ETV Bharat / bharat

ಸೇನಾ ಭೂಮಿ-ಖನಿಜ ಗುತ್ತಿಗೆ ಹಗರಣ: ಪಶ್ಚಿಮ ಬಂಗಾಳ, ಜಾರ್ಖಂಡ್​ನಲ್ಲಿ ಇಡಿ-ಐಟಿ ದಾಳಿ

author img

By

Published : Nov 4, 2022, 11:07 AM IST

ಸೇನೆಗೆ ಸಂಬಂಧಿಸಿದ ಭೂಮಿ ಮಾರಾಟ ಆರೋಪ ಹಿನ್ನೆಲೆ ಮತ್ತು ಖನಿಜ ಗುತ್ತಿಗೆ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹಾಗು ಆದಾಯ ತೆರಿಗೆ ಇಲಾಖೆಗಳು ಜಾರ್ಖಂಡ್, ಪಶ್ಚಿಮ ಬಂಗಾಳದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿವೆ.

ED raids in Jharkhand  ED raids in Bengal  IT and ED conducting raids  raids at several places in Jharkhand and Bengal  ಸೇನಾ ಭೂಮಿ ಖನಿಜ ಗುತ್ತಿಗೆ ಹಗರಣ  ಪಶ್ಚಿಮ ಬಂಗಾಳ ಜಾರ್ಖಂಡ್​ನಲ್ಲಿ ಇಡಿ ಐಟಿ ದಾಳಿ  ಸೇನೆಗೆ ಸಂಬಂಧಿಸಿದ ಭೂಮಿ ಮಾರಾಟ ಆರೋಪ  ಖನಿಜ ಗುತ್ತಿಗೆ ಹಗರಣ ಪ್ರಕರಣ  ಜಾರಿ ನಿರ್ದೇಶನಾಲಯ ಹಾಗು ಆದಾಯ ತೆರಿಗೆ ಇಲಾಖೆ  ಪಶ್ಚಿಮ ಬಂಗಾಳದ ಹಲವು ಸ್ಥಳಗಳಲ್ಲಿ ದಾಳಿ  ಅಮಿತ್ ಅಗರ್ವಾಲ್ ಕಿಂಗ್ ಪಿನ್  ಜಾರ್ಖಂಡ್ ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ದಾಳಿ  ಖೋಟಾ ದಾಖಲೆಯಲ್ಲಿ ಭೂಮಿ ಮಾರಾಟ ಮತ್ತು ಖರೀದಿ ಬಯಲು  ಜಾರ್ಖಂಡ್​ನಲ್ಲಿ ದಾಳಿ ನಡೆಸಿರುವ ಐಟಿ
ಸೇನಾ ಭೂಮಿ-ಖನಿಜ ಗುತ್ತಿಗೆ ಹಗರಣ

ರಾಂಚಿ/ಕೋಲ್ಕತ್ತಾ: ಸೇನೆಗೆ ಸಂಬಂಧಿಸಿದ ಭೂ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತಂಡ ರಾಂಚಿ ಮತ್ತು ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆಸುತ್ತಿದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಅಮಿತ್ ಅಗರ್ವಾಲ್ ಎಂಬವರು ಸೇನೆಯ ಜಮೀನಿಗೆ ನಕಲಿ ದಾಖಲೆಗಳನ್ನು ಮಾಡಿ ಭೂ ಕಬಳಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರ್ಖಂಡ್‌ನ 8 ಮತ್ತು ಪಶ್ಚಿಮ ಬಂಗಾಳದ 4 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ರಾಂಚಿಯ ಬರಿಯಾತು ಎಂಬಲ್ಲಿ 4.55 ಎಕರೆ ಭೂಮಿ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದೆ. ಬಂಧಿತ ಅಮಿತ್ ಅಗರ್ವಾಲ್​ರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ತನಿಖಾ ತಂಡವು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಅಮಿತ್ ಅಗರ್ವಾಲ್ ಮತ್ತು ವಿಷ್ಣು ಅಗರ್ವಾಲ್ ಅವರ ಮನೆ, ಕಚೇರಿಗಳ ಮೇಲೆ ದಾಖಲೆಗಳನ್ನು ಜಾಲಾಡುತ್ತಿದೆ.

ರಾಂಚಿ ಮೂಲದ ಐಎಎಸ್ ಅಧಿಕಾರಿ, ಇಬ್ಬರು ಸಬ್ ರಿಜಿಸ್ಟ್ರಾರ್‌ಗಳು ಮತ್ತು ಇಬ್ಬರು ಸಿಒಗಳು ಸಹ ಸೇನಾ ಭೂಮಿ ಮಾರಾಟದ ವಿಷಯದಲ್ಲಿ ಭಾಗಿಯಾಗಿದ್ದಾರೆ. ರಾಂಚಿಯ ಬರಿಯಾತು, ಪುಂಡಗ್, ಜವಾಹರ್ ನಗರಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಅಮಿತ್ ಅಗರ್ವಾಲ್ ಕಿಂಗ್ ಪಿನ್: ಕೋಲ್ಕತ್ತಾದ ಖ್ಯಾತ ಉದ್ಯಮಿ ಅಮಿತ್ ಅಗರ್ವಾಲ್​ರನ್ನು ಈ ಹಿಂದೆ ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಅಮಿತ್ ಅಗರ್ವಾಲ್ ಅವರು ದೊಡ್ಡ ದೊಡ್ಡ ನಾಯಕರು-ಅಧಿಕಾರಿಗಳ ಕಪ್ಪು ಹಣವನ್ನು ಬಿಳಿ ಮಾಡಲು ಭೂಮಿ ಖರೀದಿ ಮತ್ತು ಮಾರಾಟದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಜಾರ್ಖಂಡ್​ನಲ್ಲಿ ದಾಳಿ ನಡೆಸಿರುವ ಐಟಿ: ಜಾರ್ಖಂಡ್‌ನಲ್ಲಿ ಕೇಂದ್ರೀಯ ಸಂಸ್ಥೆಗಳ ದಾಳಿ ಮುಂದುವರಿದಿದೆ. ಒಂದೆಡೆ ಖನಿಜ ಗುತ್ತಿಗೆ ಹಗರಣ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕಳುಹಿಸಿದೆ. ಅದೇ ಸಮಯದಲ್ಲಿ ಈಗ ಕಾಂಗ್ರೆಸ್ ಶಾಸಕ ಬರ್ಮೊ ಕುಮಾರ್ ಜಯಮಂಗಲ್ ಸಿಂಗ್ ಅವರ ಮನೆ ಮೇಲೆ ಐಟಿ ದಾಳಿ ಮಾಡಿದೆ. ಶುಕ್ರವಾರ ಬೆಳಗ್ಗೆನಿಂದ ಐಟಿ ತನ್ನ ದಾಳಿ ಮುಂದುವರಿಸಿದೆ. ಸುಮಾರು 30-35 ಆದಾಯ ತೆರಿಗೆ ಅಧಿಕಾರಿಗಳು ಬರ್ಮೊದಲ್ಲಿರುವ ಶಾಸಕ ಕುಮಾರ್ ಜೈಮಂಗಲ್ ಸಿಂಗ್ ಅವರ ಧೋರಿ ಸ್ಟಾಫ್ ಕ್ವಾರ್ಟರ್ ಮನೆ ಮೇಲೆ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಚೀನಾ ಮೂಲದ ಲೋನ್ ಕಂಪನಿಗಳ ಮೇಲೆ ಇಡಿ ದಾಳಿ: 78 ಕೋಟಿ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.