ETV Bharat / bharat

ಶಬರಿಮಲೆಯಲ್ಲಿ ನಿರ್ಬಂಧ ಸಡಿಲಿಕೆ : 60 ಸಾವಿರ ಭಕ್ತರಿಗೆ ಅವಕಾಶ

author img

By

Published : Dec 20, 2021, 5:23 PM IST

ಶಬರಿಮಲೆಯಲ್ಲಿ ನಿರ್ಬಂಧಗಳನ್ನು ಸಡಿಲಿಸುವುದಾಗಿ ಕೇರಳ ಸರ್ಕಾರ ಘೋಷಿಸಿದೆ. ಪ್ರತಿ ದಿನ 60 ಸಾವಿರ ಭಕ್ತರು ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ..

Sabarimala Temple
ಶಬರಿಮಲೆ

ತಿರುವನಂತಪುರ (ಕೇರಳ) : ರಾಜ್ಯದಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆ ಕೇರಳ ಸರ್ಕಾರ ಶಬರಿಮಲೆ ದೇವಸ್ಥಾನದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ.

ಮಂಡಲ-ಮಕರವಿಳಕ್ಕು (ಮಕರ ಸಂಕ್ರಾಂತಿ) ಉತ್ಸವದಲ್ಲಿ ದೇವಸ್ಥಾನದಲ್ಲಿ ಭಕ್ತರಿಗೆ ತುಪ್ಪದ ಅಭಿಷೇಕಕ್ಕೆ ಅವಕಾಶ ಕಲ್ಪಿಸಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಸಡಿಲಿಕೆ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿನಿತ್ಯ 60 ಸಾವಿರ ಭಕ್ತರಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶ ನೀಡುವಂತೆ ಸರ್ಕಾರ ನಿರ್ದೇಶನ ನೀಡಿದೆ. ಕೋವಿಡ್ ನಿಯಮ ಅನುಸರಿಸಿ ಭಕ್ತರಿಗೆ ಕಾಡಿನ ಮಾರ್ಗದ ಮೂಲಕವೂ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. ಭಾನುವಾರದ ವೇಳೆಗೆ 8,11,235 ಭಕ್ತರು ಶಬರಿಮಲೆಗೆ ಬಂದಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಒಮಿಕ್ರಾನ್ ಭೀತಿ : ಬೆಂಗಳೂರಲ್ಲಿ ಜನರು ಜವಾಬ್ದಾರಿಯಿಂದ ಇರಬೇಕು.. ಬಿಬಿಎಂಪಿ ಆಯುಕ್ತರ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.