ETV Bharat / bharat

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನೋಡುವುದು ನನ್ನ ಕನಸು ಎಂದಿದ್ದ ಕಲ್ಯಾಣ್ ಸಿಂಗ್

author img

By

Published : Aug 21, 2021, 11:10 PM IST

ಹಿರಿಯ ಪತ್ರಕರ್ತ ಪಿಎನ್ ದ್ವಿವೇದಿ ಹೇಳುವಂತೆ ಅಂದಿನ ಮುಖ್ಯ ಕಾರ್ಯದರ್ಶಿ ಫೈಜಾಬಾದ್, ಜಿಲ್ಲಾ ಮ್ಯಾಜಿಸ್ಟ್ರೇಟ್ ವರದಿಯನ್ನು ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಮುಂದೆ ಮಂಡಿಸಿದರು. ವರದಿಯಲ್ಲಿ ಮೂರು ನಾಲ್ಕು ಲಕ್ಷ ಜನರು ಸಾಕೇತ್ ಮಹಾವಿದ್ಯಾಲಯದ ಬಳಿ ಜಮಾಯಿಸಿದ್ದಾರೆ ಎಂದು ಸ್ಪಷ್ಟವಾಗಿ ಬರೆಯಲಾಗಿತ್ತು.

Kalyan Singh and Babri Masjid demolition Saga
ಕಲ್ಯಾಣ್ ಸಿಂಗ್ ಮತ್ತು ಬಾಬ್ರಿ ಮಸೀದಿ ಧ್ವಂಸ

ಲಖನೌ : ಕಲ್ಯಾಣ್​ ಸಿಂಗ್ ಅವರನ್ನು​ ರಾಮ ಮಂದಿರ ನಿರ್ಮಾಣದ ಪ್ರಮುಖ ರೂವಾರಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸದ ವೇಳೆ ಕಲ್ಯಾಣ್​ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಈ ಘಟನೆಯ ಬಳಿಕ ನೈತಿಕ ಹೊಣೆ ಹೊತ್ತು ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಆದರೂ, ಅವರು ಈ ಘಟನೆಯ ಬಗ್ಗೆ ವಿಷಾದಿಸಲಿಲ್ಲ, ಹೆಮ್ಮೆಯೂ ಪಡಲಿಲ್ಲ. ನಿರ್ಧಾರ ಅವರನ್ನು ರಾಮನ ಅತಿ ದೊಡ್ಡ ಭಕ್ತನನ್ನಾಗಿಸಿತು. ರಾಮಮಂದಿರ ನಿರ್ಮಾಣದ ವಿಚಾರವು ದೇಶದಲ್ಲಿ ಅತಿ ದೊಡ್ಡ ಛಾಪು ಮೂಡಿಸಿತು. ಇದರಿಂದಾಗಿ ಬಿಜೆಪಿ ನಾಯಕರು ರಾಜಕೀಯ ಲಾಭ ಪಡೆದರು. ಕೇಂದ್ರದಲ್ಲಿ ಮಾತ್ರವಲ್ಲದೆ, ಹಿಂದೂ ಜನಸಂಖ್ಯೆಯ ಪ್ರಾಬಲ್ಯವಿರುವ ಅನೇಕ ರಾಜ್ಯಗಳಲ್ಲಿ ಬಿಜೆಪಿ ತನ್ನ ಅಧಿಪತ್ಯ ಸ್ಥಾಪಿಸಿತು.

ಕಲ್ಯಾಣ್ ಸಿಂಗ್ ತೆಗೆದುಕೊಂಡ ಕಠಿಣ ನಿರ್ಧಾರ : ಡಿಸೆಂಬರ್ 6, 1992ರ ಬೆಳಗ್ಗೆ ಕರಸೇವಕರು ಅಯೋಧ್ಯೆಯ ವಿವಾದಿತ ಭೂಮಿ ಸುತ್ತಲೂ ಕೋಟೆ ನಿರ್ಮಿಸಿದ್ದರು. ಈ ಸಮಯದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್​, ರಾಜ್ಯ ಸರ್ಕಾರಕ್ಕೆ ಗುಂಡು ಹಾರಿಸಲು ಅನುಮತಿ ಕೋರಿ ಲಿಖಿತ ವರದಿ ಕಳಿಸಿದ್ದರು. ಹಿರಿಯ ಪತ್ರಕರ್ತ ಪಿಎನ್ ದ್ವಿವೇದಿ ಹೇಳುವಂತೆ ಅಂದಿನ ಮುಖ್ಯ ಕಾರ್ಯದರ್ಶಿ ಫೈಜಾಬಾದ್, ಜಿಲ್ಲಾ ಮ್ಯಾಜಿಸ್ಟ್ರೇಟ್ ವರದಿಯನ್ನು ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಮುಂದೆ ಮಂಡಿಸಿದರು. ವರದಿಯಲ್ಲಿ ಮೂರು ನಾಲ್ಕು ಲಕ್ಷ ಜನರು ಸಾಕೇತ್ ಮಹಾವಿದ್ಯಾಲಯದ ಬಳಿ ಜಮಾಯಿಸಿದ್ದಾರೆ ಎಂದು ಸ್ಪಷ್ಟವಾಗಿ ಬರೆಯಲಾಗಿತ್ತು. ಈ ಸಮಯದಲ್ಲಿ ನಾವು ಫೈರಿಂಗ್​ ನಡೆಸಬೇಕೇ? ಬೇಡವೇ ಎಂದು ಕೇಳಿದೆ. ಗುಂಡು ಹಾರಿಸಿದರೆ, ಭಾರಿ ರಕ್ತಪಾತವಾಗುತ್ತದೆ ಎಂದೂ ಉಲ್ಲೇಖಿಸಲಾಗಿತ್ತು. ಇದನ್ನು ಕೂಲಂಕಷವಾಗಿ ಗಮನಿಸಿದ ಸಿಂಗ್​, ಗುಂಡು ಹಾರಿಸಲು ಅನುಮತಿ ನೀಡಲಿಲ್ಲ.

ಬಾಬ್ರಿ ಮಸೀದಿ ಧ್ವಂಸ, ಬಿಜೆಪಿ ಸರ್ಕಾರ ಪತನ ಮತ್ತು ರಾಮ ಮಂದಿರ

ಮೊಘಲ್ ಚಕ್ರವರ್ತಿ ಬಾಬರನ ಸೇನಾಧಿಪತಿಯಾದ ಮೀರ್ ಬಾಕಿ 1528 ರಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿದ್ದನೆಂದು ನಂಬಲಾಗಿದೆ. ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲು ರಾಮ ಮಂದಿರವನ್ನು ಧ್ವಂಸಗೊಳಿಸಿದ ನಂತರ ಬಾಬ್ರಿ ಮಸೀದಿಯನ್ನು ನಿರ್ಮಿಸಿದನೆಂದು ಕಲ್ಯಾಣ್ ಸಿಂಗ್ ಯಾವಾಗಲೂ ನಂಬಿದ್ದರು. ಆ ದಿನದ (ಡಿಸೆಂಬರ್ 2, 1992) ಕುರಿತು ಮಾತನಾಡಿದ ಸಿಂಗ್, ಆ ದಿನ ಮೂರು ಪ್ರಮುಖ ಘಟನೆಗಳು ನಡೆದವು - ಬಾಬ್ರಿ ಮಸೀದಿ ಧ್ವಂಸ, ಬಿಜೆಪಿ ಸರ್ಕಾರ ಪತನ ಮತ್ತು ರಾಮ ಮಂದಿರ ನಿರ್ಮಾಣದ ಸಾಧ್ಯತೆ ದಟ್ಟವಾಯಿತು. ಬಾಬ್ರಿ ಧ್ವಂಸದ ಕ್ರೆಡಿಟ್ ಅನ್ನು ತನಗೆ ಬದಲಾಗಿ ಬೇರೆಯವರಿಗೆ ನೀಡಲು ಸಿಂಗ್ ಬಯಸಲಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.

ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ ವೇಳೆ ಹಾಜರಿದ್ದ ಸಿಂಗ್

ದ್ವಿವೇದಿ ಪ್ರಕಾರ, ಕಲ್ಯಾಣ್ ಸಿಂಗ್ ಸ್ವತಃ ರಾಮ ಮಂದಿರಕ್ಕೆ ಅಡಿಗಲ್ಲು ಹಾಕುವುದನ್ನು ನೋಡುವುದು ಅವರ ಜೀವನದ ಪ್ರಮುಖ ಕ್ಷಣ ಎಂದು ಹೇಳುತ್ತಿದ್ದಾರೆ. ಅವರು ಆಗಸ್ಟ್ 5, 2020 ರಂದು ಭೂಮಿ ಪೂಜೆಯ ದಿನದಂದು ಅಯೋಧ್ಯೆಯಲ್ಲಿ ಹಾಜರಿದ್ದರು. "ಇದು ನನ್ನ ಜೀವನದ ಒಂದು ಪ್ರಮುಖ ದಿನ. ಅಯೋಧ್ಯೆಯಲ್ಲಿ ಭವ್ಯ ರಾಮನನ್ನು ನೋಡುವುದು ನನ್ನ ಜೀವನದ ಬಹುದಿನದ ಕನಸು. ಅದು ಇಂದು ಪೂರೈಸಿದೆ ಎಂದು ಅವರು ಹೇಳಿದರು. ಬಾಬರಿ ಮಸೀದಿ ಧ್ವಂಸದಿಂದಾಗಿ ತನ್ನ ಸರ್ಕಾರ ಪತನವಾಗಿದೆ ಎಂದು ತಾನು ಎಂದಿಗೂ ವಿಷಾದಿಸಲಿಲ್ಲ ಎಂದೂ ಅವರು ಹೇಳಿದ್ದರು.

‘ಕಲ್ಯಾಣ್​ ಸಿಂಗ್​ ಒಬ್ಬ ಆರೋಪಿ’

ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡವನ್ನು ನೆಲಸಮಗೊಳಿಸಿದ ನಂತರ, ಲಿಬರ್ಹಾನ್ ಆಯೋಗವು ಈ ವಿಷಯವನ್ನು ತನಿಖೆ ಮಾಡಿತು. ಲಿಬರ್ಹಾನ್ ತನ್ನ ವರದಿಯಲ್ಲಿ ಕಲ್ಯಾಣ್​ ಸಿಂಗ್​ ಅವರನ್ನು ತಪ್ಪಿತಸ್ಥನೆಂದು ತೀರ್ಪು ನೀಡಿತು.

ಇದನ್ನೂ ಓದಿ: ಕೃಷಿ ಕುಟುಂಬದಿಂದ ಬಂದು ಕೇಸರಿ ಕೋಟೆ ಕಟ್ಟಿದರು.. ಯುಪಿ ಮಾಜಿ ಸಿಎಂ ಕಲ್ಯಾಣ್​ ಸಿಂಗ್ ಏಳುಬೀಳು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.