ETV Bharat / bharat

60 ಅಧಿಕಾರಿಗಳು ಸೇರಿದಂತೆ 370 ಪೊಲೀಸ್​ ಸಿಬ್ಬಂದಿಗೆ ಕೊರೊನಾ ಸಂಕಟ.. ಮುಂಬೈ ಇಲಾಖೆಯಲ್ಲೇ ದಾಖಲೆ ಸಾವು!

author img

By

Published : Jan 13, 2022, 11:08 AM IST

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು ಅಧಿಕಾರಿಗಳು ಸೇರಿ 370 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Mumbai police tested positive  police personnel tested positive in Maharashtra  Maharashtra police corona news  Maharashtra covid report  ಮುಬೈ ಪೊಲೀಸರಿಗೆ ಕೊರೊನಾ ದೃಢ  ಮಹಾರಾಷ್ಟ್ರ ಪೊಲೀಸರಿಗೆ ಕೊರೊನಾ ದೃಢ  ಮಹಾರಾಷ್ಟ್ರ ಪೊಲೀಸ್​ ಕೊರೊನಾ ಸುದ್ದಿ  ಮಹಾರಾಷ್ಟ್ರ ಕೋವಿಡ್​ ವರದಿ
60 ಅಧಿಕಾರಿಗಳು ಸೇರಿದಂತೆ 370 ಪೊಲೀಸ್​ ಸಿಬ್ಬಂದಿಗೆ ವಕ್ಕರಿಸಿದ ಕೊರೊನಾ

ಮುಂಬೈ: ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಕನಿಷ್ಠ 370 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ಸಂಜೆ ತಿಳಿಸಿದ್ದಾರೆ.

ಸೋಂಕಿತರಲ್ಲಿ 60 ಅಧಿಕಾರಿಗಳು ಮತ್ತು 310 ಕಾನ್ಸ್​​​ಟೇಬಲ್‌ಗಳು ಸೇರಿದ್ದಾರೆ. ಪ್ರಸ್ತುತ ರಾಜ್ಯಾದ್ಯಂತ ಒಟ್ಟು 504 ಅಧಿಕಾರಿಗಳು ಮತ್ತು 1,678 ಕಾನ್​​ಸ್ಟೇಬಲ್‌ಗಳು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಓದಿ: ಡಿಕೆಶಿ ಗುಂಡಾಗಿರಿಗೆ, ಉಢಾಪೆಗೆ ಸರ್ಕಾರ ಎಂದೂ ಕೂಡ ಜಗ್ಗಲ್ಲ: ಕಾಂಗ್ರೆಸ್​ ಪಾದಯಾತ್ರೆ ವಿರುದ್ಧ ಸಿಪಿವೈ ಆಕ್ರೋಶ

ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಮಹಾರಾಷ್ಟ್ರ ಪೊಲೀಸ್‌ನ ಒಟ್ಟು 48,611 ಸಿಬ್ಬಂದಿ (6,204 ಅಧಿಕಾರಿಗಳು ಮತ್ತು 42,407 ಕಾನ್ಸ್​​ಟೇಬಲ್‌ಗಳು) ವೈರಲ್ ಸೋಂಕಿಗೆ ಒಳಗಾಗಿದ್ದಾರೆ. ಇಲ್ಲಿಯವರೆಗೆ 265 ಪೊಲೀಸ್​ ಸಿಬ್ಬಂದಿ ಕೋವಿಡ್​ಗೆ ಪ್ರಾಣ ಕಳೆದುಕೊಂಡಿದ್ದಾರೆ. ಮುಂಬೈ ಪೊಲೀಸ್​ ಇಲಾಖೆಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿದ್ದು, ಮುಂಬೈನಲ್ಲಿ ಇದುವರೆಗೆ 126 ಪೊಲೀಸ್​ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 2,145 ಕೋವಿಡ್​ ಸಕ್ರಿಯ ಪ್ರಕರಣಗಳಿವೆ ಎಂದು ಮಹಾರಾಷ್ಟ್ರ ಪೊಲೀಸ್​​ ಇಲಾಖೆ ಹೇಳಿದೆ.

ಮಹಾರಾಷ್ಟ್ರದಲ್ಲಿ ಬುಧವಾರ 46,723 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಇದು ಹಿಂದಿನ ದಿನಕ್ಕಿಂತ ಶೇಕಡಾ 27 ಕ್ಕಿಂತ ಹೆಚ್ಚಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.