ETV Bharat / bharat

ಬಸ್​ ಕಾರು ಮುಖಾಮುಖಿ ಡಿಕ್ಕಿ: ಐವರ ದುರ್ಮರಣ

author img

By

Published : Jun 5, 2023, 6:28 AM IST

ಮಹಾರಾಷ್ಟ್ರದಲ್ಲಿ ನಿನ್ನೆ ಭೀಕರ ರಸ್ತೆ ಅಪಘಾತ ಸಂಭವಿಸಿ ಐವರು ದುರ್ಮರಣ ಹೊಂದಿದ್ದಾರೆ.

MH : Five killed as car rams into bus in Chandrapur; one girl injured
ಬಸ್​ ಕಾರು ಮುಖಾಮುಖಿ ಐವರ ದುರ್ಮರಣ

ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಭಾನುವಾರ ಪ್ರಯಾಣಿಕ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 115 ಕಿಮೀ ದೂರದಲ್ಲಿರುವ ನಾಗ್ಭಿಡ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ್ಪಾ ಗ್ರಾಮದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

"ನಾಗ್ಪುರದಿಂದ ನಾಗಭೀಡ್‌ಗೆ ಕಾರಿನಲ್ಲಿ ಆರು ಜನರು ಪ್ರಯಾಣಿಸುತ್ತಿದ್ದಾಗ, ಈ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಪ್ರಯಾಣಿಕರ ಬಸ್‌ಗೆ ಡಿಕ್ಕಿ ಹೊಡೆದಿದೆ. ರಭಸದಿಂದ ಕಾರು ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ದುರ್ಮರಣ ಹೊಂದಿದರೆ, ಇನ್ನೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಒಟ್ಟು ಐವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಇದನ್ನು ಓದಿ:ಬೆಂಗಳೂರಲ್ಲಿ ಕೆಎಸ್​ಆರ್​ಟಿಸಿ ಬಸ್ ಹರಿದು ಮಹಿಳೆ ಸಾವು

ಈ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ನಾಲ್ವರ ಮೃತದೇಹಗಳನ್ನು ಕಟರ್​​​​ನಿಂದ ಕಟ್​ ಮಾಡಿ ಮೃತದೇಹಗಳನ್ನ ಹೊರ ತೆಗೆಯಲಾಗಿದೆ. ಕಾರು ಭಾರಿ ವೇಗದಲ್ಲಿ ಬಂದು ಬಸ್​​ಗೆ ಡಿಕ್ಕಿ ಹೊಡೆದಿದ್ದರಿಂದ ಸಂಪೂರ್ಣ ನಜ್ಜು ಗುಜ್ಜಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನು ಕಾರಿನಲ್ಲಿದ್ದ ಬಾಲಕಿ ಹಾಗೂ ಇನ್ನೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ನಾಗಭಿಡ್ ಗ್ರಾಮಾಂತರ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಾಗ್ಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಸ್​ - ಕಾರು ಡಿಕ್ಕಿಯಲ್ಲಿ ಐವರು ಸಾವನ್ನಪ್ಪಿದ್ದು, ಇದರಲ್ಲಿ ಮೂವರು ಮಹಿಳೆಯರೇ ಆಗಿದ್ದಾರೆ. ಬಾಲಕಿ ಸ್ಥಿತಿ ಗಂಭೀರವಾಗಿದ್ದು, ನಾಗ್ಪುರದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ಇದನ್ನು ಓದಿ:ಶಾಂತವಾಗಿದ್ದ ಈಜಿಪ್ಟ್​ ಗಡಿಯಲ್ಲಿ ಗುಂಡಿನ ದಾಳಿ: ಮಹಿಳೆ ಸೇರಿ ಮೂವರು ಇಸ್ರೇಲ್​ ಯೋಧರ ಹತ್ಯೆ

ಕಳೆದ ಒಂದು ವಾರದಿಂದ ದೇಶಾದ್ಯಂತ ಅಪಘಾತಗಳ ಸರಣಿ ಮುಂದುವರೆದಿದೆ. ಕರ್ನಾಟಕದಲ್ಲಿ ಕಳೆದ ವಾರ ಕೊಪ್ಪಳ ಹಾಗೂ ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತಗಳು ವರದಿ ಆಗಿದ್ದವು. ಮಹಾರಾಷ್ಟ್ರದಲ್ಲೂ ಇಂತಹದ್ದೇ ವರದಿಗಳಾಗಿದ್ದವು. ಅವೆಲ್ಲಕ್ಕಿಂತ ಹೆಚ್ಚಾಗಿ ಶುಕ್ರವಾರ ಒಡಿಶಾದ ಬಾಲಸೋರ್​​​ನಲ್ಲಿ ನಡೆದ ರೈಲ್ವೆ ಅಪಘಾತ ದೇಶವನ್ನೇ ಮೌನದಲ್ಲಿ ಮುಳುಗುವಂತೆ ಮಾಡಿದ್ದು ಗೊತ್ತೇ ಇದೆ.

ಇದನ್ನು ಓದಿ: ಒಡಿಶಾ ರೈಲು ದುರಂತ.. ಸಿಬಿಐ ತನಿಖೆಗೆ ಶಿಫಾರಸು ಮಾಡಿದ ರೈಲ್ವೆ ಮಂಡಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.