ETV Bharat / bharat

ಉಪಹಾರದಲ್ಲಿ ಉಪ್ಪು ಹೆಚ್ಚಾಗಿದ್ದಕ್ಕೆ ಹೆಂಡ್ತಿಯನ್ನೇ ಕೊಲೆಗೈದ ಗಂಡ!

author img

By

Published : Apr 16, 2022, 3:22 PM IST

ಗಂಡ-ಹೆಂಡ್ತಿ ಥಾಣೆಯ ಭಾಯಂದರ್ ಟೌನ್​ಶಿಪ್​ನಲ್ಲಿ ವಾಸವಾಗಿದ್ದರು. ಈಗಾಗಲೇ ಆರೋಪಿಯನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಕಮಿಷನರೇಟ್​​ ತಿಳಿಸಿದೆ. ಮಹಿಳೆ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಐಪಿಸಿ ಸೆಕ್ಷನ್ 302 ಅಡಿ ದೂರು ದಾಖಲಾಗಿದೆ..

Man kills wife over excess salt in food
Man kills wife over excess salt in food

ಥಾಣೆ(ಮಹಾರಾಷ್ಟ್ರ): ಬೆಳಗಿನ ಉಪಹಾರದಲ್ಲಿ ಉಪ್ಪು ಹೆಚ್ಚಾಗಿದೆ ಎಂಬ ಕಾರಣದಿಂದ ವ್ಯಕ್ತಿಯೋರ್ವ ಕಟ್ಟಿಕೊಂಡ ಹೆಂಡ್ತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಥಾಣೆಯ ಭಾಯಂದರ್ ಟೌನ್​ಶಿಪ್​ನಲ್ಲಿ ಈ ಪ್ರಕರಣ ನಡೆದಿದೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.

46 ವರ್ಷದ ನಿಲೇಶ್ ಘಾಘ್ ಎಂಬಾತ ಈ ಕೊಲೆ ಮಾಡಿದ್ದು, 40 ವರ್ಷದ ಪತ್ನಿ ನಿರ್ಮಲಾ ಕೊಲೆಯಾಗಿದ್ದಾಳೆ. ಇಂದು ಬೆಳಗ್ಗೆ ಉಪಹಾರಕ್ಕಾಗಿ ನಿರ್ಮಲಾ ಖಿಚಡಿ ತಯಾರಿಸಿದ್ದಳು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಇತ್ತು. ಈ ವಿಚಾರಕ್ಕಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಆಕ್ರೋಶಗೊಂಡಿರುವ ನಿಲೇಶ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಬೆಳಗಿನ ಉಪಹಾರ ನೀಡಲಿಲ್ಲ ಎಂದು ಸೊಸೆಯನ್ನೇ ಗುಂಡಿಕ್ಕಿ ಕೊಂದ ಮಾವ!

ಗಂಡ-ಹೆಂಡ್ತಿ ಥಾಣೆಯ ಭಾಯಂದರ್ ಟೌನ್​ಶಿಪ್​ನಲ್ಲಿ ವಾಸವಾಗಿದ್ದರು. ಈಗಾಗಲೇ ಆರೋಪಿಯನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಕಮಿಷನರೇಟ್​​ ತಿಳಿಸಿದೆ. ಮಹಿಳೆ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಐಪಿಸಿ ಸೆಕ್ಷನ್ 302 ಅಡಿ ದೂರು ದಾಖಲಾಗಿದೆ. ನಿನ್ನೆಯಷ್ಟೇ ಚಹಾದ ಜೊತೆಗೆ ಉಪಹಾರ ನೀಡಲಿಲ್ಲ ಎಂಬ ಕಾರಣಕ್ಕಾಗಿ ಕೋಪಗೊಂಡ ವ್ಯಕ್ತಿಯೋರ್ವ ತನ್ನ ಸೊಸೆಯನ್ನೇ ಗುಂಡಿಕ್ಕಿ ಕೊಲೆ ಮಾಡಿದ್ದ ಘಟನೆ ಮಹಾರಾಷ್ಟ್ರ ರಾಬೋಡಿಯಲ್ಲಿ ನಡೆದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.