ETV Bharat / bharat

ತನ್ನೊಂದಿಗೆ ಲಿವಿಂಗ್​ ಟು ಗೆದರ್​ನಲ್ಲಿದ್ದ ಗೆಳತಿ ಹತ್ಯೆ ಮಾಡಿದ ವ್ಯಕ್ತಿಯ ಬಂಧನ

author img

By PTI

Published : Dec 14, 2023, 2:55 PM IST

ತನ್ನೊಂದಿಗೆ ಲಿವಿಂಗ್​ ಟು ಗೆದರ್​ನಲ್ಲಿದ್ದ ಗೆಳತಿಯನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ. ಆಕೆಯ ಮೃತದೇಹವನ್ನು ಒಳಗೆ ಇರಿಸಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Man kills live in partner
ತನ್ನೊಂದಿಗೆ ಲಿವಿಂಗ್​ ಟು ಗೆದರ್​ನಲ್ಲಿದ್ದ ಗೆಳತಿಯನ್ನು ಹತ್ಯೆಗೈದ ವ್ಯಕ್ತಿಯ ಬಂಧನ

ಇಂದೋರ್(ಮಧ್ಯಪ್ರದೇಶ): ತನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ನಿರಾಕರಿಸಿದ್ದಕ್ಕಾಗಿ 20 ವರ್ಷದ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಇಂದೋರ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ: ಇವರಿಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ದಿನ ಕಳೆದಂತೆ ಈ ಜೋಡಿಯ ಮಧ್ಯೆ ಸ್ನೇಹ ಬೆಳೆದಿತ್ತು. ನಂತರ, ನಗರದ ಬಾಡಿಗೆ ಮನೆ ಪಡೆದುಕೊಂಡು ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 7ರಂದು ರಾವ್ಜಿ ಬಜಾರ್ ಪ್ರದೇಶದಲ್ಲಿರುವ ಬಾಡಿಗೆ ಮನೆಯಲ್ಲಿ ತನ್ನ ಗೆಳತಿಯನ್ನು ಗೆಳೆಯನೊಬ್ಬ ಹತ್ಯೆ ಮಾಡಿದ್ದನು. ನಂತರ ಡಿಸೆಂಬರ್ 9ರಂದು ಪೊಲೀಸರು ಆಕೆಯ ಮೃತದೇಹವನ್ನು ವಶಪಡಿಸಿಕೊಂಡಿದ್ದರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಭಿನಯ್ ವಿಶ್ವಕರ್ಮ ಮಾಹಿತಿ ನೀಡಿದ್ದಾರೆ.

''ಆರೋಪಿ ಪ್ರವೀಣ್ ಸಿಂಗ್ ಧಾಕಡ್ (24) ಮೂಲತಃ ಗುಣಾ ಜಿಲ್ಲೆಯ ನಿವಾಸಿಯಾಗಿದ್ದು, ಸಂತ್ರಸ್ತೆ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸಿದಾಗ ಕೋಪಗೊಂಡು ಅವಳ ಕುತ್ತಿಗೆಗೆ ಕತ್ತರಿಯಿಂದ ಇರಿದಿದ್ದಾನೆ. ಕತ್ತರಿ ಇರಿತದಿಂದ ತೀವ್ರ ರಕ್ತಸ್ರಾವವಾಗಿರುವ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ'' ಎಂದು ಹೆಚ್ಚುವರಿ ಪೊಲೀಸ್​ ಉಪ ಆಯುಕ್ತರು ಮಾಹಿತಿ ಒದಗಿಸಿದ್ದಾರೆ.

''ಗಾಬರಿಗೊಂಡ ಆರೋಪಿ, ಆಕೆಯ ಮೃತ ದೇಹವನ್ನು ಮನೆಯೊಳಗೆ ಬಿಟ್ಟು, ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾರೆ. ತನ್ನ ಗೆಳತಿಯ ಮೊಬೈಲ್ ಫೋನ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾನೆ. ಕೊಲೆ ಬೆಳಕಿಗೆ ಬಂದ ನಂತರ, ಆರೋಪಿಯನ್ನು ಪತ್ತೆ ಮಾಡಿ, ಬಂಧಿಸಲಾಯಿತು'' ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಹಿಳಾ ಅಧಿಕಾರಿ ಕೊಲೆ ಪ್ರಕರಣ: ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಹಿರಿಯ ಉಪ ನಿರ್ದೇಶಕಿ ಪ್ರತಿಮಾ ಕೊಲೆ‌ ಪ್ರಕರಣ‌ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. "ಬಂಧಿತ ಆರೋಪಿ ಆಗಿರುವ ಕಿರಣ್, ಕಳೆದ‌ ನಾಲ್ಕು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನು. ವೃತ್ತಿಯಲ್ಲಿ ಅಶಿಸ್ತು ಮತ್ತು ದುರ್ವರ್ತನೆ ತೋರಿದ ಹಿನ್ನೆಲೆ ಎರಡು ತಿಂಗಳ ಹಿಂದೆ ಆತನನ್ನು ಕೆಲಸದಿಂದ ತೆಗೆಯಲಾಗಿತ್ತು. ಆದರೆ, ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕಿರಣ್​ ಮನವಿ ಮಾಡಿದ್ದನು. ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಪ್ರತಿಮಾ ಅವರನ್ನು ಮನೆಯಲ್ಲಿ ಹತ್ಯೆ ಮಾಡಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ" ಎಂದು ಬೆಂಗಳೂರು ನಗರ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರ್ ತಿಳಿಸಿದ್ದರು.

ಇದನ್ನೂ ಓದಿ: ಭ್ರೂಣ ಹತ್ಯೆ ಕೇಸ್​: ಆರೋಗ್ಯಾಧಿಕಾರಿಗಳ ತನಿಖೆ ವೇಳೆ ಹೊಸಕೋಟೆಯ ಆಸ್ಪತ್ರೆಯಲ್ಲಿ ಭ್ರೂಣ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.