ETV Bharat / bharat

'ನಮ್ಮ ಐಫೋನ್‌ಗಳ ಮೇಲೆ ರಾಜ್ಯ ಪ್ರಾಯೋಜಿತ ದಾಳಿಯ ಎಚ್ಚರಿಕೆ ಸಂದೇಶ ಸ್ವೀಕರಿಸಿದ್ದೇವೆ'; ಪ್ರತಿಪಕ್ಷ ನಾಯಕರ ಹೇಳಿಕೆ

author img

By ETV Bharat Karnataka Team

Published : Oct 31, 2023, 1:24 PM IST

ಸರ್ಕಾರಿ ಪ್ರಾಯೋಜಿತದ ದಾಳಿಕೋರರು ನಮ್ಮ ಫೋನ್​ಗಳು ಹಾಗೂ ಇಮೇಲ್ ಹ್ಯಾಕ್​ ಮಾಡಲು ಯತ್ನಿಸುತ್ತಿದ್ದಾರೆ. ಈ ಕುರಿತು ಎಚ್ಚರಿಕೆಯ ಸಂದೇಶಗಳನ್ನು ಸ್ವೀಕರಿಸಲಾಗಿದೆ ಎಂದು ಟಿಸಿಎಂ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್​ ಸಂಸದ ಶಶಿ ತರೂರ್​ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಹೇಳಿದ್ದಾರೆ.

Moitra, Tharoor, others say they've got Apple alert about state sponsored attack on their iPhones
'ನಮ್ಮ ಐಫೋನ್‌ಗಳ ಮೇಲೆ ರಾಜ್ಯ ಪ್ರಾಯೋಜಿತ ದಾಳಿಯ ಎಚ್ಚರಿಕೆ ಸಂದೇಶ ಸ್ವೀಕರಿಸಲಾಗಿದೆ': ಮಹುವಾ ಮೊಯಿತ್ರಾ, ತರೂರ್ ಸೇರಿ ಪ್ರತಿಪಕ್ಷಗಳ ನಾಯಕರ ಹೇಳಿಕೆ

ನವದೆಹಲಿ: ಸರ್ಕಾರಿ ಪ್ರಾಯೋಜಿತದ ದಾಳಿಕೋರರು ತಮ್ಮ ಫೋನ್​ಗಳ​ ಹ್ಯಾಕ್​ ಮಾಡಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳ ಸಂಸದರು ಹಾಗೂ ನಾಯಕರು ಇಂದು (ಮಂಗಳವಾರ) ಗಂಭೀರ ಆರೋಪ ಮಾಡಿದ್ದಾರೆ. ''ರಾಜ್ಯ ಪ್ರಾಯೋಜಿತ ದಾಳಿಕೋರರು ತಮ್ಮ ಫೋನ್​ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ'' ಎಂಬ ಎಚ್ಚರಿಕೆ ಸಂದೇಶವನ್ನು ತಮ್ಮ ಫೋನ್ ತಯಾರಕರಿಂದ ಸ್ವೀಕರಿಸಿರುವುದಾಗಿ ಕಾಂಗ್ರೆಸ್​, ಟಿಎಂಸಿ, ಆಮ್​ ಆದ್ಮಿ ಪಕ್ಷ, ಉದ್ಧವ್​ ಠಾಕ್ರೆ ಬಣದ ಶಿವಸೇನೆ ನಾಯಕರು ದೂರಿದ್ದಾರೆ.

  • Received text & email from Apple warning me Govt trying to hack into my phone & email. @HMOIndia - get a life. Adani & PMO bullies - your fear makes me pity you. @priyankac19 - you, I , & 3 other INDIAns have got it so far . pic.twitter.com/2dPgv14xC0

    — Mahua Moitra (@MahuaMoitra) October 31, 2023 " class="align-text-top noRightClick twitterSection" data=" ">

ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ, ಉದ್ಧವ್​ ಠಾಕ್ರೆ ಬಣದ ಶಿವಸೇನೆಯ ರಾಜ್ಯಸಭೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್ ನಾಯಕರಾದ ಸಂಸದ ಶಶಿ ತರೂರ್ ಮತ್ತು ಪವನ್ ಖೇರಾ, ಆಮ್​ ಆದ್ಮಿ ಪಕ್ಷದ ರಾಜ್ಯಸಭೆ ಸದಸ್ಯ ರಾಘವ್​ ಚಡ್ಡಾ, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬೆಳವಣಿಗೆಯ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಫೋನ್‌ಗೆ ಆ್ಯಪಲ್​ ಸಂಸ್ಥೆಯಿಂದ ಸ್ವೀಕರಿಸಿದ ಎಚ್ಚರಿಕೆ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್​ ಮಾಡಿದ್ದಾರೆ.

''ಸರ್ಕಾರವು ನನ್ನ ಫೋನ್​ ಮತ್ತು ಇಮೇಲ್​ ಅನ್ನು ಹ್ಯಾಕ್​ ಮಾಡಲು ಪ್ರಯತ್ನಿಸುತ್ತಿದೆ ಎಂದು ನನಗೆ ಎಚ್ಚರಿಕೆ ನೀಡುವ ಸಂದೇಶ ಮತ್ತು ಇಮೇಲ್​ ಸಂದೇಶವನ್ನು ಆ್ಯಪಲ್​ನಿಂದ ಸ್ವೀಕರಿಸಲಾಗಿದೆ'' ಎಂದು ಟಿಸಿಎಂ ಸಂಸದೆ ಮಹುವಾ ಮೊಯಿತ್ರಾ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಬರೆದುಕೊಂಡು ಕೇಂದ್ರ ಗೃಹ ಸಚಿವಾಲಯಕ್ಕೆ ಟ್ಯಾಗ್​ ಮಾಡಿದ್ದಾರೆ. ಮುಂದುವರೆದು, ''ಅದಾನಿ ಮತ್ತು ಪಿಎಂಒ ಬುಲ್ಲೀಸ್​ (ಹೆದರಿಸುವವರು) - ನಿಮ್ಮ ಭಯವು ನನಗೆ ನಿಮ್ಮ ಮೇಲೆ ಕರುಣೆಯನ್ನುಂಟು ಮಾಡುತ್ತದೆ'' ಎಂದು ಮೊಯಿತ್ರಾ ಹೇಳಿದ್ದಾರೆ.

''ನಾನು ವೆರಿಫೈಟ್​ ಆ್ಯಪಲ್​ ಐಡಿ ಹಾಗೂ ಇ-ಮೇಲ್​ನಿಂದ ಸಂದೇಶ ಸ್ವೀಕರಿಸಿದ್ದೇನೆ. ಇದರ ಸತ್ಯಾಸತ್ಯತೆ ದೃಢಪಡಿಸಲಾಗಿದೆ. ನನ್ನಂತಹ ತೆರಿಗೆದಾರರ ವೆಚ್ಚದಲ್ಲಿ ನಿರುದ್ಯೋಗಿ ಅಧಿಕಾರಿಗಳನ್ನು ಕಾರ್ಯ ನಿರತವಾಗಿರಿಸಲು ಸಂತೋಷವಾಗಿದೆ!. ಇದಕ್ಕಿಂತ ಮಾಡಲು ಹೆಚ್ಚು ಮುಖ್ಯವಾದೇನೂ ಇಲ್ಲವೇ?'' ಎಂದು ಕಾಂಗ್ರೆಸ್​ ಸಂಸದ ಶಶಿ ತರೂರ್​ 'ಎಕ್ಸ್​'ನಲ್ಲಿ ಫೋಸ್ಟ್​ ಮಾಡಿದ್ದಾರೆ.

  • #WATCH | Shiv Sena (UBT) leader Priyanka Chaturvedi says "The way I received a warning last night, shows that this is a sponsored program of the Central Government and that I need to take precautions. The warning clearly says that these attacks are 'state-sponsored'...Why are the… https://t.co/Bvmi5G1pQ4 pic.twitter.com/1nDzgOhmen

    — ANI (@ANI) October 31, 2023 " class="align-text-top noRightClick twitterSection" data=" ">

ರಾಜ್ಯಸಭೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಸಹ ಎಚ್ಚರಿಕೆ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಅಲ್ಲದೇ, ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ''ಕಳೆದ ರಾತ್ರಿ ನಾನು ಎಚ್ಚರಿಕೆ ಸ್ವೀಕರಿಸಿದ್ದೇನೆ. ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯವಾಗಿದೆ. ನಾನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ ಎಂದು ತೋರಿಸುತ್ತದೆ. ಈ ದಾಳಿಗಳು 'ರಾಜ್ಯ ಪ್ರಾಯೋಜಿತ' ಎಂದು ಎಚ್ಚರಿಕೆ ಸ್ಪಷ್ಟವಾಗಿ ಹೇಳುತ್ತದೆ. ವಿರೋಧ ಪಕ್ಷದ ನಾಯಕರಿಗೆ ಮಾತ್ರ ಇಂತಹ ಸಂದೇಶಗಳು ಏಕೆ ಬರುತ್ತಿವೆ?, ನಮ್ಮ ಮೇಲೆ ದೊಡ್ಡ ಮಟ್ಟದ ಕಣ್ಗಾವಲು ನಡೆಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು'' ಎಂದು ಒತ್ತಾಯಿಸಿದ್ದಾರೆ.

  • Received an Apple Threat Notification last night that attackers may be targeting my phone

    ḳhuub parda hai ki chilman se lage baiThe haiñ
    saaf chhupte bhī nahīñ sāmne aate bhī nahīñ pic.twitter.com/u2PDYcqNj6

    — Asaduddin Owaisi (@asadowaisi) October 31, 2023 " class="align-text-top noRightClick twitterSection" data=" ">

ಈ ಸಂದೇಶದಲ್ಲಿ ಏನಿದೆ?: ತಮ್ಮ ಮೊಬೈಲ್​ಗೆ ಸಂಸದರು ಸ್ವೀಕರಿಸಿರುವ ಎಚ್ಚರಿಕೆಯ ಸಂದೇಶ ಸ್ಕ್ರೀನ್‌ಶಾಟ್‌ಗಳನ್ನು ಪ್ರಕಾರ, ''ರಾಜ್ಯ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್​ಅನ್ನು ಗುರಿಯಾಗಿಸಬಹುದು'' ಎಂದು ಅಲರ್ಟ್​ ನೀಡಲಾಗಿದೆ. ''ನಿಮ್ಮ ಆ್ಯಪಲ್​ ಐಡಿಯೊಂದಿಗೆ ಸಂಯೋಜಿತವಾಗಿರುವ ಐಫೋನ್​ಅನ್ನು ದೂರದಿಂದಲೇ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ರಾಜ್ಯ ಪ್ರಾಯೋಜಿತ ದಾಳಿಕೋರರಿಂದ ನೀವು ಗುರಿಯಾಗಿದ್ದೀರಿ ಎಂದು ಆ್ಯಪಲ್​ ಭಾವಿಸುತ್ತದೆ. ನೀವು ಯಾರು ಅಥವಾ ನೀವು ಏನು ಮಾಡುತ್ತಿದ್ದೀರಿ ಎಂಬ ಕಾರಣದಿಂದ ಈ ದಾಳಿಕೋರರು ನಿಮ್ಮನ್ನು ವೈಯಕ್ತಿಕವಾಗಿ ಗುರಿಪಡಿಸುತ್ತಿರಬಹುದು. ನಿಮ್ಮ ಸಾಧನವು ರಾಜ್ಯ ಪ್ರಾಯೋಜಿತ ದಾಳಿಕೋರರಿಂದ ರಾಜಿ ಮಾಡಿಕೊಂಡರೆ, ಅವರು ನಿಮ್ಮ ಸೂಕ್ಷ್ಮ ಡೇಟಾ, ಸಂವಹನಗಳು ಅಥವಾ ಕ್ಯಾಮರಾ ಮತ್ತು ಮೈಕ್ರೊಫೋನ್​ಅನ್ನು ದೂರದಿಂದಲೇ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದು ತಪ್ಪು ಎಚ್ಚರಿಕೆ ಆಗಿರುವ ಸಾಧ್ಯತೆಯಿದ್ದರೂ, ದಯವಿಟ್ಟು ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ'' ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: '' ಅದು ಅಧಿಕೃತ ಲೆಟರ್‌ಹೆಡ್‌ ಅಲ್ಲ'': ಉದ್ಯಮಿ ಅಫಿಡವಿಟ್​ಗೆ ಮಹುವಾ ಮೊಯಿತ್ರಾ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.