ETV Bharat / bharat

ಲಾಕ್​​ಡೌನ್ ಸಂಕಷ್ಟದಲ್ಲಿ ನೆರವಿಗೆ ನಿಂತ 'ಮಿಸ್ ಏಷ್ಯಾ ಪೆಸಿಫಿಕ್ ಸುಂದರಿ'

author img

By

Published : Jun 4, 2021, 8:19 PM IST

ಮಿಸ್ ಏಷ್ಯಾ ಪೆಸಿಫಿಕ್ ವರ್ಲ್ಡ್ ಅನುಕೃತಿ ಗುಸಾಯ್, ಲ್ಯಾನ್ಸ್ ಡೌನ್, ರುದ್ರಪ್ರಯಾಗ್ ಮತ್ತು ಕೇದಾರನಾಥ ವಿಧಾನಸಭಾ ಕ್ಷೇತ್ರಗಳ ಜನರಿಗೆ ಪಡಿತರ ಕಿಟ್ ಕಳುಹಿಸಿದ್ದಾರೆ. ಅಲ್ಲದೇ ಉಳ್ಳವರು ಈ ಸಂದರ್ಭದಲ್ಲಿ ಮುಂದೆ ಬಂದು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ex-asia-pacific-world-anukriti-gusai-
ಮಿಸ್ ಏಷ್ಯಾ ಪೆಸಿಫಿಕ್ ಸುಂದರಿ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಕೊರೊನಾ ಕರ್ಫ್ಯೂ ಹೇರಿರುವುದರಿಂದ, ಹಸಿವಿನ ಅಂಚಿಗೆ ತಲುಪಿದ ಅನೇಕ ಕುಟುಂಬಗಳಿದ್ದು, ಉದ್ಯೋಗ ನಷ್ಟದಿಂದಾಗಿ, ಬಡ ಕುಟುಂಬಗಳು ಅನೇಕ ಸಮಸ್ಯೆಗೆ ಸಿಲುಕಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ, ಅನೇಕ ಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಅಗತ್ಯವಿರುವ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಮಿಸ್ ಏಷ್ಯಾ ಪೆಸಿಫಿಕ್ ವರ್ಲ್ಡ್ ಅನುಕೃತಿ ಗುಸಾಯ್ ಸಹ ಅಗತ್ಯವಿರುವವರಿಗೆ ಪಡಿತರ ಕಿಟ್‌ಗಳನ್ನು ನೀಡುತ್ತಿದ್ದಾರೆ.

ಮಿಸ್ ಏಷ್ಯಾ ಪೆಸಿಫಿಕ್ ಸುಂದರಿ

ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಕೊಂದು ಶವದ ಮೇಲೆ ಅತ್ಯಾಚಾರವೆಸಗಿದ ಸೋದರಮಾವ

ಮಿಸ್ ಏಷ್ಯಾ ಪೆಸಿಫಿಕ್ ವರ್ಲ್ಡ್ ಅನುಕೃತಿ ಗುಸಾಯ್, ಲ್ಯಾನ್ಸ್ ಡೌನ್, ರುದ್ರಪ್ರಯಾಗ್ ಮತ್ತು ಕೇದಾರನಾಥ ವಿಧಾನಸಭಾ ಕ್ಷೇತ್ರಗಳ ಜನರಿಗೆ ಪಡಿತರ ಕಿಟ್ ಕಳುಹಿಸಿದ್ದಾರೆ. ಅಲ್ಲದೇ ಉಳ್ಳವರು ಈ ಸಂದರ್ಭದಲ್ಲಿ ಮುಂದೆ ಬಂದು ಸಹಾಯ ಮಾಡುವಂತೆ ಮನವಿ ಮಾಡಿದರು. ಗುಸಾಯ್ ಅವರು ಕ್ಯಾಬಿನೆಟ್ ಸಚಿವ ಹರಕ್ ಸಿಂಗ್ ರಾವತ್ ಅವರ ಸೊಸೆಯಾಗಿದ್ದಾರೆ.

ಇದೇ ಸಮಯದಲ್ಲಿ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಹ ರಾಜ್ಯದ ಸಾಮಾನ್ಯ ಜನರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಈ ಹಿಂದೆ, ರಾಘವ್ ಜುಯಲ್ ಮತ್ತು ಜುಬಿನ್ ನೌತಿಯಲ್ ಸಹ ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರಿಗೆ ಸಹಾಯ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.