ETV Bharat / bharat

ಮೇಘಾಲಯದಲ್ಲಿ ಸಿಆರ್​ಪಿಎಫ್​ ಕಾರ್ಯಾಚರಣೆ: 2 IED, ಮೂರು Detonator ಜಪ್ತಿ

author img

By

Published : Sep 11, 2021, 10:41 AM IST

Updated : Sep 11, 2021, 10:50 AM IST

ಮೇಘಾಲಯದಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (IED), 13 ಜಿಲೆಟಿನ್ ಸ್ಟಿಕ್‌ ಮತ್ತು ಮೂರು ಡಿಟೋನೇಟರ್‌ಗಳನ್ನು ಸಿಆರ್​ಪಿಎಫ್​​​ ವಶಪಡಿಸಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Meghalaya: CRPF recovers 2 live IEDs, 3.25 kg explosives
ಮೇಘಾಲಯದಲ್ಲಿ ಸಿಆರ್​ಪಿಎಫ್​ ಕಾರ್ಯಾಚರಣೆ: 2 ಐಇಡಿ, ಮೂರು ಡಿಟೋನೇಟರ್ ಜಪ್ತಿ

ವೆಸ್ಟ್​​​ ಗಾರೋ ಹಿಲ್ಸ್(ಮೇಘಾಲಯ): ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮೇಘಾಲಯದ ವೆಸ್ಟ್​​ ಗಾರೋ ಹಿಲ್ಸ್​ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 3.25 ಕೆಜಿ ಸ್ಫೋಟಕಗಳನ್ನು ಶುಕ್ರವಾರ ವಶಕ್ಕೆ ಪಡೆದಿದೆ.

ಟಿಕ್ರಿಕಿಲ್ಲಾದಲ್ಲಿ ಸಿಆರ್‌ಪಿಎಫ್​ನ 120ನೇ ಬೆಟಾಲಿಯನ್ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (IED), 13 ಜಿಲೆಟಿನ್ ಸ್ಟಿಕ್‌ ಮತ್ತು ಮೂರು ಡಿಟೋನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ವಶಕ್ಕೆ ಪಡೆಯಲಾದ ಎರಡು ಐಇಡಿಗಳನ್ನು ತಟಸ್ಥಗೊಳಿಸಲಾಗಿದೆ ಎಂದು ಸಿಆರ್​​ಪಿಎಫ್​ ಮಾಹಿತಿ ನೀಡಿದೆ.

ವೆಸ್ಟ್ ಗಾರೋ ಹಿಲ್ಸ್​​ನ ಸೂಪರಿಂಟೆಂಡೆಂಟ್ ಆಫ್ ಪೊಲೀಸ್​​ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಂಬಲರ್ಹವಾದ ಮೂಲ ಮಾಹಿತಿಯ ಆಧಾರದ ಮೇಲೆ, ವೆಸ್ಟ್ ಗರೋ ಹಿಲ್ಸ್ ಪೊಲೀಸ್​ ಮತ್ತು ಸಿಆರ್​ಪಿಎಫ್​ನ 120ನೇ ಬೆಟಾಲಿಯನ್ ಜಂಟಿ ಕಾರ್ಯಾಚರಣೆ ನಡೆಸಿತ್ತು. ಟಿಕ್ರಿಕಿಲ್ಲಾದ ಮೆಂಗೊಟ್ಚಿಗ್ರೆ ಗ್ರಾಮದಲ್ಲಿ ದಾಳಿ ನಡೆಸಿ, ಸ್ಫೋಟಕಗಳನ್ನು ಜಪ್ತಿ ಮಾಡಲಾಗಿದೆ ಎಂದಿದ್ದಾರೆ.

ಈ ಘಟನೆಗೆ ಸಂಭವಿಸಿದಂತೆ ಸ್ಫೋಟಕ ವಸ್ತುಗಳ ಕಾಯ್ದೆ-1908ರ ಸೆಕ್ಷನ್ 5ರ ಅಡಿಯಲ್ಲಿ ಟಿಕ್ರಿಕಿಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾನೂನುಬಾಹಿರ ಕೃತ್ಯದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳ ಬಗ್ಗೆ ಯಾರಾದರೂ ಮಾಹಿತಿ ಹೊಂದಿದ್ದರೆ, ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ. ಮಾಹಿತಿ ನೀಡಿದವರ ಗುರುತನ್ನು ರಹಸ್ಯವಾಗಿಡಲಾಗುತ್ತದೆ ಮತ್ತು ಸೂಕ್ತ ಬಹುಮಾನವನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಹೊಸದಾಗಿ 33,376 COVID ಪ್ರಕರಣಗಳು ಪತ್ತೆ.. 308 ಸಾವು

Last Updated : Sep 11, 2021, 10:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.