ಪೊಲೀಸ್ ಮಾಹಿತಿದಾರ ಎಂಬ ಶಂಕೆ; ಗ್ರಾಮಸ್ಥನನ್ನೇ ಕೊಂದ ಮಾವೋವಾದಿಗಳು

author img

By

Published : Nov 25, 2022, 5:21 PM IST

suspicion of being a police informer; The Maoists killed the villagers

ಮಾಝಿ ಎಂವ ವ್ಯಕ್ತಿಯನ್ನು ಕೊಂದ ಮಾವೋವಾದಿಗಳು 'ತಮ್ಮ ವಿರುದ್ಧ ಕೃತ್ಯ ಎಸೆಗುವ ಗ್ರಾಮಸ್ಥರನ್ನು ಕೊಲ್ಲಲಾಗುವುದು' ಎಂಬ ಪೋಸ್ಟರ್​ಗಳನ್ನು ಅಂಟಿಸಿ ಹೋಗಿದ್ದಾರೆ.

ಕಾಲಹಾಂಡಿ(ಒಡಿಶಾ) : ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ಗ್ರಾಮಸ್ಥರೊಬ್ಬರನ್ನು ಮಾವೋವಾದಿಗಳು ಹತ್ಯೆ ಮಾಡಿರುವ ಘಟನೆ ಕಾಲಹಾಂಡಿ ಜಿಲ್ಲೆಯ ಭಾವೈಪಟ್ನಾ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಜುಗಸಾಪಟ್ನ ಗ್ರಾಮ ಪಂಚಾಯತ್‌ನ ತಾಲಾ ಪಂಚಕುಲ್ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಲಾಲಾಬತಿ ಮಾಝಿ ಎಂದು ಗುರುತಿಸಲಾಗಿದೆ. ಮಾಝಿಯನ್ನು ಕೊಂದ ನಂತರ ಈ ಮಾವೋವಾದಿಗಳು ಅದೇ ಪ್ರದೇಶದ ಕೆಲವು ಸ್ಥಳಗಳಲ್ಲಿ "ತಮ್ಮ ವಿರುದ್ಧ ಕೃತ್ಯ ಎಸೆಗುವ ಗ್ರಾಮಸ್ಥರನ್ನು ಕೊಲ್ಲಲಾಗುವುದು" ಎಂದು ಜೀವ ಬೆದರಿಕೆಯ ಪೋಸ್ಟರ್‌ಗಳನ್ನು ಸಹ ಅಂಟಿಸಿದ್ದಾರೆ.

ಆ ಪೋಸ್ಟರ್​ಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಸಿಪಿಐನ ಬಿಜಿಎನ್ ವಿಭಾಗೀಯ ಸಮಿತಿಯು ಅವುಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2018ರಲ್ಲಿ ಮಹಿಳೆ ಕೊಂದ ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.