ETV Bharat / bharat

PubG ಗೇಮ್​ ಸಹವಾಸ: ಮದ್ಯ ಮಿಶ್ರಿತ ಕೂಲ್ ಡ್ರಿಂಕ್ಸ್​ ಕೊಟ್ಟು ವಿವಾಹಿತ ಮಹಿಳೆ ಮೇಲೆ ರೇಪ್.. ನಗ್ನ ವಿಡಿಯೋ ಇಟ್ಟುಕೊಂಡು ಬೆದರಿಕೆ

author img

By

Published : Aug 3, 2023, 9:53 PM IST

ಕೂಲ್ ಡ್ರಿಂಕ್ಸ್​ನಲ್ಲಿ ಮದ್ಯ ಬೆರೆಸಿ ಅತ್ಯಾಚಾರ ಎಸಗಿದ ನಗ್ನ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡು ಬೆದರಿಕೆ ಹಾಕಿದ ಕಾರಣ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಆಂಧ್ರಪ್ರದೇಶದಲ್ಲಿ ನಡೆದಿದೆ.

man rapes woman who met in a PubG by threatening with nude videos in hyderabad
PubG ಗೇಮ್​ನಲ್ಲಿ ಪರಿಚಯ: ಮದ್ಯ ಮಿಶ್ರಿತ ಕೂಲ್ ಡ್ರಿಂಕ್ಸ್​ ಕೊಟ್ಟು ವಿವಾಹಿತ ಮಹಿಳೆ ಮೇಲೆ ರೇಪ್... ನಗ್ನ ವಿಡಿಯೋ ಇಟ್ಟುಕೊಂಡು ಬೆದರಿಕೆ

ಹೈದರಾಬಾದ್ (ತೆಲಂಗಾಣ): ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಮಹಿಳೆಯರು ತಮ್ಮ ಪ್ರೇಮಿಗಾಗಿ ದೇಶದ ಗಡಿ ದಾಟಿದ ಸುದ್ದಿಗಳು ವರದಿಯಾಗುತ್ತಿದೆ. ಆದರೆ, ಆನ್‌ಲೈನ್ ಗೇಮ್​ ಮೂಲಕ ಪರಿಚಯವಾದ ಯುವಕನ ಕಾರಣದಿಂದ ಆಂಧ್ರ ಪ್ರದೇಶದ ಮಹಿಳೆಯೊಬ್ಬಳು ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾಳೆ. ಕೂಲ್ ಡ್ರಿಂಕ್ಸ್​ನಲ್ಲಿ ಮದ್ಯ ಬೆರೆಸಿ ಅತ್ಯಾಚಾರ ಎಸಗಿದ ಯುವಕ, ಈ ಕೃತ್ಯವನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ವಿವಾಹಿತ ಮಹಿಳೆ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಪಬ್‌ಜಿ ಗೇಮ್​ ಮೂಲಕ ಸಮೀಪದ ಹಳ್ಳಿಯ ನಿವಾಸಿ ಕುಮಾರ್ ನರಸಿಂಹಮೂರ್ತಿ ಎಂಬ ಯುವಕನ ಸಂಪರ್ಕಕ್ಕೆ ಬಂದಿದ್ದಳು. 2020ರಲ್ಲಿ ಜೂನ್​ನಲ್ಲಿ ಮದುವೆಯಾಗಿದ್ದ ಈ ಮಹಿಳೆ, ಇದರ ನಂತರವೂ ಪಬ್​ಜಿನಲ್ಲಿ ಪರಿಚಯವಾದ ನರಸಿಂಹಮೂರ್ತಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು.

ಈ ನರಸಿಂಹಮೂರ್ತಿ ಪ್ರೀತಿಸುತ್ತಿರುವುದಾಗಿ ಈ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಇದೇ ವಿಷಯವಾಗಿ ಪದೇ ಪದೇ ಮೆಸೇಜ್, ಕರೆ ಮಾಡಿದ್ದರಿಂದ ಪತಿಗೆ ವಿಷಯ ಗೊತ್ತಾಗಿದೆ. ಇದೇ ಕಾರಣಕ್ಕೆ ಪತಿ ಮತ್ತು ಪತ್ನಿಯ ನಡುವೆ ಜಗಳ ಶುರುವಾಗಿದೆ. ಕ್ರಮೇಣ ಆ ಜಗಳದಿಂದ ಪತಿಯಿಂದ ದೂರವಾಗಿದ್ದಾಳೆ. ನಂತರ ತನಗೆ ಕೆಲಸ ಕೊಡಿಸುವಂತೆ ಹೈದರಾಬಾದ್‌ನಲ್ಲಿರುವ ತನ್ನ ಸ್ನೇಹಿತರ ಬಳಿ ಬಂದಿದ್ದರು. ಮತ್ತೊಂದೆಡೆ, ನರಸಿಂಹಮೂರ್ತಿ ಕೂಡ ಹೈದರಾಬಾದ್​ಗೆ ಬಂದಿದ್ದಾನೆ. ಇದರ ಬಳಿಕ ಇಬ್ಬರು ಕೂಡ ಹಲವು ಬಾರಿ ಭೇಟಿಯಾಗಿದ್ದಾರೆ.

ಇದರ ನಡುವೆ ನರಸಿಂಹಮೂರ್ತಿ ವರ್ತನೆಯಿಂದ ಭಯ ಬಿದ್ದ ಮಹಿಳೆಯ ಕೊಠಡಿಯಲ್ಲಿ ಉಳಿಯುವುದು ಸುರಕ್ಷಿತವಲ್ಲ ಎಂದು ಅಮೀರ್ ಪೇಟೆಯ ಹಾಸ್ಟೆಲ್​ವೊಂದಕ್ಕೆ ಸ್ಥಳಾಂತರಗೊಂಡಿದ್ದಾಳೆ. ಇದನ್ನು ಅರಿತ ನರಸಿಂಹಮೂರ್ತಿ ಸಹ ಆಕೆ ತಂಗಿದ್ದ ಸಮೀಪದಲ್ಲೇ ಇನ್ನೊಂದು ಹಾಸ್ಟೆಲ್​ ಸೇರಿಕೊಂಡಿದ್ದಾನೆ. ಕೊನೆಗೆ ಗಂಡನನ್ನು ಸಂಪೂರ್ಣವಾಗಿ ಬಿಟ್ಟು ಬಿಟ್ಟರೆ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ.

ನಂತರ ನರಸಿಂಹಮೂರ್ತಿ ಜವಾಹರ್ ನಗರದಲ್ಲಿ ರೂಂ ಬಾಡಿಗೆ ಮಾಡಿದ್ದಾನೆ. ಈತನನ್ನು ಬಲವಾಗಿ ನಂಬಿದ ಮಹಿಳೆ ಸಹ ಅದೇ ರೂಮ್​ಗೆ ಹೋಗಿದ್ದಾಳೆ. ಇದರ ನಡುವೆ ಆಕೆಗೆ ಮದ್ಯ ಮಿಶ್ರಿತ ಕೂಲ್ ಡ್ರಿಂಕ್ಸ್​ ನೀಡಿದ್ದಾನೆ. ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ, ಆಕೆಯ ನಗ್ನ ವಿಡಿಯೋ ಹಾಗೂ ಫೋಟೋ ತೆಗೆದುಕೊಂಡಿದ್ದಾನೆ. ಬಳಿಕ ಸಂತ್ರಸ್ತೆಯನ್ನು ಬೆದರಿಸಿ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ. ಹೀಗಾಗಿ ಇದರಿಂದ ಏನು ಮಾಡಬೇಕೆಂದು ತೋಚದೆ ಸ್ವಗ್ರಾಮಕ್ಕೆ ತೆರಳಿದ ಮಹಿಳೆ ಸಮೀಪದ ಬಸ್ ನಿಲ್ದಾಣದ ಬಳಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹೈದರಾಬಾದ್ ಮಧುರಾನಗರ ಪೊಲೀಸ್ ಠಾಣೆಗೆ ತನಿಖೆಗಾಗಿ ವರ್ಗಾಯಿಸಲಾಗಿದೆ. ಸದ್ಯ ಮಧುರಾನಗರ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು, ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಅಮೆರಿಕದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಇಬ್ಬರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.