ETV Bharat / bharat

Must Watch: ಮರವೇರಿ ಗರಿ ಗರಿ 500 ರೂ.ನೋಟುಗಳನ್ನು ಗಾಳಿಗೆ ತೂರಿದ ಕೋತಿ..!

author img

By

Published : Sep 17, 2021, 1:18 PM IST

Updated : Sep 17, 2021, 1:48 PM IST

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕೋತಿಗಳು, ಜನರಿಂದ ಟೋಪಿ, ಹಣ, ಇತರ ವಸ್ತುಗಳನ್ನು ತೆಗೆದುಕೊಂಡು ಮರವೇರಿ ಕುಳಿತು ಚೇಷ್ಟೆ ಮಾಡುವುದನ್ನು ನೋಡಿರ್ತೀವಿ, ಕೇಳಿರ್ತೀವಿ. ಆದರೆ, ಉತ್ತರಪ್ರದೇಶದ ರಾಂಪುರದ ಶಹಾಬಾದ್​ನಲ್ಲೂ ಅಂಥದ್ದೇ ಒಂದು ಘಟನೆ ನಡೆದಿದೆ.

ವಕೀಲರಿಂದ 1 ಲಕ್ಷ ರೂ.ನಗದು ಕಸಿದು ಮರವೇರಿದ ಕೋತಿಗಳು
ವಕೀಲರಿಂದ 1 ಲಕ್ಷ ರೂ.ನಗದು ಕಸಿದು ಮರವೇರಿದ ಕೋತಿಗಳು

ರಾಂಪುರ(ಉತ್ತರಪ್ರದೇಶ): ಜಿಲ್ಲೆಯ ಶಹಾಬಾದ್ ತಹಸಿಲ್ ಆವರಣದಲ್ಲಿ ನಿಂತಿದ್ದ ವಕೀಲ ವಿನೋದ್ ಬಾಬು ಅವರ ಕೈಲಿದ್ದ ಒಂದು ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್ ​ಅನ್ನು ಮಂಗವೊಂದು ಕಸಿದುಕೊಂಡು ಮರವೇರಿ ಕುಳಿತಿದೆ.

1 ಲಕ್ಷ ರೂ ಎಗರಿಸಿ ಮರವೇರಿ ಕುಳಿತ ಕೋತಿ

ಈ ವೇಳೆ ಬ್ಯಾಗ್​ನಿಂದ 50 ಸಾವಿರ ರೂಪಾಯಿ ಬಂಡಲ್ ಎಸೆದ ವಾನರ ಪಡೆ, ಮತ್ತೊಂದು ಕಂತೆಯಿಂದ ಒಂದೊಂದೇ ನೋಟನ್ನು ಹಿರಿದು ಗಾಳಿಗೆ ತೂರಿವೆ. ಕಪಿಚೇಷ್ಟೆ ಕಣ್ತುಂಬಿಕೊಳ್ಳಲು ಸ್ಥಳದಲ್ಲಿ ಜನರು ಜಮಾವಣೆಗೊಂಡರು. ಆದರೂ, ಕೋತಿ 500 ರೂಪಾಯಿಯ 17 ನೋಟುಗಳನ್ನು ಗಾಳಿಗೆ ತೂರಿದವು. ಇದರಿಂದಾಗಿ ವಿನೋದ್​ ಅವರಿಗೆ ಎಂಟೂವರೆ ಸಾವಿರ ರೂಪಾಯಿ ನಷ್ಟವಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ವಿನೋದ್ ಬಾಬು ಪುತ್ರ ಆಶಿಶ್​, ಹಣ ಕಟ್ಟಲು ಬ್ಯಾಂಕ್​ಗೆ ಹೋಗಿದ್ದೆವು. ಈ ವೇಳೆ, ಅಲ್ಲಿನ ಸ್ಥಳೀಯರು ಕೋತಿಗಳಿಗೆ ಆಹಾರ ನೀಡಿದ್ದಾರೆ. ಆಹಾರ ಪಡೆಯಲು ಬಂದ ಕೋತಿ, ನನ್ನ ತಂದೆ ಕೈಲಿದ್ದ ಬ್ಯಾಗ್​ ಅನ್ನು ಕಸಿದು ಪರಾರಿಯಾಗಿವೆ. ಹೇಗೋ ಅಲ್ಲಿದ್ದ ಸ್ಥಳೀಯರ ನೆರವಿನಿಂದ ಹಣ ಪಡೆದೆವು. ಆದರೆ, ಎಂಟೂವರೆ ಸಾವಿರ ರೂಪಾಯಿ ನಷ್ಟವಾಗಿದೆ ಎಂದರು.

ಇದನ್ನೂ ಓದಿ: 2020ರಲ್ಲಿ ಕೋಮು ಗಲಭೆ ಪ್ರಕರಣಗಳು ದ್ವಿಗುಣ: NCRB ವರದಿ

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಕೋತಿಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

Last Updated : Sep 17, 2021, 1:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.