ETV Bharat / bharat

ಮಾರ್ಗ ಮಧ್ಯದಲ್ಲೇ ಇಂಜಿನ್​ನಿಂದ ವಿಭಜನೆಗೊಂಡ ರೈಲು ಬೋಗಿಗಳು.. ತಪ್ಪಿದ ಭಾರಿ ದುರಂತ!

author img

By

Published : Dec 14, 2022, 6:14 PM IST

ರೈಲಿನ ಕೊನೆಯ 4 ಬೋಗಿಗಳು ಇಂಜಿನ್​ನಿಂದ ಬೇರ್ಪಟ್ಟು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಬಿಹಾರ ರಾಜ್ಯದಲ್ಲಿ ನಡೆದಿದೆ.

Intercity Express divided into two parts in Bhagalpur
ಬಿಹಾರ: ಮಾರ್ಗ ಮಧ್ಯದಲ್ಲೆ ವಿಭಜನೆಗೊಂಡ ರೈಲು

ಭಾಗಲ್​ಪುರ್​(ಬಿಹಾರ): ಚಲಿಸುತ್ತಿರುವ ರೈಲಿನ ಬೋಗಿಗಳು ಇಂಜಿನ್​ನಿಂದ ವಿಭಜನೆ ಆಗಿರುವ ಘಟನೆ ಬಿಹಾರದ ಭಾಗಲ್​ಪುರ್ ​- ಕಿಯುಲ್​ ರೈಲು ಮಾರ್ಗದಲ್ಲಿ ನಡೆದಿದೆ. ರೈಲು ನಿಲ್ದಾಣದಿಂದ ಹೊರಟ ಮಾಲ್ಡಾ-ಕಿಯುಲ್​​ ಇಂಟರ್​ಸಿಟಿ ಎಕ್ಸ್​ಪ್ರೆಸ್​​ ರೈಲು ಸುಮಾರು ಎರಡು ಕಿಲೋಮೀಟರ್​ ಚಲಿಸುವಷ್ಟರಲ್ಲೆ ರೈಲಿನ ಹಿಂದಿನ 4 ಬೋಗಿಗಳು ಇಂಜಿನ್​ನಿಂದ ಬೇರ್ಪಟ್ಟಿದ್ದು. ಪ್ರಯಾಣಿಕರಲ್ಲಿ ಗೊಂದಲ ಉಂಟು ಮಾಡಿದೆ

15 ಬೋಗಿಗಳನ್ನು ಹೊಂದಿದ್ದ ರೈಲು ಭಾಗಲ್​ಪುರ್​ನಿಂದ ಕಿಯುಲ್​ಗೆ ಪ್ರಯಾಣಿಸುತಿತ್ತು, ಮಾರ್ಗ ಮಧ್ಯೆದಲ್ಲಿ ರೈಲಿನ ಕೊನೆಯ ಬೋಗಿಗಳು ಇಂಜಿನ್​ನಿಂದ ಬೇರ್ಪಟ್ಟಿದ್ದನ್ನು ತಿಳಿದ ಲೋಕೋ ಪೈಲಟ್​​, ರೈಲನ್ನು ನಿಲ್ಲಿಸಿದರು. ಆ ಬಳಿಕ ತಾಂತ್ರಿಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿ, ಬೋಗಿಗಳನ್ನು ಮರು ಬೋಗಿಗಳನ್ನು ಜೋಡಿಸುವ ಕಾರ್ಯ ಮಾಡಲಾಯಿತು.

ಇದರಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನೆಗೆ ರೈಲ್ವೆ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ :21 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಸಗಟು ಹಣದುಬ್ಬರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.