ETV Bharat / bharat

Maruti Suzuki: ಸೆಮಿ ಕಂಡಕ್ಟರ್ ಕೊರತೆ..ಸೆಪ್ಟೆಂಬರ್​ನಲ್ಲಿ ಶೇಕಡಾ 40 ರಷ್ಟು ಉತ್ಪಾದನಾ ನಿರೀಕ್ಷೆ

author img

By

Published : Aug 31, 2021, 9:20 PM IST

ಅರೆವಾಹಕಗಳ ಕೊರತೆಯಿಂದಾಗಿ ಸೆಪ್ಪೆಂಬರ್​ನಲ್ಲಿ ಹರಿಯಾಣ ಮತ್ತು ಗುಜರಾತ್​​ನಲ್ಲಿ ಶೇಕಡಾ 40 ರಷ್ಟು ಉತ್ಪಾದನೆಯ ನಿರೀಕ್ಷೆಯಿದೆ ಎಂದು ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಹೇಳಿದೆ.

Maruti Suzuki
Maruti Suzuki

ನವದೆಹಲಿ: ಸೆಮಿ ಕಂಡಕ್ಟರ್ (ಅರೆವಾಹಕ)​ ಕೊರತೆಯಿಂದಾಗಿ ಸೆಪ್ಪೆಂಬರ್​ನಲ್ಲಿ ಹರಿಯಾಣ ಮತ್ತು ಗುಜರಾತ್​​ನಲ್ಲಿ ಶೇಕಡಾ 40 ರಷ್ಟು ಉತ್ಪಾದನೆಯ ನಿರೀಕ್ಷೆಯಿದೆ ಎಂದು ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಹೇಳಿದೆ.

ಹರಿಯಾಣದ ಗುರುಗಾಂವ್​​ ಮತ್ತು ಮಾನೇಸರ್​ ಸ್ಥಾವರಗಳಲ್ಲಿ ಕಂಪನಿಯ ಉತ್ಪಾದನಾ ಸಾಮರ್ಥ್ಯ ವರ್ಷಕ್ಕೆ ಸುಮಾರು 15 ಲಕ್ಷ ಯೂನಿಟ್​​​​ಗಳಷ್ಟಿದೆ. ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ಅಂಗಸಂಸ್ಥೆಯಾದ ಗುಜರಾತ್​ನ ಸುಜುಕಿ ಮೋಟಾರ್​ ವರ್ಷಕ್ಕೆ ಏಳೂವರೆ ಲಕ್ಷ ಘಟಕಗಳ ಸಾಮರ್ಥ್ಯ ಹೊಂದಿದೆ.

ಸೆಮಿಕಂಡಕ್ಟರ್ ಕೊರತೆಯಿಂದಾಗಿ ಎಲೆಕ್ಟ್ರಾನಿಕ್ ಘಟಕಗಳ ಪೂರೈಕೆ ನಿರ್ಬಂಧವಾಗಿದೆ. ಇದರಿಂದಾಗಿ ಕಂಪನಿಯಲ್ಲಿ ವಾಹನ ಉತ್ಪಾದನೆ ಕುಂಠಿತಗೊಳ್ಳುವ ನಿರೀಕ್ಷೆಯಿದೆ ಎಂದು ಎಂಎಸ್​ಐ ತಿಳಿಸಿದೆ. ಪ್ರಸ್ತುತ ಎರಡೂ ಕಾರ್ಖಾನೆಗಳಲ್ಲಿ ಒಟ್ಟು ವಾಹನ ಉತ್ಪಾದನೆಯ ಪ್ರಮಾಣವು ಸಾಮಾನ್ಯ ಉತ್ಪಾದನೆಯ ಶೇಕಡಾ 40 ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಸೆಮಿ ಕಂಡಕ್ಟರ್​ ಸಿಲಿಕಾನ್ ಚಿಪ್‌ಗಳಾಗಿದ್ದು, ಆಟೋಮೊಬೈಲ್‌ಗಳು, ಕಂಪ್ಯೂಟರ್‌ಗಳು ಮತ್ತು ಸೆಲ್‌ಫೋನ್‌ಗಳಿಂದ ಹಿಡಿದು ಇತರ ಎಲೆಕ್ಟ್ರಾನಿಕ್ ವಸ್ತುಗಳವರೆಗೆ ಉತ್ಪನ್ನಗಳ ನಿಯಂತ್ರಣ ಮತ್ತು ಮೆಮೊರಿ ಕಾರ್ಯಗಳನ್ನು ಪೂರೈಸುತ್ತವೆ.

ಆಟೋ ಉದ್ಯಮದಲ್ಲಿ ಸೆಮಿಕಂಡಕ್ಟರ್‌ಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಹೆಚ್ಚಾಗಿದೆ. ಹೊಸ ಮಾದರಿಗಳು ಹೆಚ್ಚು ಹೆಚ್ಚು ಎಲೆಕ್ಟ್ರಾನಿಕ್ ವೈಶಿಷ್ಟ್ಯಗಳಾದ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಡ್ರೈವರ್ - ಅಸಿಸ್ಟ್, ನ್ಯಾವಿಗೇಷನ್ ಮತ್ತು ಹೈಬ್ರಿಡ್-ಎಲೆಕ್ಟ್ರಿಕ್ ಸಿಸ್ಟಮ್‌ಗಳೊಂದಿಗೆ ಬರುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಆಟೋಮೊಬೈಲ್‌ಗಳಿಗೆ ಹೆಚ್ಚಿದ ಬೇಡಿಕೆಯು ಜಾಗತಿಕ ಪೂರೈಕೆ ಸರಪಳಿಗಳ ಮೇಲೆ ಒತ್ತಡವನ್ನುಂಟು ಮಾಡಿವೆ. ಈ ಹಿನ್ನೆಲೆ ಅರೆವಾಹಕಗಳ ಕೊರತೆಗೆ ಕಾರಣವಾಗಿದೆ ಎಂದು ಉದ್ಯಮ ತಜ್ಞರು ಭಾವಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಎಂಎಸ್‌ಐಗೆ ಪ್ರತ್ಯೇಕವಾಗಿ ಕಾರುಗಳನ್ನು ಪೂರೈಸುವ ಎಸ್‌ಎಂಜಿ, ಸೆಮಿಕಂಡಕ್ಟರ್ ಕೊರತೆಯಿಂದಾಗಿ ತನ್ನ ಅಹಮದಾಬಾದ್ ಮೂಲದ ಉತ್ಪಾದನಾ ಘಟಕದಲ್ಲಿ ಆಗಸ್ಟ್‌ನಲ್ಲಿ ಉತ್ಪಾದನಾ ಚಟುವಟಿಕೆಯನ್ನು ಕಡಿಮೆ ಮಾಡುವುದಾಗಿ ಘೋಷಿಸಿತ್ತು.

ಕಾರ್ಖಾನೆಯಲ್ಲಿನ ಕೆಲವು ಉತ್ಪಾದನಾ ಮಾರ್ಗಗಳಲ್ಲಿ ಉತ್ಪಾದನೆಯನ್ನು ಒಂದೇ ಶಿಫ್ಟ್‌ಗೆ ಇಳಿಸಲು ಕಂಪನಿ ನಿರ್ಧರಿಸಿದೆ. SMG ಯಲ್ಲಿ ಉತ್ಪಾದಿಸಲಾದ ಎಲ್ಲ ಘಟಕಗಳನ್ನು MSI ಗೆ ಸರಬರಾಜು ಮಾಡಲಾಗುತ್ತದೆ. ಸುಜುಕಿ ಮಾರ್ಚ್ 2014 ರಲ್ಲಿ ಎಸ್‌ಎಮ್‌ಜಿಯನ್ನು ಸ್ಥಾಪಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.