ಮತ್ತೊಮ್ಮೆ ವಾಟ್ಸಾಪ್, ಫೇಸ್​ಬುಕ್, ಇನ್​ಸ್ಟಾ ಸರ್ವರ್ ಡೌನ್!

author img

By

Published : Oct 9, 2021, 1:49 AM IST

Instagram, Facebook, WhatsApp
Instagram, Facebook, WhatsApp ()

Instagram, Facebook, WhatsApp ಬಳಕೆಯಲ್ಲಿ ಮತ್ತೊಮ್ಮೆ ಸಮಸ್ಯೆ ಎದುರಾಗಿದೆ. ಶೀಘ್ರದಲ್ಲೇ ಸೇವೆ ಲಭ್ಯವಾಗಲಿದೆ ಎಂದು ಸಾಮಾಜಿಕ ಜಾಲತಾಣಗಳು ಟ್ವಿಟ್ ಮಾಡಿವೆ.

ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ವಾಟ್ಸಾಪ್ ಮತ್ತು ಇನ್​ಸ್ಟಾಗ್ರಾಮ್ ( Instagram, Facebook, WhatsApp) ಮತ್ತೊಮ್ಮೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಮೂಲಕ ಇದೇ ವಾರದಲ್ಲಿ ಎರಡನೇ ಬಾರಿ ಈ ಸಾಮಾಜಿಕ ಜಾಲತಾಣಗಳ ಸೈಟ್ ಡೌನ್ ಆಗಿದೆ.

ತಾಂತ್ರಿಕ ಸಮಸ್ಯೆಯಿಂದಾಗಿ ಈ ತೊಂದರೆ ಕಾಣಿಸಿಕೊಂಡಿದ್ದು, ಇಂದು ರಾತ್ರಿ ಈ ಸಮಸ್ಯೆ ಉಂಟಾಗಿದೆ. ಭಾರತ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಈ ಸಮಸ್ಯೆ ಕಂಡುಬಂದಿದೆ.

ಈ ಸಂಬಂಧ ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಮ್ ಸೇವೆ ವಿಳಂಬಕ್ಕೆ ಕ್ಷಮೆ ಕೇಳಿ ಟ್ವಿಟ್ ಮಾಡಿದೆ. ನಮ್ಮ ಆ್ಯಪ್​ಗಳ ಬಳಕೆ ವೇಳೆ ಹಲವರು ಸಮಸ್ಯೆ ಎದುರಿಸುತ್ತಿದ್ದು, ಶೀಘ್ರದಲ್ಲೇ ಬಗೆಹರಿಸುವುದಾಗಿ ತಿಳಿಸಿವೆ.

ಸೋಮವಾರ ಕೂಡ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಸುಮಾರು 6 ಗಂಟೆಗಳ ಕಾಲ ಸಾಮಾಜಿಕ ಜಾಲತಾಣಗಳ ಬಳಕೆ ಅಲಭ್ಯವಾಗಿತ್ತು.

  • "We’re so sorry and are working as quickly as possible to fix.," Instagram issues a statement after it goes down for some users, second time this week. pic.twitter.com/8Cv6LqG5K2

    — ANI (@ANI) October 8, 2021 " class="align-text-top noRightClick twitterSection" data=" ">

ಭಾರತದಲ್ಲಿ 410 ಮಿಲಿಯನ್​ಗಿಂತಲೂ ಹೆಚ್ಚಿನ ಬಳಕೆದಾರರು ಫೇಸ್​ಬುಕ್​ ಬಳಕೆ ಮಾಡ್ತಿದ್ದು, ವಾಟ್ಸ್​ಆ್ಯಪ್​​​ 530 ದಶಲಕ್ಷಕ್ಕೂ ಅಧಿಕ ಬಳಕೆದಾರರನ್ನ ಹೊಂದಿದ್ದು, ಇನ್​​​ಸ್ಟಾಗ್ರಾಂನಲ್ಲಿ 210 ಮಿಲಿಯನ್​ ಬಳಕೆದಾರರು ಇದ್ದಾರೆ.

(ಪ್ರಪಂಚದಾದ್ಯಂತ ವಾಟ್ಸ್​ಆ್ಯಪ್​​, ಇನ್​​ಸ್ಟಾಗ್ರಾಂ, ಫೇಸ್​ಬುಕ್​ ಡೌನ್​.. ಬಳಕೆದಾರರ ಪರದಾಟ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.