ಮುಂಬೈ (ಮಹಾರಾಷ್ಟ್ರ): ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಟಿಕೆಟ್ ನೀಡುವುದಾಗಿ ಆಮಿಷವೊಡ್ಡಿ ಮಹಿಳೆಯೊಬ್ಬರ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖಂಡರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
33 ವರ್ಷದ ವೃಶಾಂಕ್ ವಡಕೆ ಎಂಬುವವರೇ ಬಂಧಿತ ಆರೋಪಿಯಾಗಿದ್ದು, 42 ವರ್ಷದ ಮಹಿಳೆ ನೀಡಿದ ನೀಡಿದ ದೂರಿನ ಮೇರೆಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಎನ್‌ಎಸ್ ಪಕ್ಷದ ಟಿಕೆಟ್ ನೀಡುವುದಾಗಿ ಹೇಳಿ 2021ರ ಸೆಪ್ಟೆಂಬರ್ ಮತ್ತು 2022ರ ಜುಲೈ ತಿಂಗಳ ನಡುವೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ದೂರಿದ್ದಾರೆ.
ಈ ದೂರಿನ ಆಧಾರದ ಮೇಲೆ ವಿಪಿ ಮಾರ್ಗ್ ಠಾಣೆಯ ಪೊಲೀಸರು ಗಿರ್ಗಾಂವ್ ಪ್ರದೇಶದ ನಿವಾಸಿಯಾದ ಆರೋಪಿ ವೃಶಾಂಕ್ರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇನ್ನು, ಈ ಬಗ್ಗೆ ಮಹಿಳೆ ಕೆಲವು ದಿನಗಳ ಹಿಂದೆ ಎಂಎನ್‌ಎಸ್‌ನ ಹಿರಿಯ ನಾಯಕರನ್ನು ಭೇಟಿಯಾಗಿ ಘಟನೆಯನ್ನು ವಿವರಿಸಿದ್ದರು. ಹೀಗಾಗಿಯೇ ನಾಲ್ಕು ದಿನಗಳ ಹಿಂದೆ ಎಂಎನ್‌ಎಸ್ ಪಕ್ಷಕ್ಕೆ ವಕಡೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ವರದಕ್ಷಿಣಿಗಾಗಿ ಬೆಂಕಿ ಹಚ್ಜಿದ ಪತಿಯನ್ನೇ ತಬ್ಬಿಕೊಂಡ ಪತ್ನಿ: ಹೆಂಡತಿ ಸಾವು, ಚಿಂತಾಜನಕ ಸ್ಥಿತಿಯಲ್ಲಿ ಗಂಡ