ETV Bharat / bharat

ಫ್ಲಾಟ್​ನಲ್ಲಿ ಟ್ರೈನಿ ಗಗನಸಖಿ ಶವವಾಗಿ ಪತ್ತೆ.. ಕೊಲೆ ಆರೋಪಿ ಅರೆಸ್ಟ್​

author img

By ETV Bharat Karnataka Team

Published : Sep 5, 2023, 8:04 AM IST

Trainee air hostess found dead in Mumbai flat: ಮುಂಬೈನ ಮರೋಲ್ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರಾಯಪುರ ಮೂಲದ 23 ವರ್ಷದ ಟ್ರೈನಿ ಗಗನಸಖಿಯ ಶವ ಪತ್ತೆಯಾಗಿದೆ. ಮೃತ ಗಗನಸಖಿಯ ಹೆಸರು ರೂಪಲ್ ಆಗಿದೆ. ಘಟನೆಯಿಂದ ಈ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

Trainee air hostess found dead in Mumbai flat
ಮುಂಬೈನ ಟ್ರೈನಿ ಗಗನಸಖಿ ಶವ ಪತ್ತೆ ಹಿನ್ನೆಲೆ, ಕೊಲೆ ಪ್ರಕರಣ ದಾಖಲು: ಆರೋಪಿಯ ಬಂಧನ

ಮುಂಬೈ (ಮಹಾರಾಷ್ಟ್ರ): ಮುಂಬೈನ ಪೊವೈ ಪೊಲೀಸ್ ಠಾಣೆ ವ್ಯಾಪ್ತಿಯ ಮರೋಲ್‌ನಲ್ಲಿರುವ ಫ್ಲಾಟ್​ನಲ್ಲಿ 24 ವರ್ಷದ ಗಗನಸಖಿಯ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಈ ಸಂಬಂಧ ಪೊವೈ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊವೈ ಪೊಲೀಸರು ಕೇವಲ ಎಂಟು ಗಂಟೆಗಳಲ್ಲಿ ಆರೋಪಿಯನ್ನು ಪೊವೈ ತುಂಗಾ ಪ್ರದೇಶದಲ್ಲಿ ಬಂಧಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ದತ್ತಾ ನಲವ್ಡೆ ಈಟಿವಿ ಭಾರತ​ಕ್ಕೆ ತಿಳಿಸಿದ್ದಾರೆ. ವಿಕ್ರಮ್ ಅಥ್ವಾಲ್ (40) ಬಂಧಿತ ಆರೋಪಿ.

ರೂಪಲ್ ಮೇಲೆ ಆರೋಪಿಯ ಕೆಟ್ಟ ಕಣ್ಣು: ಆರೋಪಿ ವಿಕ್ರಂ ಅಥ್ವಾಲ್ ಮನೆಗೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ತಿಳಿದಿದೆ. ಕಳೆದ ಹಲವು ದಿನಗಳಿಂದ ರೂಪಾಲ್ ಮೇಲೆ ಕೆಟ್ಟ ದೃಷ್ಟಿ ಬಿದ್ದಿತ್ತು. ರೂಪಾಲಿ ತನ್ನ ಸಹೋದರಿ ಮತ್ತು ತನ್ನ ಸಹೋದರಿಯ ಸ್ನೇಹಿತೆಯೊಂದಿಗೆ ಒಂದೇ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಆದರೆ, ರೂಪಲ್ ನಿನ್ನೆ ಮನೆಯಲ್ಲಿ ಒಬ್ಬಳೇ ಇದ್ದಾಗ, ಆಕೆಯನ್ನು ಕೊಲೆ ಮಾಡಲಾಗಿದೆಯೇ ಎಂಬ ಶಂಕೆಯೊಂದಿಗೆ ಪೊವೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಯುವತಿ ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಂದಿಲ್ಲ. ಆದ್ದರಿಂದ, ಉಪ ಪೊಲೀಸ್ ಆಯುಕ್ತ ದತ್ತಾ ನಲವ್ಡೆ ಅವರು, ಲೈಂಗಿಕ ಕಿರುಕುಳ ಅಥವಾ ಆಕೆಯನ್ನು ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಮೃತ ಯುವತಿಯ ಪೋಷಕರು ಛತ್ತೀಸ್‌ಗಢದಿಂದ ಮುಂಬೈಗೆ ಬಂದಿದ್ದು, ಆಕೆಯ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ, ಕಾರಣ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.

ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಶವ ಪತ್ತೆ: ಪೊವೈ ಪೊಲೀಸರ ಪ್ರಕಾರ, 24 ವರ್ಷದ ಯುವತಿಯೊಬ್ಬಳ ಶವ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಮರೋಲ್ ಪ್ರದೇಶದಲ್ಲಿ ಯುವತಿ ವಾಸಿಸುತ್ತಿದ್ದಳು. ಯುವತಿಯ ಪೋಷಕರು ಮೊಬೈಲ್‌ಗೆ ಕರೆ ಮಾಡುವ ಮೂಲಕ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ, ಅವಳು ಫೋನ್ ಎತ್ತಲಿಲ್ಲ. ಆ ವೇಳೆ ಪೋಷಕರು ರೂಪಾಲ್​ ಸ್ನೇಹಿತೆಗೆ ಕರೆ ಮಾಡಿ ರೂಪಾಲ್ ಬಗ್ಗೆ ವಿಚಾರಿಸುವಂತೆ ತಿಳಿಸಿದ್ದಾರೆ. ಆ ಸಮಯದಲ್ಲಿ ರೂಪಲ್‌ನ ಸ್ನೇಹಿತ ಅವಳ ಫ್ಲಾಟ್‌ಗೆ ತೆರಳಿದ್ದಾನೆ. ಬೆಲ್​ ಬಾರಿಸಿದರೂ ರೂಪಲ್ ಬಾಗಿಲು ತೆರೆಯಲಿಲ್ಲ. ರೂಪಲ್ ಅವರ ಫ್ಲಾಟ್‌ಗೆ ಒಳಗಿನಿಂದ ಬೀಗ ಹಾಕಲಾಗಿದ್ದು, ಬಾಗಿಲು ಒಡೆದು ಒಳಗೆ ಪ್ರವೇಶಿಸಿದ ಬಳಿಕ, ರೂಪಾಲ್ ಶವ ಪತ್ತೆಯಾಗಿದೆ. ಪೊವೈ ಪೊಲೀಸರು ಮತ್ತು ಅಪರಾಧ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು.

ಸಿಸಿಟಿವಿ ದೃಶ್ಯಾವಳಿ, ಯುವತಿಯ ಫೋನ್ ಪರಿಶೀಲನೆ: ಹೆಚ್ಚಿನ ತನಿಖೆ ಮತ್ತು ಮಾಹಿತಿಗಾಗಿ ಪೊಲೀಸರು ಮೃತ ಯುವತಿಯ ಸಿಸಿಟಿವಿ ದೃಶ್ಯಾವಳಿ ಮತ್ತು ಫೋನ್ ಪರಿಶೀಲಿಸುತ್ತಿದ್ದಾರೆ. ಪೊಲೀಸ್ ಉಪ ಕಮಿಷನರ್ ದತ್ತಾ ನಲವ್ಡೆ ಪ್ರಕಾರ, ಪೊವೈನ ಮಾರ್ವಾ ರಸ್ತೆಯಲ್ಲಿರುವ ಎನ್‌ಜಿ ಹೌಸಿಂಗ್ ಸೊಸೈಟಿಯಲ್ಲಿ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪೊಲೀಸ್ ತನಿಖೆ ಆರಂಭ: ಯುವತಿಯ ಶವ ಪತ್ತೆಯಾಗಿರುವ ಹಿನ್ನೆಲೆ, ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರೂಪಾಲಿ ತನ್ನ ಸಹೋದರಿ ಮತ್ತು ತನ್ನ ಸಹೋದರಿಯ ಸ್ನೇಹಿತೆಯೊಂದಿಗೆ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿದ್ದಾರೆ. ಆದರೆ, ಪೊಲೀಸರು ಅವರನ್ನು ಸಂಪರ್ಕಿಸಿದಾಗ ಅವರಿಬ್ಬರೂ ಮುಂಬೈನಿಂದ ಹೊರಗಿದ್ದಾರೆ ಎಂದು ಮಾಹಿತಿ ನೀಡಿದರು. ರೂಪಾಲ್​ಳ​ನ್ನು ಕತ್ತು ಸೀಳಿ ಕೊಂದ ಆರೋಪಿ ಯಾರು ಮತ್ತು ನಿಖರ ಕಾರಣ ಏನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹಳೆ ವೈಷಮ್ಯ ಹಿನ್ನೆಲೆ; ತಮಿಳುನಾಡು ಮೂಲದ ವ್ಯಕ್ತಿ ​ಮೇಲೆ ಟೀ ಕುಡಿಯುತ್ತಿರುವಾಗಲೇ ಮಾರಕಾಸ್ತ್ರಗಳಿಂದ ಅಟ್ಯಾಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.