ETV Bharat / bharat

ಒಳನುಸುಳಲು ಯತ್ನ: ಓರ್ವ ಭಯೋತ್ಪಾದಕನ ಗುಂಡಿಕ್ಕಿ ಕೊಂದ ಭದ್ರತಾ ಪಡೆ

author img

By

Published : Jul 7, 2021, 9:49 PM IST

ಗಡಿಯೊಳ ನುಸುಳಿದ ಭಯೋತ್ಪಾದಕನನ್ನು ಹತ್ಯೆ ಮಾಡಿ ಎಕೆ-47, ಎಕೆ-47ನ ನಾಲ್ಕು ಮ್ಯಾಗಜೀನ್​ಗಳು, ಎರಡು ಹ್ಯಾಂಡ್ ಗ್ರೆನೇಡ್​ಗಳನ್ನು ಭದ್ರತಾ ಪಡೆ ವಶಕ್ಕೆ ಪಡೆದಿದೆ.

Militant killed after Infiltration bid foiled in Rajouri: Officials
ಒಳನುಸುಳಲು ಯತ್ನ : ಓರ್ವ ಭಯೋತ್ಪಾದಕನ ಗುಂಡಿಕ್ಕಿ ಕೊಂದ ಭದ್ರತಾ ಪಡೆ

ರಜೌರಿ(ಜಮ್ಮು ಕಾಶ್ಮೀರ): ಭಾರತದ ಗಡಿಯೊಳಗೆ ಒಳನುಸುಳಲು ಯತ್ನಿಸಿದ ಓರ್ವ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಗುಂಡಿಟ್ಟು ಕೊಂದಿರುವ ಘಟನೆ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್​ನಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ 7 ಗಂಟೆಗೆ ಭಯೋತ್ಪಾದಕರ ಗುಂಪು ನೌಶೇರಾ ಸೆಕ್ಟರ್​ನಲ್ಲಿ ಒಳನುಸುಳಲು ಯತ್ನಿಸಿದ್ದು, ಈ ವೇಳೆ ಭದ್ರತಾ ಪಡೆಗಳು ಗುಂಡು ಹಾರಿಸಿವೆ. ಗುಂಡಿನ ಚಕಮಕಿ ವೇಳೆ ಓರ್ವ ಭಯೋತ್ಪಾದಕರ ಸಾವನ್ನಪ್ಪಿದ್ದು, ಉಳಿದವರು ಪರಾರಿಯಾಗಿದ್ದಾರೆ.

ಭಯೋತ್ಪಾದಕನ ಮೃತದೇಹದೊಂದಿಗೆ, ಎಕೆ-47, ಎಕೆ-47ನ ನಾಲ್ಕು ಮ್ಯಾಗಜೀನ್​ಗಳು, ಎರಡು ಹ್ಯಾಂಡ್ ಗ್ರೆನೇಡ್​ಗಳನ್ನು ಭದ್ರತಾ ಪಡೆ ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಇಲ್ಲಿ 'ಪ್ರಭು' ಅಲ್ಲಿ 'ಭಗವಂತ'.. ಇಬ್ಬರಿಗೂ ಮಂತ್ರಿ ಭಾಗ್ಯ: ಕಲ್ಲರಳಿ ಹೂವಾದ ಕಥೆ ರೋಚಕ

ಭಯೋತ್ಪಾದಕರ ಒಳನುಸುಳುವಿಕೆಯನ್ನು ವಿಫಲಗೊಳಿಸಿದ ಬೆನ್ನಲ್ಲೇ ಲೈನ್ ಆಫ್ ಕಂಟ್ರೋಲ್​ನಲ್ಲಿ ಭದ್ರತಾ ಪಡೆ ತೀವ್ರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.