ETV Bharat / bharat

ತಾಯಿಯ ಶವದೊಂದಿಗೆ ಮಾನಸಿಕ ಅಸ್ವಸ್ಥ ಮಗಳು ವಾಸ.. ಕೊಳೆತ ಮೃತದೇಹ ನೀಡಿತು ಸಾವಿನ ಸುಳಿವು

author img

By

Published : Feb 14, 2023, 8:11 AM IST

ಕೋಲ್ಕತ್ತಾದಲ್ಲಿ ಕೆಲವು ದಿನಗಳಿಂದ ತಾಯಿಯ ಶವದೊಂದಿಗೆ ಮಾನಸಿಕ ಅಸ್ವಸ್ಥ ಮಗಳು ವಾಸಿಸುತ್ತಿದ್ದ ವಿಚಿತ್ರ ಘಟನೆಯೊಂದು ಬೆಳಕಿಗೆ

daughter lives with mother corpse
ತಾಯಿಯ ಶವದೊಂದಿಗೆ ಮಾನಸಿಕ ಅಸ್ವಸ್ಥ ಮಗಳು ವಾಸ

ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಹೆತ್ತ ತಾಯಿ ಮೃತಪಟ್ಟರೂ ಅದರ ಅರಿವು ಮಗಳಿಗಿಲ್ಲ. ಕಣ್ಣೀರು ಹಾಕಿಲ್ಲ, ಯಾವ ಆಕ್ರಂದನದ ಧ್ವನಿಯೂ ಅಲ್ಲಿಂದ ಕೇಳಿಬಂದಿಲ್ಲ. ನೆರೆಹೊರೆಯವರನ್ನು ಕರೆದು ಪರಿಸ್ಥಿತಿ ಬಗ್ಗೆ ವಿವರಿಸುವ ಬಗ್ಗೆಯೂ ಪುತ್ರಿ ಆಲೋಚಿಸಿಲ್ಲ. ಹೌದು, ನಗರದ ರಾಬಿನ್ಸನ್ ಪ್ರದೇಶದ 3ನೇ ಬೀದಿಯಲ್ಲಿ ಕೆಲವು ದಿನಗಳಿಂದ ತಾಯಿಯ ಶವದೊಂದಿಗೆ ಮಾನಸಿಕ ಅಸ್ವಸ್ಥ ಮಗಳು ವಾಸಿಸುತ್ತಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥ ಮಹಿಳೆಯ ತಾಯಿ ಕೆಲವು ದಿನಗಳ ಹಿಂದೆ ಮೃತಪಟ್ಟಿರುವುದು ತಡವಾಗಿ ತಿಳಿದಿದೆ.

ಮೃತದೇಹ ಕೊಳೆತ ವಾಸನೆ ಬರುತ್ತಿತ್ತು: ನಗರದ ಹೃದಯಭಾಗದಲ್ಲಿರುವ ಮನೆಯೊಂದರ ಕೊಠಡಿಯಲ್ಲಿ ಮಾನಸಿಕ ಅಸ್ವಸ್ಥ ಮಗಳು ತಾಯಿಯ ಶವದೊಂದಿಗೆ ದಿನಗಳನ್ನು ಕಳೆದಿದ್ದು, ಕೋಣೆಯಿಂದ ಶವದ ಕೊಳೆತ ವಾಸನೆ ಬರುತ್ತಿದ್ದರಿಂದ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದಿದೆ. ನಂತರ ನೆರೆಹೊರೆಯವರು ಆ ಮಹಿಳೆಯ(ಮೃತಳ ಮಗಳು) ತಾಯಿಯನ್ನು ಹುಡುಕಾಡಿ, ಬಳಿಕ ಮಗಳನ್ನು ಪ್ರಶ್ನೆ ಮಾಡಿದ್ದಾರೆ. ಆ ಮಾನಸಿಕ ಅಸ್ವಸ್ಥ ಮಗಳು ತನ್ನ ತಾಯಿ ಕೆಲವು ದಿನಗಳ ಹಿಂದೆಯೇ ನಿಧನರಾದರು ಎಂದು ಎಲ್ಲರ ಎದುರು ಒಪ್ಪಿಕೊಂಡಿದ್ದಾರೆ. ಬೆಳೆಘಾಟದ ರಾಯ್ ಲೇನ್​ನ 4ನೇ ವಾರ್ಡ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ನಂತರ ಬೆಳಿಯಘಟ್ಟ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವೃದ್ಧೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮಾನಸಿಕ ಅಸ್ವಸ್ಥ ಮಗಳ ಬಂಧನ: ಮಹಿಳೆಯ ಬಹಳ ದಿನಗಳ ಹಿಂದೆಯೇ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದರು. ಮೃತ ಮಹಿಳೆಗೆ 90 ವರ್ಷ ವಯಸ್ಸಾಗಿದೆ. ಆಕೆಯ ಅವರನ್ನು ನಮಿತಾ ಘೋಷಾಲ್ ಎಂದು ಗುರುತಿಸಲಾಗಿದೆ. ಮೃತರ ಮಾನಸಿಕ ಅಸ್ವಸ್ಥ ಮಗಳನ್ನು ಬಂಧಿಸಿ, ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ಇಲ್ಲಿನ ಪ್ರದೇಶದಲ್ಲಿ ಬಹಳ ದಿನಗಳಿಂದ ಈ ಕುಟುಂಬ ಬಾಡಿಗೆಗೆ ನೆಲೆಸಿತ್ತು ಎಂದು ಸ್ಥಳೀಯರು ತಿಳಿಸಿದರು. ನಮಿತಾ ಘೋಷಾಲ್ ಅವರ ಪತಿ ಹಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಈ ಕುಟುಂಬವು ಆರ್ಥಿಕ ಮುಗ್ಗಟ್ಟಿನಲ್ಲಿತ್ತು. ನಂತರ ನಮಿತಾ ಘೋಷಾಲ್ ವಯಸ್ಸಾದ ಕಾರಣದಿಂದ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು.

ಕಿತ್ತು ತಿನ್ನುವ ಬಡತನ: ತೀವ್ರ ಬಡತನ ಇರುವುದರಿಂದ ಸರಿಯಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಕಾರಣ, ರೋಗಗಳು ಉಲ್ಬಣಗೊಂಡಿವೆ. ನಮಿತಾ ಘೋಷಾಲ್ ಅವರನ್ನು ಕೊನೆಯ ಬಾರಿಗೆ ಈ ಪ್ರದೇಶದ ಜನರು ತುಂಬಾ ದಿನಗಳ ಹಿಂದೆಯೇ ನೋಡಿದ್ದರಂತೆ. ಹಿಂದೊಮ್ಮೆ ಅವರ ಮನೆಯ ಮುಂದಿರುವ ಸಾರ್ವಜನಿಕ ನಲ್ಲಿಯಿಂದ ನೀರು ತುಂಬಿಸುವಾಗ ಕಾಲು ಜಾರಿ ಬಿದ್ದಿದ್ದರಂತೆ.

ಈ ವೇಳೆ ಸ್ಥಳೀಯರು ವೃದ್ಧೆಯನ್ನು ರಕ್ಷಿಸಿ ಮನೆಗೆ ಕರೆತಂದು ಬಿಟ್ಟಿದ್ದರು. ಪೊಲೀಸರು ಈಗಾಗಲೇ ನಮಿತಾ ಘೋಷಾಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಮಹಿಳೆಯ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

ಇದನ್ನೂ ಓದಿ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ: ಪೊಲೀಸರ ಅತಿಥಿಯಾದ ತಂದೆ​..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.