ETV Bharat / bharat

ಬಂದೀಖಾನೆ ಡಿಜಿ ಕೊಲೆ: ಜಮ್ಮು ಮತ್ತು ರಾಜೌರಿಯಲ್ಲಿ ಮೊಬೈಲ್​ ಡೇಟಾ ಸ್ಥಗಿತ

author img

By

Published : Oct 4, 2022, 12:48 PM IST

ಜೈಲು ಡಿಜಿಯವರ ಕೊಲೆ ಘಟನೆ ಅತ್ಯಂತ ದುರದೃಷ್ಟಕರ ಎಂದಿರುವ ಪೊಲೀಸ್ ಡಿಜಿ, ಜಾಸೀರ್ ಎಂದು ಗುರುತಿಸಲಾಗಿರುವ ಮನೆ ಕೆಲಸದವನನ್ನು ಪತ್ತೆಮಾಡಲು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಆರೋಪಿ ಜಾಸೀರ್, ಲೋಹಿಯಾ ಅವರ ಮೃತದೇಹವನ್ನು ಸುಡಲು ಕೂಡ ಪ್ರಯತ್ನಿಸಿದ್ದಾನೆ ಎಂದು ಅವರು ಮಾಹಿತಿ ನೀಡಿದರು. 57 ವರ್ಷದ ಲೋಹಿಯಾ ಆಗಸ್ಟ್​ನಲ್ಲಿ ರಾಜ್ಯದ ಬಂದೀಖಾನೆ ಇಲಾಖೆ ಡಿಜಿ ಆಗಿ ನೇಮಕವಾಗಿದ್ದರು.

ಬಂದೀಖಾನೆ ಡಿಜಿ ಕೊಲೆ: ಜಮ್ಮು ಮತ್ತು ರಾಜೌರಿಗಳಲ್ಲಿ ಮೊಬೈಲ್​ ಡೇಟಾ ಸ್ಥಗಿತ
Mobile data service suspended temporarily in Jammu and Rajaouri

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ರಾಜ್ಯದ ಬಂದೀಖಾನೆ ಇಲಾಖೆ ಡಿಜಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು, ಸಮಾಜವಿರೋಧಿ ಶಕ್ತಿಗಳು ಇಂಟರ್ನೆಟ್​ ಬಳಸಿಕೊಳ್ಳುವ ಸಾಧ್ಯತೆಗಳ ಕಾರಣದಿಂದ ಜಮ್ಮು ಮತ್ತು ರಾಜೌರಿ ಜಿಲ್ಲೆಗಳಲ್ಲಿ ತಾತ್ಕಾಲಿಕವಾಗಿ ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಬಂದೀಖಾನೆ ಇಲಾಖೆ ಡೈರೆಕ್ಟರ್ ಜನರಲ್​ ಹೇಮಂತ್ ಕೆ. ಲೋಹಿಯಾ ತಮ್ಮ ನಿವಾಸದಲ್ಲೇ ಸೋಮವಾರ ಕೊಲೆಗೀಡಾಗಿದ್ದಾರೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಜೈಲು ಡಿಜಿಯವರ ಕೊಲೆ ಘಟನೆ ಅತ್ಯಂತ ದುರದೃಷ್ಟಕರ ಎಂದಿರುವ ಪೊಲೀಸ್ ಡಿಜಿ, ಜಾಸೀರ್ ಎಂದು ಗುರುತಿಸಲಾಗಿರುವ ಮನೆ ಕೆಲಸದವನನ್ನು ಪತ್ತೆಮಾಡಲು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಆರೋಪಿ ಜಾಸೀರ್ ಲೋಹಿಯಾ ಅವರ ಮೃತದೇಹವನ್ನು ಸುಡಲು ಕೂಡ ಪ್ರಯತ್ನಿಸಿದ್ದಾನೆ ಎಂದು ಅವರು ಮಾಹಿತಿ ನೀಡಿದರು. 57 ವರ್ಷದ ಲೋಹಿಯಾ ಆಗಸ್ಟ್​ನಲ್ಲಿ ರಾಜ್ಯದ ಬಂದೀಖಾನೆ ಇಲಾಖೆ ಡಿಜಿ ಆಗಿ ನೇಮಕವಾಗಿದ್ದರು.

ಜಮ್ಮು ಕಾಶ್ಮೀರದ ಹೊಸ ಉಗ್ರವಾದಿ ಸಂಘಟನೆ ಪೀಪಲ್ಸ್​ ಆ್ಯಂಟಿ ಫ್ಯಾಸಿಸ್ಟ್​ ಫೋರ್ಸ್​ (The People's Anti-Fascist Force -PAFF) ಡಿಜಿ ಲೋಹಿಯಾ ಅವರ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದೆ. ಪಿಎಪಿಎಫ್​​ ಇದು ಜೈಶ್​ ಉಗ್ರವಾದಿ ಸಂಘಟನೆಯ ಅಂಗವಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ 3 ದಿನಗಳ ಜಮ್ಮು ಭೇಟಿಗೆ ಆಗಮಿಸಿದ ಬೆನ್ನಲ್ಲೇ ಹಿರಿಯ ಅಧಿಕಾರಿಯ ಕೊಲೆಯಾಗಿರುವುದು ಗಮನಾರ್ಹ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.