ETV Bharat / bharat

ಸಿಂಗಾಪುರ ವಿದೇಶಾಂಗ ಸಚಿವರ ಭೇಟಿ ಮಾಡಿದ ಜೈಶಂಕರ್​: ಇಂಡೋ - ಪೆಸಿಫಿಕ್ ಬೆಳವಣಿಗೆಗಳ ಕುರಿತು ಚರ್ಚೆ

author img

By

Published : Sep 27, 2021, 12:33 PM IST

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ 76 ನೇ ಅಧಿವೇಶನದಲ್ಲಿ ಭಾಗವಹಿಸಿರುವ ಜೈಶಂಕರ್ ಅವರು, ಮೆಕ್ಸಿಕನ್ ಕೌಂಟರ್ ಮಾರ್ಸೆಲೊ ಎಬಾರ್ಡ್ ಕಾಸೌಬ್ನ ಆಹ್ವಾನದ ಮೇರೆಗೆ ಭಾನುವಾರ ಮೆಕ್ಸಿಕೋಗೆ ತೆರಳಿದ್ದಾರೆ. ಇನ್ನು ಈ ಕುರಿತು ಟ್ವೀಟ್​ ಮಾಡಿರುವ ಜೈ ಶಂಕರ್​ ವಿವಿಯನ್ ಬಾಲಕೃಷ್ಣನ್ ಅವರು ತಮ್ಮ ಹಳೆಯ ಸ್ನೇಹಿತ ಎಂದು ಬಣ್ಣಿಸಿದ್ದಾರೆ.

Jaishankar meets Balakrishnan
ಜೈಶಂಕರ್ ಮತ್ತು ಬಾಲಕೃಷ್ಣನ್ ಭೇಟಿ

ನ್ಯೂಯಾರ್ಕ್: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಸಿಂಗಾಪುರದ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಅವರನ್ನು ಭೇಟಿಯಾಗಿದ್ದು, ಇಂಡೋ-ಪೆಸಿಫಿಕ್ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದರು. ಅಷ್ಟೇ ಅಲ್ಲದೆ, ಕೋವಿಡ್ -19 ಸಾಂಕ್ರಾಮಿಕ ರೋಗ ಎದುರಿಸುವ ಕುರಿತಾಗಿಯೂ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ 76 ನೇ ಅಧಿವೇಶನದಲ್ಲಿ ಭಾಗವಹಿಸಿರುವ ಜೈಶಂಕರ್ ಅವರು, ಮೆಕ್ಸಿಕನ್ ಕೌಂಟರ್ ಮಾರ್ಸೆಲೊ ಎಬಾರ್ಡ್ ಕಾಸೌಬ್ನ ಆಹ್ವಾನದ ಮೇರೆಗೆ ಭಾನುವಾರ ಮೆಕ್ಸಿಕೋಗೆ ತೆರಳಿದ್ದಾರೆ. ಇನ್ನು ಈ ಕುರಿತು ಟ್ವೀಟ್​ ಮಾಡಿರುವ ಜೈ ಶಂಕರ್​ ವಿವಿಯನ್ ಬಾಲಕೃಷ್ಣನ್ ಅವರು ತಮ್ಮ ಹಳೆಯ ಸ್ನೇಹಿತ ಎಂದು ಬಣ್ಣಿಸಿದ್ದಾರೆ.

ಬೀಜಿಂಗ್ ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳು ಮತ್ತು ಮಿಲಿಟರಿ ಸ್ಥಾಪನೆಗಳನ್ನು ನಿರ್ಮಿಸಿದೆ. ಭಾರತ ಮತ್ತು ಸಿಂಗಾಪುರ್ ಇಂಡೋ - ಪೆಸಿಫಿಕ್‌ನಲ್ಲಿ ಸಹಕರಿಸುವ ಮಾರ್ಗಗಳನ್ನು ಅನ್ವೇಷಿಸಿದ ಒಂದು ತಿಂಗಳ ನಂತರ ಜೈಶಂಕರ್ ಮತ್ತು ಬಾಲಕೃಷ್ಣನ್ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಈ ಪ್ರದೇಶಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಮತ್ತು ಕಾರ್ಯತಂತ್ರದ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.

ವಿದೇಶಾಂಗ ಸಚಿವರಾಗಿ ಉತ್ತರ ಅಮೆರಿಕ ದೇಶಕ್ಕೆ ಜೈ ಶಂಕರ್​ ಅವರದ್ದು ಇದು ಮೊದಲ ಭೇಟಿ. ಈ ಸಮಯದಲ್ಲಿ ಅವರು ಮೆಕ್ಸಿಕನ್ ಸ್ವಾತಂತ್ರ್ಯದ 200ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮಗಳಲ್ಲಿ ಇತರ ವಿಶ್ವ ನಾಯಕರೊಂದಿಗೆ ಭಾಗವಹಿಸಲಿದ್ದಾರೆ ಎಂದು MEA ಹೇಳಿಕೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.