ETV Bharat / bharat

ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್‌ಸಿಂಕ್‌, ಡ್ಯಾನ್ಸ್‌: ತಾಂಜಾನಿಯಾ ಪ್ರಜೆಗೆ ಅಭಿನಂದನೆ

author img

By

Published : Feb 23, 2022, 12:31 PM IST

Updated : Feb 23, 2022, 12:39 PM IST

ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್​ಸಿಂಕ್ ಮತ್ತು ಡ್ಯಾನ್ಸ್ ಮಾಡುವ ಮೂಲಕ ಲಕ್ಷಾಂತರ ಭಾರತೀಯರ ಹೃದಯ ಗೆದ್ದ ತಾಂಜಾನಿಯದ ಕಿಲಿ ಪೌಲ್ ಅವರನ್ನು ಭಾರತೀಯ ಹೈಕಮಿಷನ್ ಅಭಿನಂದಿಸಿದೆ.

Internet sensation Kili Paul honoured by High Commission of India in Tanzania
ತಾಂಜಾನಿಯ ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿಪೌಲ್ ಅಭಿನಂದಿಸಿದ ಭಾರತೀಯ ಹೈಕಮೀಷನ್

ನವದೆಹಲಿ: ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್ ಸಿಂಕ್ ಮತ್ತು ಡ್ಯಾನ್ಸ್ ಮಾಡುವ ವಿಡಿಯೋಗಳಿಗೆ ಹೆಸರುವಾಸಿಯಾಗಿರುವ ತಾಂಜಾನಿಯಾದ ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪಾಲ್ ಅವರನ್ನು ತಾಂಜಾನಿಯಾದಲ್ಲಿರುವ ಭಾರತದ ಹೈಕಮಿಷನ್​ ಗೌರವಿಸಿದೆ.

ತಾಂಜಾನಿಯಾದ ಭಾರತೀಯ ಹೈಕಮಿಷನರ್ ಬಿನಯಾ ಪ್ರಧಾನ್ ಅವರು ಕಿಲಿ ಪೌಲ್ ಅವರನ್ನು ಗೌರವಿಸಿರುವ ಫೋಟೋಗಳನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್​ಸಿಂಕ್ ಮತ್ತು ನೃತ್ಯ ಮಾಡುವ ಮೂಲಕ ಲಕ್ಷಾಂತರ ಭಾರತೀಯರ ಪ್ರೀತಿ ಗಳಿಸಿರುವ ಕಿಲಿ ಪೌಲ್ ಭಾರತೀಯ ಹೈಕಮಿಷನರ್ ಕಚೇರಿಗೆ ಆಗಮಿಸಿದ್ದರು. ಅವರನ್ನು ಗೌರವಿಸಲಾಗಿದೆ ಎಂದು ಬಿನಯಾ ಪ್ರಧಾನ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಇನ್ಸ್​​ಟಾಗ್ರಾಮ್ ಸ್ಟೋರೀಸ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಕಿಲಿ ಪೌಲ್, ಭಾರತದ ಹೈಕಮಿಷನರ್‌ಗೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಶೇರ್​ ಷಾ ಚಿತ್ರದ ಹಾಡೊಂದಕ್ಕೆ ಲಿಪ್​ಸಿಂಕ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದರು ಕಿಲಿ ಪೌಲ್. ಇನ್ಸ್​ಟಾದಲ್ಲಿ 2.2 ಮಿಲಿಯನ್ ಫಾಲೋವರ್ಸ್​ ಹೊಂದಿರುವ ಕಿಲಿ ಪೌಲ್ ಟಾಲಿವುಡ್​ನ 'ಪುಷ್ಪಾ' ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ:ಕನ್ನಡ ಸಿನಿಮಾ ಕೊಂಡಾಡಿದ ತೆಲುಗು ನಟ ಕಾರ್ತಿಕೇಯನ್

ಕಿಲಿ ಪೌಲ್ ಅವರನ್ನು ಬಾಲಿವುಡ್​​​ನ ರಿಚಾ ಚಡ್ಡಾ, ಗುಲ್ ಪನಾಗ್, ಆಯುಷ್ಮಾನ್ ಖುರಾನಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಇನ್ಸ್​ಟಾದಲ್ಲಿ ಫಾಲೋ ಮಾಡುತ್ತಿದ್ದಾರೆ.

Last Updated :Feb 23, 2022, 12:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.