ETV Bharat / bharat

ಬೆಂಗಳೂರಿನ ಐಐಎಸ್​ಸಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸುಬ್ರೊತೋ ಬಾಗ್ಚಿ ದಂಪತಿಯಿಂದ 425 ಕೋಟಿ ರೂ. ದೇಣಿಗೆ

author img

By

Published : Feb 15, 2022, 7:05 PM IST

ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಆಸ್ಪತ್ರೆಯ ವಿನ್ಯಾಸ ರೂಪಿಸಿದೆ. ಐಐಎಸ್​ಸಿಯು ಇಷ್ಟು ಪ್ರಮಾಣದಲ್ಲಿ ಸ್ವೀಕರಿಸಿದ ಮೊದಲ ಮತ್ತು ಏಕ ದೇಣಿಗೆ ಇದಾಗಿದೆ. ನಿರ್ಮಾಣದ ಬಳಿಕ ಬಾಗ್ಚಿ ಮತ್ತು ಪಾರ್ಥಸಾರಥಿ ಆಸ್ಪತ್ರೆ ಎಂದು ನಾಮಕರಣ ಮಾಡಲಾಗುವುದು ಎಂದು ಐಐಎಸ್​ಸಿ ತಿಳಿಸಿದೆ.

specialty hospital
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ

ಭುವನೇಶ್ವರ(ಒಡಿಶಾ): ಬೆಂಗಳೂರಿನ ಐಐಎಸ್​ಸಿ ಕ್ಯಾಂಪಸ್​ನಲ್ಲಿ ಉದ್ದೇಶಿತ 800 ಬೆಡ್​ಗಳ ಆಸ್ಪತ್ರೆ ಮತ್ತು ಪದವಿ ವೈದ್ಯಕೀಯ ಕಾಲೇಜಿಗೆ ದಾನಿಗಳಾದ ಮೈಂಡ್‌ಟ್ರೀ ಮತ್ತು ಒಡಿಶಾ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಬ್ರೋತೊ ಬಾಗ್ಚಿ-ಸುಸ್ಮಿತಾ ದಂಪತಿ ಮತ್ತು ರಾಧಾ- ಪಾರ್ಥಸಾರಥಿ ಅವರು 425 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಆಸ್ಪತ್ರೆಯ ವಿನ್ಯಾಸ ರೂಪಿಸಿದೆ. ಐಐಎಸ್​ಸಿಯು ಇಷ್ಟು ಪ್ರಮಾಣದಲ್ಲಿ ಸ್ವೀಕರಿಸಿದ ಮೊದಲ ಮತ್ತು ಏಕ ದೇಣಿಗೆ ಇದಾಗಿದೆ. ನಿರ್ಮಾಣದ ಬಳಿಕ ಬಾಗ್ಚಿ ಮತ್ತು ಪಾರ್ಥಸಾರಥಿ ಆಸ್ಪತ್ರೆ ಎಂದು ನಾಮಕರಣ ಮಾಡಲಾಗುವುದು ಎಂದು ಐಐಎಸ್​ಸಿ ತಿಳಿಸಿದೆ.

ಪದವಿ ವೈದ್ಯಕೀಯ ಕಾಲೇಜಿನಲ್ಲಿ MD, MS ಮತ್ತು DM ವಿದ್ಯಾಭ್ಯಾಸ ಮಾಡಬಹುದಾಗಿದೆ. ಇದಲ್ಲದೇ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಪ್ರಯೋಗಾಲಯವನ್ನೂ ಒದಗಿಸಲಾಗುತ್ತಿದೆ. ಯೋಜನೆಯ ನಿರ್ಮಾಣ ಕಾರ್ಯವು ಜೂನ್ 2022 ರಲ್ಲಿ ಪ್ರಾರಂಭವಾಗಲಿದೆ. 2024ರ ಅಂತ್ಯದ ವೇಳೆಗೆ ಆಸ್ಪತ್ರೆಯು ಕಾರ್ಯಾರಂಭ, 2025 ರಿಂದಲೇ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡುವ ಉದ್ದೇಶವಿದೆ.

ಈ ಹಿಂದೆ ದಾನಿ ದಂಪತಿಗಳು ಸುಧಾರಿತ ಕ್ಯಾನ್ಸರ್ ಕೇರ್ ಸೆಂಟರ್‌ಗಳು, ಬಾಗ್ಚಿ-ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮತ್ತು ಭುವನೇಶ್ವರದಲ್ಲಿರುವ ಬಾಗ್ಚಿ- ಕರುಣಾಶ್ರಯ ಉಪಶಾಮಕ ಆರೈಕೆ ಕೇಂದ್ರಕ್ಕಾಗಿ 340 ಕೋಟಿ ರೂಪಾಯಿ ದೇಣಿಗೆ ನೀಡಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ.

ಓದಿ: ಮಕ್ಕಳಲ್ಲಿ ಕ್ಯಾನ್ಸರ್: ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ತಜ್ಞ ವೈದ್ಯರಿಂದ ವಿಶೇಷ ಜಾಗೃತಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.