ETV Bharat / bharat

ಈ ರಾಜ್ಯದಲ್ಲಿ ಆನ್​ಲೈನ್​ನಲ್ಲೇ ಮದ್ಯ ಖರೀದಿಗೆ ಅವಕಾಶ.. ಇಂದಿನಿಂದ ಜಾರಿ!

author img

By

Published : Aug 17, 2021, 4:50 PM IST

ಕೇರಳ ರಾಜ್ಯದಲ್ಲಿ ಆನ್​ಲೈನ್​ ಮದ್ಯ ಖರೀದಿಗೆ ಗ್ರಾಹಕರಿಗೆ ಅನುಮತಿ ನೀಡಲಾಗಿದೆ. ಅಲ್ಲದೆ, ಪ್ರಾರಂಭಿಕವಾಗಿ ಇಂದು ತಿರುವನಂತರಪುರಂನ ಕೆಲವೊಂದಿಷ್ಟು ಲಿಕ್ಕರ್​​ ಶಾಪ್​​ಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

liquor-shopping
ಆನ್​ಲೈನ್​ನಲ್ಲಿ ಮದ್ಯ ಖರೀದಿ

ತಿರುವನಂತರಪುರಂ: ಕೇರಳ ಸರ್ಕಾರವು ಮದ್ಯ ಪ್ರಿಯರಿಗೆ ಗುಡ್​​ ನ್ಯೂಸ್​ ನೀಡಿದೆ. ಇನ್ಮುಂದೆ ಮದ್ಯ ಖರೀದಿಸಬೇಕೆಂದರೆ ಮದ್ಯದಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಅವಶ್ಯಕತೆಯಿಲ್ಲ. ಆನ್ಲೈನ್​ ಮೂಲಕ ಆರ್ಡರ್ ಮಾಡಿ, ಮಳಿಗೆಗಳಿಗೆ ರಿಸಿಪ್ಟ್ ತೋರಿಸಿ ಮದ್ಯ ಪಡೆಯಬಹುದಾಗಿದೆ.

ಕೋಯಿಕ್ಕೋಡ್ ಪಾವಮಣಿ ರಸ್ತೆಯ ಅಂಗಡಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ, ಇತರೆ ಅಂಗಡಿಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. https://booking.ksbc.co.in ಲಿಂಕ್ ಮೂಲಕ ಮದ್ಯ ಬುಕಿಂಗ್ ಮಾಡಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.