ETV Bharat / bharat

ಸಚಿವರು, ಶಾಸಕರ ವೇತನ ಹೆಚ್ಚಳಕ್ಕೆ ಆಯೋಗ ನೇಮಕ: ಆರು ತಿಂಗಳಲ್ಲಿ ವರದಿ ಸಲ್ಲಿಸಲು ಸೂಚನೆ

author img

By

Published : Jul 27, 2022, 4:16 PM IST

ಕೇರಳದ ಸಚಿವರು, ಶಾಸಕರು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಅದಕ್ಕೋಸ್ಕರ ಸರ್ಕಾರ ಆಯೋಕ ನೇಮಕ ಮಾಡಿದೆ.

salaries of Ministers and MLAs
salaries of Ministers and MLAs

ತಿರುವನಂತಪುರಂ(ಕೇರಳ): ಸಚಿವರು ಮತ್ತು ಶಾಸಕರ ವೇತನ ಹೆಚ್ಚಿಸಲು ಕೇರಳ ಸರ್ಕಾರ ಆಯೋಗ ನೇಮಕ ಮಾಡಿದ್ದು, ಮುಂದಿನ ಆರು ತಿಂಗಳೊಳಗೆ ವರದಿ ಸಲ್ಲಿಸಲು ಸೂಚನೆ ನೀಡಿದೆ. ಶಾಸಕರು ಸಚಿವರು ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಟ್ಟಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೇರಳ ಸರ್ಕಾರದ ಸಚಿವರು ಮತ್ತು ಶಾಸಕರ ವೇತನ ಹೆಚ್ಚಳದ ಸಾಧ್ಯತೆ ಬಗ್ಗೆ ಅಧ್ಯಯನ ಮಾಡಲು ಏಕವ್ಯಕ್ತಿ ಆಯೋಗ ನೇಮಿಸಿದೆ. ಆರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಆಯೋಗಕ್ಕೆ ಸರ್ಕಾರ ಸೂಚಿಸಿದೆ. ಪ್ರಸ್ತುತ ಸಚಿವರಿಗೆ ತಿಂಗಳಿಗೆ 90,000 ರೂಪಾಯಿ ಸ್ಯಾಲರಿ ನೀಡಲಾಗ್ತಿದ್ದು, ಶಾಸಕರಿಗೆ ಟಿಎ ಮತ್ತು ಡಿಎ ಸೇರಿದಂತೆ ತಿಂಗಳಿಗೆ 70,000 ರೂ. ಸಂಬಳ ಇದೆ.

ಇದನ್ನೂ ಓದಿರಿ: ಟೋಲ್ ಬೂತ್​ನಲ್ಲಿ ಮಹಿಳೆಗೆ ಡಿಕ್ಕಿ ಹೊಡೆದ ಬೈಕ್​​.. ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ಹಿಂದೆ 2018ರಲ್ಲಿ ಕೊನೆಯದಾಗಿ ಸಚಿವರು, ಶಾಸಕರ ಸಂಬಳ ಹೆಚ್ಚಿಸಲಾಗಿದೆ. ಆ ಸಂದರ್ಭದಲ್ಲಿ ಸಚಿವರಿಗೆ ರೂ. 55,012 ರಿಂದ ರೂ. 90,000 ಮತ್ತು ಶಾಸಕರಿಗೆ 39,500 ರಿಂದ ರೂ. 70,000 ಏರಿಕೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಮೂಲಭೂತ ಸೌಲಭ್ಯಗಳ ಬೆಲೆ ಹೆಚ್ಚಳವಾಗಿರುವ ಕಾರಣ ಶಾಸಕ, ಸಚಿವರು ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.