ETV Bharat / bharat

ಶ್ರೀನಗರದಲ್ಲಿ ಅನುಮಾನಾಸ್ಪದವಾಗಿ ಯೋಧನ ಮೃತದೇಹ ಪತ್ತೆ

author img

By

Published : Dec 4, 2021, 7:04 AM IST

24 ವರ್ಷದ ಅನುಜ್ ಸಿಂಗ್ ಬಿಹಾರದ ಬಂಕಾ ಪ್ರದೇಶದ ನಿವಾಸಿಯಾಗಿದ್ದಾರೆ. ಪ್ರೇಮ್​​ಚಂದ್ ಎಂಬುವರ ಮಗನಾಗಿದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸೇನೆ ಮಾಹಿತಿ ನೀಡಿದೆ..

J&K: Soldier found dead in Srinagar
ಶ್ರೀನಗರದಲ್ಲಿ ಅನುಮಾನಾಸ್ಪದವಾಗಿ ಯೋಧನ ಮೃತದೇಹ ಪತ್ತೆ

ಶ್ರೀನಗರ, ಜಮ್ಮು ಮತ್ತು ಕಾಶ್ಮೀರ : ಯೋಧನ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಶ್ರೀನಗರದಲ್ಲಿರುವ ಬಾದಾಮಿಬಾಗ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಂಟೋನ್ಮೆಂಟ್‌ನ ಸ್ಟೋರ್ ರೂಮ್​ನಲ್ಲಿ ಮಧ್ಯಾಹ್ನ 1.20ಕ್ಕೆ ಸಿಗ್ನಲ್ ಮ್ಯಾನ್ ಅನುಜ್ ಸಿಂಗ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

24 ವರ್ಷದ ಅನುಜ್ ಸಿಂಗ್ ಬಿಹಾರದ ಬಂಕಾ ಪ್ರದೇಶದ ನಿವಾಸಿಯಾಗಿದ್ದಾರೆ. ಪ್ರೇಮ್​​ಚಂದ್ ಎಂಬುವರ ಮಗನಾಗಿದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸೇನೆ ಮಾಹಿತಿ ನೀಡಿದೆ.

ಅನುಜ್ ಸಿಂಗ್ ಭಾರತೀಯ ಸಶಸ್ತ್ರ ಪಡೆಗಳ ಅಡಿಯಲ್ಲಿ ಬರುವ ರಾಷ್ಟ್ರೀಯ ರೈಫಲ್ಸ್​ನ ಕಿಲೊ ಫೋರ್ಸ್​​ನಲ್ಲಿ (Kilo Force) ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಭದ್ರತೆ ಸವಾಲುಗಳ ಕಾರಣದಿಂದ ಎಸ್​-40 ಖರೀದಿ : ಭಾರತ ಸಮರ್ಥನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.