ETV Bharat / bharat

ಜಮ್ಮು- ಕಾಶ್ಮೀರದಲ್ಲಿ ಬಾಲ್ಯ ವಿವಾಹ ಪ್ರಮಾಣ ಕಡಿಮೆ: ನ್ಯಾಷನಲ್ ಫ್ಯಾಮಿಲಿ ಹೆಲ್ತ್‌ ಸಮೀಕ್ಷೆ

author img

By

Published : Jun 3, 2022, 10:24 PM IST

ದೇಶದಲ್ಲಿಯೇ ಜಮ್ಮ ಮತ್ತು ಕಾಶ್ಮೀರದಲ್ಲಿ ಬಾಲ್ಯ ವಿವಾಹ ಪ್ರಮಾಣ ಕಡಿಮೆ ಇದೆ ಎಂಬ ವಿಷಯ ನ್ಯಾಷನಲ್ ಫ್ಯಾಮಿಲಿ ಹೆಲ್ತ್‌ನ ಹೊಸ ಸಮೀಕ್ಷೆಯಿಂದ ತಿಳಿದು ಬಂದಿದೆ.

ಜಮ್ಮ ಮತ್ತು ಕಾಶ್ಮೀರ
ಜಮ್ಮ ಮತ್ತು ಕಾಶ್ಮೀರ

ನವದೆಹಲಿ: ದೇಶದಲ್ಲಿಯೇ ಜಮ್ಮು ಮತ್ತು ಕಾಶ್ಮೀರಲ್ಲಿ ಅತ್ಯಂತ ಕಡಿಮೆ ಬಾಲ್ಯ ವಿವಾಹಗಳು ನಡೆದಿವೆ ಎಂದು ನ್ಯಾಶನಲ್ ಫ್ಯಾಮಿಲಿ ಹೆಲ್ತ್‌ನ ಹೊಸ ಸಮೀಕ್ಷೆಯಿಂದ ತಿಳಿದು ಬಂದಿದೆ. ಕಡಿಮೆ ಬಾಲ್ಯ ವಿವಾಹ ಪ್ರಕರಣಗಳನ್ನು ವರದಿ ಮಾಡಿದ ಇತರ ರಾಜ್ಯಗಳೆಂದರೆ ಹಿಮಾಚಲ ಪ್ರದೇಶ, ಗೋವಾ ಮತ್ತು ನಾಗಾಲ್ಯಾಂಡ್ ಶೇ.7 ರಷ್ಟು ಮತ್ತು ಕೇರಳ ಹಾಗೂ ಪುದುಚೇರಿಯಲ್ಲಿ ಶೇ. 8 ರಷ್ಟಿದೆ.

ಸಮೀಕ್ಷಾ ವರದಿಯ ಪ್ರಕಾರ, ದೇಶದಲ್ಲಿ ಶೇ.6ರಷ್ಟು ಹುಡುಗಿಯರು 18 ವರ್ಷಕ್ಕಿಂತ ಮುಂಚೆಯೇ ವಿವಾಹವಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಶೇ 33, ಅಸ್ಸೋಂನಲ್ಲಿ ಶೇ 32, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಶೇ 28 , ತೆಲಂಗಾಣ ಶೇ 27 , ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ಶೇ 25 ರಷ್ಟು ಬಾಲ್ಯ ವಿವಾಹಗಳಾಗಿವೆ.

ಇದನ್ನೂ ಓದಿ: ಕೋವಿಡ್​ ಸೋಂಕು ಸಂಖ್ಯೆ ಹೆಚ್ಚಳ: ಕರ್ನಾಟಕ ಸೇರಿ ಪಕ್ಕದ ಐದು ರಾಜ್ಯಗಳಿಗೂ ಕೇಂದ್ರದ ಪತ್ರ!

ಭಾರತದಲ್ಲಿ 18-29 ವರ್ಷ ವಯಸ್ಸಿನ ಸುಮಾರು 25 ಪ್ರತಿಶತದಷ್ಟು ಮಹಿಳೆಯರು ವಿವಾಹವನ್ನು ಕಾನೂನು ಬದ್ಧವಾಗಿಯೇ ಮದುವೆ ಆಗಿದ್ದಾರೆ. ಅಂದರೆ 18 ವರ್ಷವಾದ ಮೇಲೆ ವಿವಾಹವಾಗಿದ್ದಾರೆ. ಮೊದಲು ಕಾಶ್ಮೀರದಲ್ಲಿ ಬಾಲ್ಯ ವಿವಾಹವು ಅತಿರೇಕವಾಗಿತ್ತು. ಈಗ, ಸರ್ಕಾರದ ಯೋಜನೆಗಳಾದ ಲಾಡ್ಲಿ ಬೇಟಿ', ಹೌಸ್ಲಾ' ಮತ್ತು ಇನ್ನೂ ಅನೇಕ ಯೋಜನೆಗಳು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿವೆ. ಬಾಲ್ಯ ವಿವಾಹ ನಿಷೇಧ ಕಾಯಿದೆ 2006 ಅನ್ನು ಕೇಂದ್ರಾಡಳಿತ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿತ್ತು. ಇದರ ಪರಿಣಾಮ ಜಮ್ಮು ಮತ್ತು ಕಾಶ್ಮೀರದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.