ಹೇಳಿದ್ದಾಳೆ.

ಬಾಲಕಿ ದೂರಿನ ಆಧಾರದ ಮೇಲೆ ಮಾನ್ಸೂನ್​​ ಮನೆಯ ಮೇಲೆ ಅಪರಾಧ ವಿಭಾಗದ ತನಿಖಾ ತಂಡ ದಾಳಿ ನಡೆಸಿದಾಗ ಆತ ಅನೇಕ ವಂಚನೆ ಹಾಗೂ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.