ETV Bharat / bharat

ಲುಧಿಯಾನಾ ಕೋರ್ಟ್​​ ಸ್ಫೋಟ ಪ್ರಕರಣ : ಆರೋಪಿ ಮನೆ ಮೇಲೆ ಎನ್​ಐಎ ರೇಡ್

author img

By

Published : Mar 30, 2022, 12:42 PM IST

ಲೂಧಿಯಾನಾ ಕೋರ್ಟ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಗಗನ್‌ದೀಪ್ ಸಿಂಗ್ ಹಳೆಯ ನಿವಾಸದ ಮೇಲೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ..

Ludhiana court bomb blast case: Police raid the house of the main accused
ಲುಧಿಯಾನಾ ಕೋರ್ಟ್​​ ಸ್ಫೋಟ ಪ್ರಕರಣ: ಆರೋಪಿ ಮನೆ ಮೇಲೆ ಎನ್​ಐಎ ರೇಡ್

ಖನ್ನಾ, ಪಂಜಾಬ್ : ಲೂಧಿಯಾನಾ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಗಗನ್‌ದೀಪ್ ಸಿಂಗ್ ಅವರ ನಿವಾಸದ ಮೇಲೆ ಎನ್‌ಐಎ ದಾಳಿ ನಡೆಯುತ್ತಿದ್ದು, ಎನ್​ಐಎ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಖನ್ನಾದ ಗುರುತೇಗ್ ಬಹದ್ದೂರ್ ನಗರದಲ್ಲಿರುವ ಗಗನ್​ದೀಪ್​ಸಿಂಗ್ ಅವರ ಹಳೆಯ ಮನೆಯ ಮೇಲೆ ದಾಳಿ ನಡೆದಿದ್ದು, ಮನೆಯ ಸಮೀಪ ಯಾರನ್ನೂ ಬಿಡುತ್ತಿಲ್ಲ ಮೂಲಗಳು ಮಾಹಿತಿ ನೀಡಿವೆ.

ಸಿಕ್ಕಿರುವ ಮಾಹಿತಿಯ ಪ್ರಕಾರ, ಗಗನ್‌ದೀಪ್ ಅವರು ಪ್ರೊಫೆಸರ್ ಕಾಲೋನಿಯಲ್ಲಿರುವ ಹೊಸ ಮನೆಗೆ ತೆರಳುವ ಮೊದಲು ಖನ್ನಾದಲ್ಲಿರುವ ಮನೆಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಅಂದಿನಿಂದ ಈ ಮನೆ ಕೆಲ ವರ್ಷಗಳಿಂದ ಮುಚ್ಚಿತ್ತು ಎನ್ನಲಾಗಿದೆ. ಎನ್‌ಐಎ ತಂಡದ ಈ ಹಠಾತ್ ದಾಳಿಯ ಮೂಲಕ ಹೊಸ ಸುಳಿವುಗಳು ಸಿಗಬಹುದು ಎಂದು ಹೇಳಲಾಗುತ್ತಿದೆ.

ಮನೆ ಹತ್ತಿರ ಯಾರನ್ನೂ ಬಿಡುತ್ತಿಲ್ಲ. ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಗಗನ್ ದೀಪ್ ಈ ಸ್ಫೋಟ ಪ್ರಕರಣದ ಆರೋಪಿಯಾಗಿದ್ದು, ಇದೇ ಸ್ಫೋಟದಲ್ಲಿ ಸಾವನ್ನಪ್ಪಿದ್ದ. ಡಿಸೆಂಬರ್ 23, 2021ರಂದು ಸಂಭವಿಸಿದ ಸ್ಫೋಟ ನಡೆದಿತ್ತು. ಈ ಸ್ಫೋಟದಲ್ಲಿ ಆರು ಜನರು ಗಾಯಗೊಂಡಿದ್ದರು.

ಇದನ್ನೂ ಓದಿ: ಅತ್ತೆ,ಪತ್ನಿ,ಇಬ್ಬರು ಮಕ್ಕಳ ಕೊಂದು ಆರೋಪಿ ಪರಾರಿ.. ದುರ್ವಾಸನೆ ಮೂಲಕ ಬೆಳಕಿಗೆ ಬಂದ ಮರ್ಡರ್​ ಕೇಸ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.