ETV Bharat / bharat

ಸ್ವಾತಂತ್ರ್ಯ ದಿನಕ್ಕೂ ಮುನ್ನ ಪಾಕ್​ ನುಸುಳುಕೋರನ ಯತ್ನ ವಿಫಲ.. ಶಂಕಿತನನ್ನು ಹೊಡೆದುರುಳಿಸಿದ ಸೇನೆ

author img

By

Published : Aug 14, 2023, 10:36 AM IST

ಗಡಿ ರೇಖೆ ದಾಟಿ ಬಂದ ನುಸುಳುಕೋರನೊಬ್ಬನನ್ನು ಬಿಎಸ್​ಎಫ್​ ಯೋಧರು ಹೊಡೆದುರುಳಿಸಿದ ಘಟನೆ ಪಂಜಾಬ್​ನ ಪಠಾಣ್​ಕೋಟ್​ ಜಿಲ್ಲೆಯಲ್ಲಿ ನಡೆದಿದೆ.

Pakistani intruder shot dead along IB  Pakistani intruder shot dead in Punjab Pathankot  India Pakistan border  infiltration bid foiled  Independence day celebrations  ಸ್ವಾತಂತ್ರ್ಯಕ್ಕೂ ಮುನ್ನ ಪಾಕ್​ ನುಸುಳುಕೋರನ ಯತ್ನ ವಿಫಲ  ಶಂಕಿತನನ್ನು ಹೊಡೆದುರುಳಿಸಿದ ಸೇನೆ  ಗಡಿ ರೇಖೆ ದಾಟಿ ಬಂದ ನುಸುಳುಕೋರ  ಬಿಎಸ್​ಎಫ್​ ಯೋಧರು ಹೊಡೆದುರುಳಿಸಿದ ಘಟನೆ  ಗಡಿ ದಾಟಲು ಯತ್ನಿಸಿದ ಪಾಕಿಸ್ತಾನಿ ನುಸುಳುಕೋರ  ಯೋಧರು ಗುಂಡಿಕ್ಕಿ ಹೊಡೆದುರುಳಿಸಿ  ಬಿಎಸ್‌ಎಫ್ ಅಧಿಕಾರಿಯೊಬ್ಬರು ಖಚಿತ ಮಾಹಿತಿ  ಕರ್ತವ್ಯದಲ್ಲಿದ್ದ ಬಿಎಸ್ಎಫ್ ಪಡೆ
ಸ್ವಾತಂತ್ರ್ಯಕ್ಕೂ ಮುನ್ನ ಪಾಕ್​ ನುಸುಳುಕೋರನ ಯತ್ನ ವಿಫಲ

ಪಠಾಣ್‌ಕೋಟ್, ಪಂಜಾಬ್ : ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸಿದ ಪಾಕಿಸ್ತಾನಿ ನುಸುಳುಕೋರನೊಬ್ಬನನ್ನು ಯೋಧರು ಗುಂಡಿಕ್ಕಿ ಹೊಡೆದುರುಳಿಸಿದ್ದಾರೆ. ಈ ಬಗ್ಗೆ ಬಿಎಸ್‌ಎಫ್ ಅಧಿಕಾರಿಯೊಬ್ಬರು ಖಚಿತ ಮಾಹಿತಿ ನೀಡಿದ್ದಾರೆ. ಸೋಮವಾರ ನಸುಕಿನ ವೇಳೆ ಜಿಲ್ಲೆಯ ಸಿಂಬಲ್ ಸಾಕೋಲ್ ಗ್ರಾಮದ ಬಳಿ ನಡೆದಿದೆ. ಮಧ್ಯರಾತ್ರಿ 12:30 ರ ಸುಮಾರಿಗೆ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧರು ಕೆಲವು ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಬಿಎಸ್ಎಫ್ ಪಡೆಗಳು ಒಳನುಸುಳುಕೋರರಿಗೆ ಅಲ್ಲೇ ನಿಲ್ಲುವಂತೆ ಸೂಚಿಸಿದ್ದಾರೆ. ಆದರೆ, ನುಸುಳುಕೋರರು ಯೋಧರ ಮಾತಿಗೆ ಕಿವಿಗೊಡದೇ ಮುನ್ನುಗ್ಗುತ್ತಿದ್ದರು. ಯೋಧರ ಎಚ್ಚರಿಕೆಯ ಸಂದೇಶಗಳನ್ನು ನಿರ್ಲಕ್ಷಿಸಿ ನುಸುಳುಕೋರರು ಗಡಿಯಲ್ಲಿ ನುಗ್ಗುತ್ತಿದ್ದರು. ಎಚ್ಚೆತ್ತ ಯೋಧರು ನುಸುಳುಕೋರರ ಮೇಲೆ ಗುಂಡು ಹಾರಿಸಿದ್ದು, ಗಡಿ ದಾಟಿದ ವ್ಯಕ್ತಿಯನ್ನು ಸ್ಥಳದಲ್ಲೇ ಕೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆಗಸ್ಟ್ 11 ರಂದು BSF ಪಡೆಗಳು ತರ್ನ್ ತರನ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಒಳನುಗ್ಗುವವರನ್ನು ಹೊಡೆದುರುಳಿಸಿದ್ದರು. ಇದರೊಂದಿಗೆ, ಪಾಕಿಸ್ತಾನ - ಭಾರತ ಗಡಿಯಲ್ಲಿ ಮತ್ತೊಂದು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಯಿತು. ಆತ್ಮರಕ್ಷಣೆಗಾಗಿ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಇದು ಗಡಿ ದಾಟಿದವರ ಸಾವಿಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ನಾಳೆಯ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಮತ್ತು ತರ್ನ್ ತರನ್‌ನ ಜಿಲ್ಲೆಯಲ್ಲಿ ನಡೆದ ಘಟನೆಯ ಕೆಲ ದಿನಗಳ ಬಳಿಕ ನಡೆದಿದೆ.

ಮೇ ತಿಂಗಳಲ್ಲಿ ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯ ಸಮೀಪದಲ್ಲಿ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ಬಿಎಸ್‌ಎಫ್ ಬಂಧಿಸಿತು. ಆದರೆ, ಪಾಕಿಸ್ತಾನದಿಂದ ಇಬ್ಬರು ಅಪರಿಚಿತರು ಭಾರತೀಯ ಪ್ರದೇಶಕ್ಕೆ ಪ್ರವೇಶಿಸಿದ್ದರು. ಭಾರತಕ್ಕೆ ನುಗ್ಗಿದ್ದ ನುಸುಳುಕೋರರಿಬ್ಬರು ಮೂರು ಚೀಲಗಳ ಶಂಕಿತ ನಿಷೇಧಿತ ಉತ್ಪನ್ನಗಳನ್ನು ಹೊತ್ತು ತಂದಿರುವುದು ಪತ್ತೆಯಾಗಿತ್ತು.

2022 ರಲ್ಲಿ, ಪಂಜಾಬ್ ಗಡಿಯಲ್ಲಿನ ಬಿಎಸ್‌ಎಫ್ ಸೈನಿಕರು ಇಬ್ಬರು ಪಾಕಿಸ್ತಾನಿ ದಾಳಿಕೋರರನ್ನು ಹೊಡೆದುರುಳಿಸಿದರು. ಇದುವರೆಗೆ ಬಿಎಸ್​ಎಫ್​ ಯೋಧರು ಗಡಿ ರೇಖೆಯ ಇನ್ನೊಂದು ಬದಿಯಿಂದ ಕಳುಹಿಸಲಾದ 22 ಡ್ರೋನ್‌ಗಳನ್ನು ತಡೆದರು ಮತ್ತು 316 ಕಿಲೋಗ್ರಾಂಗಳಷ್ಟು ಡ್ರಗ್ಸ್​ ಪತ್ತೆ ಮಾಡಿದ್ದಾರೆ. ನಾಳೆ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಗಡಿಯಲ್ಲಿ ಮತ್ತು ದೇಶದ ಪ್ರಮುಖ ಸ್ಥಳಗಳಲ್ಲಿ ಯೋಧರು ಕಟ್ಟೆಚ್ಚರ ವಹಿಸಿದ್ದಾರೆ. ಅಷ್ಟೇ ಅಲ್ಲ ಸ್ಥಳೀಯ ಆಡಳಿತವೂ ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಓದಿ: ಸ್ವಾತಂತ್ರ್ಯ ದಿನಾಚರಣೆಗೆ ದೇಶದ 1800 ವಿಶೇಷ ಅತಿಥಿಗಳು: ಇಂದು ದೇಶವನ್ನುದ್ದೇಶಿಸಿ ಮುರ್ಮು ಭಾಷಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.