ETV Bharat / bharat

ಲಾಕ್​ಡೌನ್​​ನಲ್ಲಿ ದಾಖಲಾದ ಪೊಲೀಸ್​ ಕೇಸ್​ಗಳ ವಾಪಸ್​ಗೆ 'ಮಹಾ' ನಿರ್ಧಾರ

author img

By

Published : Mar 29, 2022, 7:10 PM IST

ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಸಂಬಂಧದಲ್ಲಿ ಐಪಿಸಿ 188ರಡಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ವಿರುದ್ಧದ ದಾಖಲಿಸಿ ಪ್ರಕರಣಗಳ ವಾಪಸಾತಿಗೆ ಗೃಹ ಇಲಾಖೆಯ ತೀರ್ಮಾನಿಸಿದೆ ಎಂದು ಗೃಹ ಸಚಿವ ದಿಲೀಪ್​ ವಾಲ್ಸೆ ಹೇಳಿದ್ದಾರೆ.

ಕೋವಿಡ್​ ಲಾಕ್​ಡೌನ್ ಉಲ್ಲಂಘನೆ
COVID lockdown violation

ಮುಂಬೈ(ಮಹಾರಾಷ್ಟ್ರ): ಕೋವಿಡ್​ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಜಾರಿ ಮಾಡಲಾಗಿದ್ದ ಲಾಕ್​ಡೌನ್​ ಉಲ್ಲಂಘನೆಗೆ ಸಂಬಂಧಿಸಿದ ಎಲ್ಲ ಪೊಲೀಸ್​ ಪ್ರಕರಣಗಳನ್ನೂ ಹಿಂಪಡೆಯಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಖುದ್ದು ರಾಜ್ಯದ ಗೃಹ ಸಚಿವ ದಿಲೀಪ್​ ವಾಲ್ಸೆ ಪಾಟೀಲ್​ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಸಂಬಂಧದಲ್ಲಿ ಐಪಿಸಿ 188ರಡಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ವಿರುದ್ಧದ ದಾಖಲಿಸಿ ಪ್ರಕರಣಗಳ ವಾಪಸಾತಿಗೆ ಗೃಹ ಇಲಾಖೆಯ ತೀರ್ಮಾನಿಸಿದೆ. ಈ ಬಗ್ಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದರೆ, ಎಲ್ಲ ಕೇಸ್​ಗಳ ಹಿಂಪಡೆಯುವ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ ಎಂದು ಗೃಹ ಸಚಿವ ವಾಲ್ಸೆ ತಿಳಿಸಿದ್ದಾರೆ.

ಮಹಾಮಾರಿ ಕೊರೊನಾ ಸೋಂಕು ನಿಯಂತ್ರಿಸಲು ಎಲ್ಲ ರಾಜ್ಯಗಳು ಲಾಕ್​ಡೌನ್ ಮೊರೆ ಹೋಗಿದ್ದವು. ಲಾಕ್​ಡೌನ್​ ನಡುವೆ ಜನತೆ ರಸ್ತೆಗಳಿಗೆ ಬಂದರೆ, ಅಂತಹವರು ವಿರುದ್ಧ ಲಾಕ್​ಡೌನ್​ ಉಲ್ಲಂಘನೆಗೆ ಆರೋಪದಡಿ ಪೊಲೀಸರು ಮುಲಾಜಿಲ್ಲದೇ ಕೇಸ್ ಹಾಕುತ್ತಿದ್ದರು. ಇದರಿಂದ ತುರ್ತು ಮತ್ತು ಅನಿವಾರ್ಯ ಕಾರಣಗಳಿಗೆ ಹೊರಗಡೆ ಬಂದರೂ ಸಹ ತೊಂದರೆ ಅನುಭವಿಸುವಂತೆ ಆಗಿತ್ತು. ಜತೆಗೆ ದಂಡವನ್ನೂ ತೆರುವಂತಾಗಿತ್ತು.

ಆದರೆ, ಇದೀಗ ದೇಶದಾದ್ಯಂತ ಕೋವಿಡ್​ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಸದ್ಯ ಕೇವಲ 954 ಸಕ್ರಿಯ ಪ್ರಕರಣಗಳು ಮಾತ್ರವೇ ಇವೆ. ಇತ್ತ, ದೇಶದಲ್ಲಿ ಕಳೆದ 24 ವರ್ಷಗಳಲ್ಲಿ 1,259 ಹೊಸ ಪ್ರಕರಣಗಳು ಮಾತ್ರ ದಾಖಲಾಗಿವೆ.

ಇದನ್ನೂ ಓದಿ: ತೈಲ ಬೆಲೆ ನಿಯಂತ್ರಣ ಸರ್ಕಾರಕ್ಕೆ ಸವಾಲು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.