ETV Bharat / bharat

ದೇಶದಲ್ಲಿ 60 ಸಾವಿರ ಸರ್ಕಾರಿ ಶಾಲೆ ಮುಚ್ಚಲಾಗಿದೆ ಯಾಕೆ?... ಮೋದಿಗೆ ಶಿಕ್ಷಣದ ಮಹತ್ವ ಅರ್ಥವಾಗುತ್ತಿಲ್ಲ: ಜೈಲಿನಿಂದ ಸಿಸೋಡಿಯಾ ಪತ್ರ

author img

By

Published : Apr 7, 2023, 1:00 PM IST

ಪ್ರಧಾನಿ ಮೋದಿ ವಿದ್ಯಾರ್ಹತೆ ಬಗ್ಗೆ ದೆಹಲಿಯ ಮಾಜಿ ಡಿಸಿಎಂ ಮನೀಶ್​ ಸಿಸೋಡಿಯಾ ಜೈಲಿನಿಂದ ಪತ್ರ ಬರೆದು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

Etv Bharat
Etv Bharat

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಮತ್ತು ಪದವಿ ಪ್ರಮಾಣಪತ್ರಗಳ ಕುರಿತು ಆಮ್ ಆದ್ಮಿ ಪಕ್ಷ ತನ್ನ ವಾಗ್ದಾಳಿ ಮುಂದುವರೆಸಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕರಾದ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಹಲವು ಬಾರಿ ಪ್ರಧಾನಿ ಮೋದಿಯನ್ನು ಅನಕ್ಷರಸ್ಥ ಎಂದು ಕರೆದು ನೇರವಾಗಿ ಟೀಕಾ ಪ್ರಹಾರ ಮಾಡಿದ್ದಾರೆ. ಇದೀಗ ಮಾಜಿ ಉಪ ಮುಖ್ಯಮಂತ್ರಿ, ಶಿಕ್ಷಣ ಸಚಿವ ಮನೀಶ್​ ಸಿಸೋಡಿಯಾ ಜೈಲಿನಿಂದಲೇ ಮೋದಿ ಶಿಕ್ಷಣ ಬಗ್ಗೆ ಪತ್ರ ಬರೆದಿದ್ದಾರೆ.

  • मनीष सिसोदिया ने जेल से देश के नाम चिट्ठी लिखी -
    प्रधानमंत्री का कम पढ़ा-लिखा होना देश के लिए बेहद ख़तरनाक

    मोदी जी विज्ञान की बातें नहीं समझते

    मोदी जी शिक्षा का महत्व नहीं समझते

    पिछले कुछ वर्षों में 60,000 स्कूल बंद किए

    भारत की तरक़्क़ी के लिए पढ़ा-लिखा पीएम होना ज़रूरी pic.twitter.com/VpPyY1Jr2v

    — Arvind Kejriwal (@ArvindKejriwal) April 7, 2023 " class="align-text-top noRightClick twitterSection" data=" ">

ದೆಹಲಿಯ ನೂತನ ಮದ್ಯ ನೀತಿ ಹಗರಣದಲ್ಲಿ ಮನೀಶ್ ಸಿಸೋಡಿಯಾ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಅಲ್ಲಿಂದಲೇ ಪ್ರಧಾನಿ ಶೈಕ್ಷಣಿಕ ಅರ್ಹತೆ ಕುರಿತು ಬಹಿರಂಗ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಶುಕ್ರವಾರ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೋದಿಜಿಗೆ ಶಿಕ್ಷಣದ ಮಹತ್ವ ಅರ್ಥವಾಗುತ್ತಿಲ್ಲ. ಭಾರತದ ಪ್ರಗತಿಗೆ ವಿದ್ಯಾವಂತ ಪ್ರಧಾನಿ ಇರುವುದು ಅಗತ್ಯ ಎಂದು ಸಿಸೋಡಿಯಾ ಕುಟುಕಿದ್ದಾರೆ.

60 ಸಾವಿರ ಸರ್ಕಾರಿ ಶಾಲೆಗಳು ಬಂದ್- ಸಿಸೋಡಿಯಾ: ಪ್ರಧಾನಿ ಮೋದಿ ವಿದ್ಯಾರ್ಹತೆ ಜೊತೆಗೆ ದೆಹಲಿಯ ಮಾಜಿ ಡಿಸಿಎಂ, ಹಲವು ಪ್ರಶ್ನೆಗಳನ್ನೂ ಎತ್ತಿದ್ದಾರೆ. ''ಮನೀಶ್ ಸಿಸೋಡಿಯಾ ಜೈಲಿನಿಂದ ದೇಶಕ್ಕೆ ಪತ್ರ ಬರೆದಿದ್ದಾರೆ. ಪ್ರಧಾನಿ ಕಡಿಮೆ ಶಿಕ್ಷಣ ಪಡೆದಿರುವುದು ದೇಶಕ್ಕೆ ತುಂಬಾ ಅಪಾಯಕಾರಿ. ಮೋದಿಗೆ ವಿಜ್ಞಾನ ಮತ್ತು ಶಿಕ್ಷಣದ ಮಹತ್ವ ಅರ್ಥವಾಗುತ್ತಿಲ್ಲ. ಕಳೆದ ಕೆಲವು ವರ್ಷಗಳಲ್ಲಿ 60,000 ಶಾಲೆಗಳನ್ನು ಮುಚ್ಚಲಾಗಿದೆ'' ಎಂದು ಸಿಸೋಡಿಯಾ ಬರೆದ ಪತ್ರವನ್ನು ಹಂಚಿಕೊಂಡಿರುವ ಕೇಜ್ರಿವಾಲ್ ಟ್ವೀಟ್​ ಮಾಡಿದ್ದಾರೆ.

ಸಿಸೋಡಿಯಾ ಪತ್ರದ ಸಾರಾಂಶ... ಇಂದು ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ. ಇಡೀ ಜಗತ್ತು ಕೃತಕ ಬುದ್ಧಿಮತ್ತೆ (AI-Artificial Intelligence) ಬಗ್ಗೆ ಮಾತನಾಡುತ್ತಿದೆ. ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ನಿತ್ಯ ಪ್ರಪಂಚದಾದ್ಯಂತ ನಡೆಯುತ್ತಿವೆ. ಆದರೆ, ಮೋಡಗಳ ಹಿಂದೆ ಹಾರುವ ವಿಮಾನವನ್ನು ರಾಡಾರ್ ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿ ಪ್ರಧಾನಿ, ಇಡೀ ವಿಶ್ವದ ಜನರ ಮುಂದೆ ನಗೆಪಾಟಲಿಗೀಡಾಗಿದ್ದರು. ಶಾಲಾ, ಕಾಲೇಜಿನಲ್ಲಿ ಓದುವ ಮಕ್ಕಳು ಕೂಡ ಅವರನ್ನೂ ಗೇಲಿ ಮಾಡುತ್ತಿದ್ದಾರೆ ಎಂದು ಸಿಸೋಡಿಯಾ ಪತ್ರದ ಮೂಲಕ ಕಿಡಿಕಾರಿದ್ದಾರೆ.

ಚರಂಡಿಯಲ್ಲಿ ಹರಿಯುವ ಕೊಳಕು ಅನಿಲವನ್ನು ಚಹಾ ಅಥವಾ ಆಹಾರವನ್ನು ತಯಾರಿಸಲು ಬಳಸಬಹುದು ಎಂದು ಪ್ರಧಾನಿ ಹೇಳುವುದನ್ನು ಕೇಳಿದಾಗ, ನನ್ನ ಹೃದಯವೇ ಒಡೆದು ಹೋಗಿತ್ತು. ಮೋದಿ ಅವರ ಇಂತಹ ಹೇಳಿಕೆಗಳು ದೇಶಕ್ಕೆ ಅತ್ಯಂತ ಅಪಾಯಕಾರಿ. ಅಲ್ಲದೇ, ಇಂತಹ ಹೇಳಿಕೆಗಳ ಮೂಲಕ ಭಾರತದ ಪ್ರಧಾನಿ ಜಗತ್ತಿಗೆ ಕಡಿಮೆ ವಿದ್ಯಾವಂತ ಮತ್ತು ವಿಜ್ಞಾನದ ಬಗ್ಗೆ ಮೂಲಭೂತ ಜ್ಞಾನದ ಕೊರತೆಯನ್ನು ಹೊಂದಿದ್ದಾರೆ ತೋರಿಸಿಕೊಟ್ಟರು ಎಂದು ಕುಟುಕಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಪದವಿ ಮಾಹಿತಿ ನೀಡಲು ಹೇಳಿದ್ದ ಆದೇಶ ರದ್ದು: ಕೇಜ್ರಿವಾಲ್​ಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್​

ಇಂದಿನ ದೇಶದ ಯುವಕರು ಏನಾದರೂ ಮಾಡಬೇಕೆಂದು ಬಯಸುತ್ತಿದ್ದಾರೆ ಮತ್ತು ಅವಕಾಶಗಳಿಗಾಗಿ ಹುಡುಕುತ್ತಿದ್ದಾರೆ. ಯುವಕರು ಜಗತ್ತನ್ನು ಗೆಲ್ಲಲು ಬಯಸುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತಗಳನ್ನು ಮಾಡಲು ಎದುರು ನೋಡುತ್ತಿದ್ದಾರೆ. ಕಡಿಮೆ ವಿದ್ಯಾವಂತ ಪ್ರಧಾನಿಗೆ ಇಂದಿನ ಯುವಕರ ಕನಸುಗಳನ್ನು ನನಸು ಮಾಡುವ ಸಾಮರ್ಥ್ಯವಿದೆಯೇ?, ಮೋದಿಗೆ ವಿಜ್ಞಾನ ಮತ್ತು ಶಿಕ್ಷಣದ ಮಹತ್ವ ಅರ್ಥವಾಗುತ್ತಿಲ್ಲ ಎಂದೂ ಸಿಸೋಡಿಯಾ ಪ್ರಶ್ನಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ದೇಶದಾದ್ಯಂತ 60,000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ, ಏಕೆ?, ಒಂದೆಡೆ ದೇಶದ ಜನಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಹೆಚ್ಚಾಗಬೇಕಿತ್ತು ಅಲ್ವೇ?. ಆದರೆ, ದೇಶಾದ್ಯಂತ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಇದು ಶಿಕ್ಷಣವು ಸರ್ಕಾರದ ಆದ್ಯತೆಯಲ್ಲ ಎಂಬುದನ್ನು ತೋರಿಸುತ್ತದೆ ಎಂದು ದೂರಿದ್ದಾರೆ.

ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡದಿದ್ದರೆ ಭಾರತ ಪ್ರಗತಿ ಹೊಂದಬಹುದೇ?, ಎಂದಿಗೂ ಇಲ್ಲ. ಪ್ರಧಾನಿ ಮೋದಿಯವರ ವಿಡಿಯೋವೊಂದನ್ನು ನಾನು ನೋಡಿದ್ದೆ. ಅದರಲ್ಲಿ ತಾವು ವಿದ್ಯಾವಂತರಲ್ಲ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಅವರು ಹಳ್ಳಿಯ ಶಾಲೆಯವರೆಗೆ ಮಾತ್ರ ಶಿಕ್ಷಣ ಪಡೆದರು. ಅನಕ್ಷರಸ್ಥ ಅಥವಾ ಕಡಿಮೆ ಶಿಕ್ಷಣ ಪಡೆದಿರುವುದು ಹೆಮ್ಮೆಯ ವಿಷಯವೇ?. ನಿಮ್ಮ ಸಣ್ಣ ಕಂಪನಿಗೆ ಮ್ಯಾನೇಜರ್ ಇರಿಸಿಕೊಳ್ಳಲು ಸಹ ನೀವು ವಿದ್ಯಾವಂತ ವ್ಯಕ್ತಿಯನ್ನು ಹುಡುಕುತ್ತೀರಿ. ದೇಶದ ದೊಡ್ಡ ಮ್ಯಾನೇಜರ್ ಶಿಕ್ಷಣ ಪಡೆಯಬೇಕಲ್ಲವೇ ಅಂತಾ ಸಿಸೋಡಿಯಾ ಪ್ರಶ್ನೆಗಳು ಎತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.