ETV Bharat / bharat

ಚೀನಾಕ್ಕೆ ಭಾರತದಿಂದ ಶಾಕ್​ ಮೇಲೆ ಶಾಕ್​.. ಡ್ರ್ಯಾಗನ್​ ರಾಷ್ಟ್ರದ ಜತೆ ವಹಿವಾಟು ನಡೆಸುವ ಸಂಸ್ಥೆಗಳ ಮೇಲೆ ಐಟಿ ದಾಳಿ

author img

By

Published : Dec 22, 2021, 3:26 PM IST

ಚೀನಾ ಮೊಬೈಲ್​ ಫೋನ್​ಗಳ ತಯಾರಕರ ಜೊತೆ ವ್ಯವಹಾರ ನಡೆಸುವ ಸಂಸ್ಥೆಗಳ ಮೇಲೆ ತೆರಿಗೆ ವಂಚನೆ ಆರೋಪದಡಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಮತ್ತೊಮ್ಮೆ ಶಾಕ್​ ನೀಡಿದೆ..

it raids
ಐಟಿ ದಾಳಿ

ನವದೆಹಲಿ : ಚೀನಾಗೆ ಭಾರತ ಇತ್ತೀಚೆಗಷ್ಟೇ ಸೆಮಿಕಂಡಕ್ಟರ್​ ಚಿಪ್​ ಮತ್ತು ಮೊಬೈಲ್​ ಚಿಪ್​ಗಳ ಖರೀದಿ ಮತ್ತು ರವಾನೆಗೆ ಬ್ರೇಕ್​ ಹಾಕಿ ಶಾಕ್​ ನೀಡಿತ್ತು. ಇದೀಗ ಚೀನಾ ಮೊಬೈಲ್​ ಫೋನ್​ಗಳ ತಯಾರಕರ ಜೊತೆ ವ್ಯವಹಾರ ನಡೆಸುವ ಸಂಸ್ಥೆಗಳ ಮೇಲೆ ತೆರಿಗೆ ವಂಚನೆ ಆರೋಪದಡಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಮತ್ತೊಮ್ಮೆ ಶಾಕ್​ ನೀಡಿದೆ.

ಇದು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದಕ್ಷಿಣದ ರಾಜ್ಯಗಳ ಕೆಲವೆಡೆಗಳಲ್ಲಿ ಇರುವ ಚೀನಾದ ಜೊತೆ ಮೊಬೈಲ್​ ವ್ಯಾಪಾರದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂಓದಿ: ಪ್ರಿಯಾಂಕಾ ಗಾಂಧಿ ಮಕ್ಕಳ ಇನ್​ಸ್ಟಾಗ್ರಾಮ್​ ಹ್ಯಾಕ್​ ಆರೋಪ.. ದೂರು ದಾಖಲಿಸಿಕೊಂಡ ಕೇಂದ್ರ ಸರ್ಕಾರ

ಚೀನಾ ಜೊತೆ ವ್ಯಾಪಾರ ಒಡಂಬಡಿಕೆ ಮಾಡಿಕೊಂಡಿರುವ ಸಂಸ್ಥೆಗಳು ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಇಂತಹ ಇನ್ನಷ್ಟು ಸಂಸ್ಥೆಗಳ ಮಾರಾಟಗಾರರು ಮತ್ತು ವಿತರಣಾ ಪಾಲುದಾರರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿದು ಬಂದಿದೆ. ಐಟಿ ನಡೆಸಿದ ದಾಳಿಯ ಬಳಿಕದ ವಿವರಗಳು ಇನ್ನೂ ಲಭ್ಯವಾಗಿಲ್ಲ. ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.