ETV Bharat / bharat

ರಾಜ್ಯಸಭೆಗೆ ರಂಜನ್​ ಗೊಗೋಯ್​ ಗೈರು ವಿರುದ್ಧ ವಿಶೇಷಾಧಿಕಾರ ನಿರ್ಣಯ.. ಕಾನೂನು ಕೆಲಸ ಮಾಡುತ್ತೆ ಬಿಡಿ : ರಂಜನ್​

author img

By

Published : Dec 15, 2021, 3:34 PM IST

ರಂಜನ್​ ಗೊಗೋಯ್​ ಅವರ ಹೇಳಿಕೆ ಸಂಸತ್ತಿನ ಶಿಸ್ತು ನಿಯಮ ಉಲ್ಲಂಘನೆಯಾಗಿದೆ. ರಾಜ್ಯಸಭೆಗೆ ತೋರಿದ ಅಗೌರವವಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದರು..

Ranjan Gogoi
ರಾಜ್ಯಸಭೆಗೆ ರಂಜನ್​ ಗೊಗೋಯ್​

ನವದೆಹಲಿ : ಸುಪ್ರೀಂಕೋರ್ಟ್​ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯ್​ ಅವರು ರಾಜ್ಯಸಭಾ ಸದಸ್ಯರಾಗಿದ್ದರೂ ಸದನದ ಕಲಾಪಕ್ಕೆ ಹಾಜರಾಗದ ಕಾರಣ ಅವರ ವಿರುದ್ಧ ತೃಣಮೂಲ ಕಾಂಗ್ರೆಸ್​(ಟಿಎಂಸಿ), ಸಮಾಜವಾದಿ ಪಕ್ಷ(ಎಸ್​ಪಿ) ಮತ್ತು ಕಮ್ಯೂನಿಷ್ಟ್​ ಪಕ್ಷಗಳು ವಿಶೇಷಾಧಿಕಾರ ನಿರ್ಣಯ ಚಲಾಯಿಸಿವೆ.

ರಾಜ್ಯಸಭೆ ಸದಸ್ಯರಾಗಿರುವ ರಂಜನ್​ ಗೊಗೋಯ್​ ಅವರು ಸಂಸತ್​ ಕಲಾಪಗಳಿಗೆ ಗೈರಾಗುತ್ತಿದ್ದಾರೆ. ಇದು ಸದನಕ್ಕೆ ಅವರು ನೀಡುತ್ತಿರುವ ಅಗೌರವದ ಸೂಚಕವಾಗಿದೆ ಎಂದು ರಾಜ್ಯಸಭೆ ವಿಶೇಷಾಧಿಕಾರಿಗಳ ಸಮಿತಿಗೆ ನಿರ್ಣಯವನ್ನು ಪಾಸು ಮಾಡಿದ್ದಾರೆ.

  • Law will take its own course: Former CJI and Rajya Sabha MP Ranjan Gogoi to ANI, on several parties' Rajya Sabha MPs submitting privilege motion against him on his remarks for attending the proceedings of the House. pic.twitter.com/kCYmoSCFM9

    — ANI (@ANI) December 15, 2021 " class="align-text-top noRightClick twitterSection" data=" ">

ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ರಂಜನ್​ ಗೊಗೋಯ್​, ಕಾನೂನು ತನ್ನ ಪರಿವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ನಾನು ಸೋಮವಾರ ಮತ್ತು ಮಂಗಳವಾರ ಸದನಕ್ಕೆ ಹಾಜರಾಗಿದ್ದೆ. ಇಂದು(ಬುಧವಾರ) ಕಾರಣಾಂತರಗಳಿಂದ ಹಾಜರಾಗಲು ಸಾಧ್ಯವಾಗಿಲ್ಲ. ನಾಳೆ ಕಲಾಪದಲ್ಲಿ ಭಾಗಿಯಾಗುವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ ; ಕೇಂದ್ರ ಸಚಿವ ಅಜಯ್‌ ಮಿಶ್ರಾ ವಜಾಗೆ ರಾಹುಲ್‌ ಗಾಂಧಿ ಒತ್ತಾಯ

ಇದಕ್ಕೂ ಮುನ್ನ ಶಿವಸೇನೆ ಮತ್ತು ಇಂಡಿಯನ್​ ಯೂನಿಯನ್​ ಮುಸ್ಲಿಂ ಲೀಗ್​(IUML) ಸಂಸದರು ಕೂಡ ರಂಜನ್​ ಗೊಗೋಯ್​ ಅವರು ಸಂಸತ್ತಿಗೆ ಹಾಜರಾಗುವ ಬಗ್ಗೆ ನೀಡಿದ್ದ ಹೇಳಿಕೆ ವಿರುದ್ಧ ವಿಶೇಷಾಧಿಕಾರಿಗಳ ಸಮಿತಿಗೆ ನಿರ್ಣಯ ಪಾಸು ಮಾಡಿದ್ದರು.

ರಂಜನ್​ ಗೊಗೋಯ್​ ಅವರ ಹೇಳಿಕೆ ಸಂಸತ್ತಿನ ಶಿಸ್ತು ನಿಯಮ ಉಲ್ಲಂಘನೆಯಾಗಿದೆ. ರಾಜ್ಯಸಭೆಗೆ ತೋರಿದ ಅಗೌರವವಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.