ETV Bharat / bharat

ಒಡಿಶಾ ಸಚಿವರಿಗೆ ಗುಂಡೇಟು ಪ್ರಕರಣ; ಮರಣೋತ್ತರ ಪರೀಕ್ಷೆ ವರದಿ ಬಹಿರಂಗ, ನಬಾ ಕಿಶೋರ್ ದಾಸ್​ ಹೃದಯಸ್ತಂಭನದಿಂದ ಸಾವು!

author img

By

Published : Feb 2, 2023, 9:55 AM IST

ಒಡಿಶಾ ಸಚಿವರಿಗೆ ಗುಂಡೇಟು ಪ್ರಕರಣ.. ನಬಾ ಕಿಶೋರ್​ ಮರಣೋತ್ತರ ಪರೀಕ್ಷೆ.. ಸಚಿವರ ಸಾವಿನ ಬಗ್ಗೆ ಪೊಲೀಸರು ಹೇಳಿದ್ದು ಹೀಗೆ..

Minister died due to cardiogenic shock  Minister murder case  Minister postmortem report  ಒಡಿಶಾ ಸಚಿವ ಕೊಲೆ ಪ್ರಕರಣ  ನಬಾ ಕಿಶೋರ್ ದಾಸ್​ ಹೃದಯಾಘಾತದಿಂದ ಸಾವು  ಮರಣೋತ್ತರ ಪರೀಕ್ಷೆ ಬಹಿರಂಗ  ಒಡಿಶಾ ಸಚಿವ ಕೊಲೆ ಪ್ರಕರಣ  ಹತ್ಯೆಗೀಡಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್  ಗುಂಡಿನ ದಾಳಿಯ ಸಂದರ್ಭ
ಒಡಿಶಾ ಸಚಿವ ಕೊಲೆ ಪ್ರಕರಣ

ಭುವನೇಶ್ವರ್(ಒಡಿಶಾ): ಹತ್ಯೆಗೀಡಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಗೊಂಡಿದ್ದು, ಗುಂಡು ಹಾರಿಸಿದ ನಂತರ ಅವರು ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಒಡಿಶಾ ಪೊಲೀಸರು ಬುಧವಾರ ಹೇಳಿದ್ದಾರೆ. ನಬಾ ಕಿಶೋರ್ ದಾಸ್ ಅವರ ಮರಣೋತ್ತರ ಪರೀಕ್ಷೆ ವರದಿಯಿಂದ ಇದು ಬಹಿರಂಗವಾಗಿದೆ. ಸಿಐಡಿ-ಕ್ರೈಂ ಬ್ರಾಂಚ್ ತಂಡದಿಂದ ಸಾಕ್ಷ್ಯಗಳ ಸಂಗ್ರಹ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಒಡಿಶಾದ ಸಿಐಡಿ-ಕ್ರೈಂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅರುಣ್ ಬೋತ್ರಾ ಅವರು ಈ ಬಗ್ಗೆ ಖುದ್ದು ತನಿಖೆ ನಡೆಸುತ್ತಿದ್ದಾರೆ. ಒಡಿಶಾ ಪೊಲೀಸರು ಹೇಳಿಕೆಯಲ್ಲಿ, ಮರಣೋತ್ತರ ವರದಿ ಪ್ರಕಾರ ರಿವಾಲ್ವರ್ ಶಾಟ್‌ನಿಂದ ಹೃದಯಾಘಾತವಾಗಿ ನಬಾ ದಾಸ್ ಅವರು ಸಾವನ್ನಪ್ಪಿದ್ದಾರೆ ಎಂದು ಸೂಚಿಸುತ್ತದೆ. ಆದರೆ, ಅದರ ಸ್ವರೂಪ ಕೊಲೆಯಾಗಿದೆ. ಪೊಲೀಸರು ಆರೋಪಿ, ಎಎಸ್‌ಐ ಗೋಪಾಲ್ ದಾಸ್ ಅವರನ್ನು ನಾಲ್ಕು ದಿನಗಳವರೆಗೆ ನ್ಯಾಯಾಂಗ ಬಂಧನಕೊಳಪಡಿಸಿದ್ದಾರೆ. ಆರೋಪಿಯನ್ನ ವಶಕ್ಕೆ ಪಡೆಯಲಾಗಿದ್ದು, ಸಿಐಡಿ-ಸಿಬಿ ತಂಡ ವಿಚಾರಣೆ ನಡೆಸುತ್ತಿದೆ.

ಡಿಎಸ್ಪಿ ನೇತೃತ್ವದ ತಂಡವು ಜನವರಿ 29, 2023 ರಂದು ಗುಂಡಿನ ದಾಳಿಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಹತ್ಯೆಯಾದ ಸಚಿವರ ಬೆಂಬಲಿಗರು ಸೇರಿದಂತೆ ಸಾಕ್ಷಿಗಳನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಎಸ್ಪಿ ನೇತೃತ್ವದ ಮತ್ತೊಂದು ತಂಡವು ಸಾಕ್ಷಿಗಳನ್ನು ಪರಿಶೀಲಿಸುತ್ತಿದೆ. ಗಂಜಾಂ ಜಿಲ್ಲೆಯ ಆರೋಪಿಯ ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರ ತಂಡ ನೆರೆಹೊರೆಯವರು ಮತ್ತು ಗ್ರಾಮಸ್ಥರನ್ನು ವಿಚಾರಣೆ ನಡೆಸುತ್ತಿದೆ. ವಿಧಿ ವಿಜ್ಞಾನ ಅಧಿಕಾರಿ ಮತ್ತು ತಜ್ಞರ ಸಹಾಯದಿಂದ FARO 3-D ಸ್ಕ್ಯಾನರ್ ಬಳಸಿ ಪೊಲೀಸರು ವಾಹನ ಮತ್ತು ಅಪರಾಧದ ಸ್ಥಳವನ್ನು ಪರಿಶೀಲಿಸಿದರು.

ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ: ಒಡಿಶಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಹರಿಚಂದನ್ ಬುಧವಾರ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ ಪೊಲೀಸ್ ಅಧಿಕಾರಿಯೊಬ್ಬರು ಸಚಿವರನ್ನು ಕೊಂದಿರುವುದು ದೇಶದಲ್ಲಿ ನಡೆದ ಮೊದಲ ಘಟನೆಯಾಗಿದೆ. ಹಲವು ಭದ್ರತಾ ಸಿಬ್ಬಂದಿಯ ಸಮ್ಮುಖದಲ್ಲಿಯೇ ಸಚಿವರ ಹತ್ಯೆಯ ನಂತರ ರಾಜ್ಯದ ಜನತೆ ಅಭದ್ರತೆಯ ಭಾವನೆಗೆ ಒಳಗಾಗಿದ್ದು, ರಾಜ್ಯ ಸರ್ಕಾರ ಕ್ಲೀನ್ ಚಿಟ್ ನೀಡಲು ಯತ್ನಿಸುತ್ತಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

ಜನವರಿ 29 ರಂದು ನಡೆದಿದ್ದೇನು?: 60 ವರ್ಷದ ಸಚಿವ ನಬಾ ದಾಸ್ ಅವರು ಜನವರಿ 29 ರಂದು ಅಧಿಕೃತ ಕಾರ್ಯಕ್ರಮಕ್ಕಾಗಿ ಅಲ್ಲಿಗೆ ಹೋಗಿದ್ದರು. ಅವರ ತವರು ಜಿಲ್ಲೆ ಜರ್ಸುಗುಡಾದ ಬ್ರಜರಾಜನಗರದ ಗಾಂಧಿ ಚೌಕ್‌ನಲ್ಲಿ ಎಎಸ್‌ಐ ಗುಂಡು ಹಾರಿಸಿದ್ದಾರೆ. ನಂತರ, ಸಚಿವರು ಗುಂಡೇಟಿನಿಂದ ಗಂಭೀರವಾಗಿ ಗಾಯಗಳಿಂದ ಭುವನೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಈಗ ಅವರ ಮರಣೋತ್ತರ ಪರೀಕ್ಷೆ ಮುನ್ನೆಲೆಗೆ ಬಂದಿದ್ದು, ಅವರು ಸಾವನ್ನಪ್ಪಿರುವುದು ಬಲೆಟ್​ ಏಟಿನಿಂದಲ್ಲ.. ಹೃದಯಾಘಾತದಿಂದ ಎಂದು ತಿಳಿದುಬಂದಿದೆ.

ಓದಿ: ಗುಂಡಿನ ದಾಳಿಗೆ ಒಳಗಾಗಿದ್ದ ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.