ETV Bharat / bharat

ಬೆಕ್ಕಿನ ಮರಿ ಎಂದು ಚಿರತೆ ಮರಿ ಮನೆಗೆ ಹೊತ್ತು ತಂದ ಬಾಲಕ.. ಮುಂದೇನಾಯ್ತು!?

author img

By

Published : May 12, 2022, 8:17 PM IST

Updated : May 12, 2022, 11:02 PM IST

ಮನೆಯ ಹೊರಗಡೆ ಆಟವಾಡ್ತಿದ್ದ ವೇಳೆ ಬಾಲಕನೋರ್ವ ಬೆಕ್ಕಿನ ಮರಿ ಎಂದುಕೊಂಡು ಚಿರತೆ ಮರಿ ಹೊತ್ತು ತಂದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Kid brought the kitten into the house By mistake
Kid brought the kitten into the house By mistake

ನಾಸಿಕ್​​(ಮಹಾರಾಷ್ಟ್ರ): ಬೆಕ್ಕಿನ ಮರಿ ಎಂದುಕೊಂಡು ಚಿರತೆ ಮರಿವೊಂದನ್ನ ಬಾಲಕನೊಬ್ಬ ಮನೆಗೆ ಕರೆತಂದಿರುವ ಘಟನೆ ಮಹಾರಾಷ್ಟ್ರದ ನಾಸಿಕ್​​ನಲ್ಲಿ ನಡೆದಿದೆ. ಇದರಿಂದ ಕುಟುಂಬಸ್ಥರು ಕೆಲ ಕಾಲ ದಿಢೀರ್​ ಶಾಕ್​​​ಗೊಳಗಾಗಿದ್ದಾರೆ.

ಬೆಕ್ಕಿನ ಮರಿ ಎಂದು ಚಿರತೆ ಮರಿ ಮನೆಗೆ ಹೊತ್ತು ತಂದ ಬಾಲಕ

ನಾಸಿಕ್​​ನ ಮಾಲೆಗಾಂವ್​​ನ ರೈತ ಠಾಕ್ರೆ ಕುಟುಂಬವಾಗಿದ್ದು, ಇವರು ವಾಸ ಮಾಡುವ ಮನೆಯ ಸ್ವಲ್ಪ ದೂರದಲ್ಲಿ ಚಿರತೆವೊಂದು ಮರಿಗೆ ಜನ್ಮ ನೀಡಿದೆ. ಆಟವಾಡುತ್ತ ಅಲ್ಲಿಗೆ ತೆರಳಿರುವ ಬಾಲಕ ಅದು ಬೆಕ್ಕಿನ ಮರಿ ಎಂದುಕೊಂಡು ಮನೆಗೆ ಹೊತ್ತು ತಂದಿದ್ದಾನೆ. ಇದನ್ನ ಗಮನಿಸಿರುವ ಕುಟುಂಬಸ್ಥರು ಅದಕ್ಕೆ ಹಾಲು ನೀಡಿದ್ದಾರೆ.

Kid brought the kitten into the house By mistake
ಬೆಕ್ಕಿನ ಮರಿ ಎಂದು ಚಿರತೆ ಮರಿ ಮನೆಗೆ ಹೊತ್ತು ತಂದ ಬಾಲಕ

ಜತೆಗೆ ರಾತ್ರಿ ವೇಳೆ ತಾಯಿ ಬಂದು ಕರೆದುಕೊಂಡು ಹೋಗಬಹುದು ಎಂಬ ಉದ್ದೇಶದಿಂದ ಮನೆಯ ಹೊರಗಡೆ ಇಟ್ಟಿದ್ದಾರೆ. ಆದರೆ, ಬಾರದ ಕಾರಣ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಈ ಮಾಹಿತಿ ಸದ್ಯ ಊರಿನಲ್ಲಿ ಕಾಳ್ಗಿಚ್ಚಿನಂತೆ ಹರಿದಾಡ್ತಿದೆ.

Last Updated : May 12, 2022, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.