ETV Bharat / bharat

ಬಾಲಕಿ ಮೇಲೆ ನಿವೃತ್ತ ಅಧಿಕಾರಿಯಿಂದಲೇ ಲೈಂಗಿಕ ದೌರ್ಜನ್ಯ ಆರೋಪ.. ಬಂಧನ

author img

By

Published : Jan 1, 2022, 12:46 PM IST

ರಕ್ಷಣೆ ಮಾಡಬೇಕಾದ ಜವಾಬ್ದಾರಿಯಲ್ಲಿದ್ದ ನಿವೃತ್ತ ಪೊಲೀಸ್​ ಅಧಿಕಾರಿಯೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಬಾಲಕಿ ತಾಯಿ ನೀಡಿದ ದೂರಿನ ಮೇಲೆ ನಿವೃತ್ತ ಅಧಿಕಾರಿಯನ್ನ ಬಂಧಿಸಲಾಗಿದೆ.

ಬಾಲಕಿ ಮೇಲೆ ನಿವೃತ್ತ ಅಧಿಕಾರಿಯಿಂದಲೇ ಲೈಂಗಿಕ ದೌರ್ಜನ್ಯ ಆರೋಪ.. ಬಂಧನ
minor-molested-in-lucknow-accused-retired-police-officer-arrested

ಲಖನೌ( ಉತ್ತರಪ್ರದೇಶ): ನಗರ ಕಾಕೋರಿ ಪೊಲೀಸ್ ಠಾಣಾ ವ್ಯಾಪ್ತಿಯ ದುಬಗ್ಗ ಪ್ರದೇಶದ ಹೌಸಿಂಗ್ ಡೆವಲಪ್‌ಮೆಂಟ್ ಕಾಲೊನಿಯಲ್ಲಿ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?

ನಿವೃತ್ತ ಪೊಲೀಸ್​ ಅಧಿಕಾರಿಯೊಬ್ಬರು ಬಾಲಕಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯ ತಾಯಿ ಹೇಳುವ ಪ್ರಕಾರ, ಅವರ 9 ವರ್ಷದ ಮಗಳು ಚಿಕ್ಕಪ್ಪನೊಂದಿಗೆ ದುಬಗ್ಗದ ವಸತಿ ಅಭಿವೃದ್ಧಿ ಕಾಲೋನಿಯಲ್ಲಿ ವಾಸಿಸುತ್ತಿದ್ದಾಳೆ. ಪೊಲೀಸ್ ಇಲಾಖೆಯಲ್ಲಿ ಇನ್ಸ್​​ಪೆಕ್ಟರ್ ಆಗಿ ನಿವೃತ್ತರಾಗಿರುವ ಗೌತಮ್ ಕುಮಾರ್ ಎಂಬುವವರ ಮನೆಗೆ ಆಟವಾಡಲು ಹೋಗಿದ್ದ ವೇಳೆ, ಸಿಕ್ಕ ಅವಕಾಶವನ್ನು ಬಳಸಿಕೊಂಡು ಆರೋಪಿ ಗೌತಮ್ ತಮ್ಮ ಮಗಳ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಗಳಿಂದ ಮಾಹಿತಿ ಪಡೆದ ತಾಯಿ, ಬಳಿಕ ಪೊಲೀಸ್ ಠಾಣೆಗೆ ತೆರಳಿ ಆರೋಪಿ ನಿವೃತ್ತ ಪೊಲೀಸ್ ಅಧಿಕಾರಿ ವಿರುದ್ಧ ದೂರು ದಾಖಲಿಸಿದ್ದರು.

ಅಧಿಕಾರಿ ಬಂಧನ- ವಿಚಾರಣೆ

ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ನಿವೃತ್ತ ಪೊಲೀಸ್ ಅಧಿಕಾರಿ ಗೌತಮ್ ಕುಮಾರ್ ಅವರನ್ನ ಬಂಧಿಸಲಾಗಿದೆ ಎಂದು ಇನ್ಸ್​​ಪೆಕ್ಟರ್ ಜಿತೇಂದ್ರ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ. ಈಗ ಆರೋಪಿ ಅಧಿಕಾರಿ ಜೈಲಿನಲ್ಲಿದ್ದು,ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಲಾಗಿದೆ.

ಇದನ್ನೂ ಓದಿ: ಹೊಸ ವರ್ಷದಂದೇ ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಜೀವ ದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.