ETV Bharat / bharat

ಗಿರಿ ಶಿಖರ ಏರಲು ಸಾಲ ಪಡೆಯುತ್ತಿರುವ ಕೇರಳದ ಸರ್ಕಾರಿ ಉದ್ಯೋಗಿ!

author img

By

Published : May 19, 2023, 1:15 PM IST

ಸಾಮಾನ್ಯವಾಗಿ ಜೀವನದ ಅವಶ್ಯಕತೆಗಳನ್ನು ಪೂರೈಸಲು ಸಾಲ ಮಾಡುವ ಜನರ ನಡುವೆ ಇಲ್ಲೊಬ್ಬ ವ್ಯಕ್ತಿ ವಿಶೇಷವಾಗಿ ನಿಲ್ಲುತ್ತಾರೆ.

a-kerala-government-employee-who-is-getting-a-loan-to-climb-the-hill
a-kerala-government-employee-who-is-getting-a-loan-to-climb-the-hill

ಬೆಂಗಳೂರು: ಸಾಮಾನ್ಯವಾಗಿ ಮನೆ, ಕಾರು, ವಿದ್ಯಾಭ್ಯಾಸ ಹಾಗು ಇತರೆ ಜೀವನದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಉದ್ದೇಶದಿಂದ ಸಾಲಗಳಿಗೆ ಅರ್ಜಿ ಸಲ್ಲಿಸುತ್ತೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮಾತ್ರ ಸಾಲ ಪಡೆಯುತ್ತಿರುವುದು ವಿಶೇಷ ಕಾರಣಕ್ಕೆ!. ಗಿರಿ ಶಿಖರಗಳನ್ನು ಏರುವ ಹುಮ್ಮಸ್ಸು ಹೊಂದಿರುವ ಈ ವ್ಯಕ್ತಿ ಅದಕ್ಕಾಗಿ ಸಾಲ ಮಾಡುತ್ತಿದ್ದಾರೆ.

ಕೇರಳ ರಾಜ್ಯ ಸೆಕ್ರೆಟಿರಿಯಟ್​ನ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿರುವ 36 ವರ್ಷದ ಸರ್ಕಾರಿ ಉದ್ಯೋಗಿ ಶೇಖ್​ ಹಸನ್​ ಖಾನ್​ ಅವರಿಗೆ ಗಿರಿ ಶಿಖರಗಳನ್ನು ಹತ್ತುವ ಕನಸು. ಪತ್ತನಂತಿಟ್ಟ ಜಿಲ್ಲೆಯ ಪಂದಳಂ ನಿವಾಸಿಯಾಗಿರುವ ಇವರು, ಈಗಾಗಲೇ ಮೌಂಟ್​ ಎವರೆಸ್ಟ್​ ಶಿಖರ ಏರಿದ್ದು, ಜಗತ್ತಿನಲ್ಲಿರುವ ಅತಿ ಎತ್ತರದ ಶಿಖರಗಳನ್ನೂ ಏರಬೇಕು ಎಂಬ ಕನಸಿದೆ.

ಗಿರಿಗಳನ್ನು ಹತ್ತಲು ವ್ಯವಸ್ಥಿತವಾದ ತರಬೇತಿ, ಅಗತ್ಯ ಉಪಕರಣ, ಪ್ರವಾಸ ವೆಚ್ಚಗಳು ದುಬಾರಿ. ಇದೇ ಕಾರಣಕ್ಕೆ ಸಾಲಗಳನ್ನು ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈಗಾಗಲೇ ಮೌಂಟ್​ ಎವರೆಸ್ಟ್​ ಶಿಖರ ಹತ್ತಿಳಿದಿರುವ ಇವರು ಜಗತ್ತಿನ ಮೂರನೇ ಅತಿ ಎತ್ತರದ ಶಿಖರ ಅಲಸ್ಕಾದ ಮೌಂಟ್​ ದೆನಲಿ ಹತ್ತಲು ಉತ್ಸುಕರಾಗಿದ್ದಾರೆ.

ಐದು ವರ್ಷದ ಗುರಿ: ಈ ಕುರಿತು ಮಾತನಾಡಿರುವ ಖಾನ್​, ಕಳೆದ ವರ್ಷ ಮೂವರು ಅಮೆರಿಕನ್ನರ ಜೊತೆಗೆ ಮೌಂಟ್​ ಎವರೆಸ್ಟ್​ ಶಿಖರ ಏರಿದ್ದೇನೆ. ಮುಂದಿನ ಗುರಿ ಅಲಾಸ್ಕಾ. 185 ದೇಶಗಳ ಅತ್ಯಂತ ಎತ್ತರದ ಶಿಖರಗಳನ್ನು ಹತ್ತುವ ಗುರಿ ಹೊಂದಿದ್ದು, ಐದು ವರ್ಷ ರಜೆ ತೆಗೆದುಕೊಳ್ಳುವ ಯೋಜನೆಯಲ್ಲಿದ್ದೇನೆ. ಜುಲೈನಲ್ಲಿ ರಷ್ಯಾ ಮತ್ತು ಆಗಸ್ಟ್​​ನಲ್ಲಿ ಜಪಾನ್​ಗೆ ಹೋಗುತ್ತಿದ್ದೇವೆ. 2023ಕ್ಕೆ ವಿವಿಧ ದೇಶಗಳ 15 ಶಿಖರಗಳನ್ನು ಏರುವುದು ನನ್ನ ಕನಸು. ಐದು ವರ್ಷದ ಗುರಿ ತಲುಪಲು 2028 ರವರೆಗೆ ಸಮಯ ಬೇಕು. ಇದಕ್ಕಾಗಿ 2.50 ಕೋಟಿ ಖರ್ಚಾಗಲಿದೆ. ವಿಮಾನ ಟಿಕೆಟ್​, ಬೋರ್ಡಿಂಗ್​ ವೆಚ್ಚಗಳು ದುಬಾರಿಯಾಗಿದ್ದು, ಇದಕ್ಕಾಗಿ ಪ್ರಯೋಜನರ ಹುಡುಕಾಟದಲ್ಲಿದ್ದೇನೆ.​ ಕಳೆದೆರಡು ಪ್ರಯಾಣದ ಖರ್ಚಿನಿಂದಾಗಿ ಸಾಕಷ್ಟು ಸಾಲದಲ್ಲಿದ್ದೇನೆ.

ನಾನು ಸರ್ಕಾರಿ ಉದ್ಯೋಗದಲ್ಲಿ ಇರುವುದರಿಂದ ಸುಲಭವಾಗಿ ಸಾಲ ಸಿಗುತ್ತದೆ. ನನಗೆ ಮನೆ ಕಟ್ಟುವ ಇಚ್ಛೆ ಇಲ್ಲ, ಈಗಾಗಲೇ ಪಿತ್ರಾರ್ಜಿತ ಮನೆ ಇದೆ. ಸಾಲ ಪಡೆದು ಹಿಂದಿರುಗಿಸುವಲ್ಲೂ ಕೂಡ ಉತ್ತಮ ರೆಕಾರ್ಡ್​ ನಿರ್ವಹಣೆ ಮಾಡಿದ್ದೇನೆ. ನನ್ನ ಕನಸು, ಪ್ಯಾಷನ್‌ಗಾಗಿ ಸಾಲ ಮಾಡುತ್ತಿದ್ದೇನೆ. ನನ್ನ ಖರ್ಚಿನಲ್ಲಿ ನಾನು ಸಲಕರಣೆಗಳನ್ನು ಖರೀದಿಸಿದ್ದೇನೆ. ನನ್ನ ಗುರಿ ಸಾಧಿಸುವ ಸಾಮರ್ಥ್ಯವನ್ನು ನಾನು ಹೊಂದಿದ್ದೇನೆ ಎಂದರು.

ಹೆಂಡತಿಯ ಬೆಂಬಲ: ಖಾನ್​ ಅವರ ಹೆಂಡತಿ ವೃತ್ತಿಯಲ್ಲಿ ಶಿಕ್ಷಕಿ. ಮಕ್ಕಳಿಗೆ ಟ್ಯೂಷನ್​ ಹೇಳಿಕೊಡುತ್ತಿದ್ದಾರೆ. "ಆರು ವರ್ಷದ ಮಗಳನ್ನು ನೋಡಿಕೊಳ್ಳುವಲ್ಲಿ ಆಕೆಯ ಪಾತ್ರ ಮಹತ್ವದ್ದು. ನನ್ನ ಗುರಿ ಸಾಧನೆಗೆ ಬೆಂಬಲವಾಗಿದ್ದಾಳೆ" ಎನ್ನುತ್ತಾರೆ ಖಾನ್​. "ಪ್ರತಿ ಶಿಖರದ ತುದಿ ಏರಿದಾಗಲೂ ತಿರಂಗಾ ಧ್ವಜ ಹಾರಿಸುತ್ತೇನೆ. ಮಾನಸಿಕ ತೃಪ್ತಿಯ ಜೊತೆಗೆ ಪರಿಸರ ಬದಲಾವಣೆ ಸಂದೇಶ ಹರಡುವುದು ಈ ಸಾಹಸದ ಉದ್ದೇಶ" ಎಂದು ಅವರು ತಿಳಿಸಿದರು.

ಇದನ್ನೂ ಓದಿ: ತುಳಜಾ ಭವಾನಿ ದೇವಸ್ಥಾನದಲ್ಲಿ ಭಕ್ತರಿಗೆ ಡ್ರೆಸ್​ ಕೋಡ್​ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.