ETV Bharat / bharat

Covid-19 vaccination drive in India : ಭಾರತದ ಲಸಿಕಾ ಅಭಿಯಾನಕ್ಕೆ 1ವರ್ಷ

author img

By

Published : Jan 16, 2022, 1:14 PM IST

India's Covid vaccination drive : ಭಾರತದ ಕೋವಿಡ್ ಲಸಿಕಾ ಅಭಿಯಾನ 1 ವರ್ಷವನ್ನು ಪೂರ್ಣಗೊಳಿಸಿದೆ. ಈವರೆಗೆ 156.76 ಕೋಟಿ ಡೋಸ್‌ಗಳನ್ನು ನೀಡಲಾಗಿದೆ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ : ಕೋವಿಡ್-19 ವಿರುದ್ಧ ದೇಶವ್ಯಾಪಿ ಆರಂಭಿಸಲಾದ 'ಲಸಿಕಾ ಅಭಿಯಾನ' ಇಂದಿಗೆ (ಭಾನುವಾರ) ಒಂದು ವರ್ಷವನ್ನು ಪೂರೈಸಿದೆ. ಈ ಒಂದು ವರ್ಷದ ಅವಧಿಯಲ್ಲಿ 156.76 ಕೋಟಿಗೂ ಹೆಚ್ಚು ಡೋಸ್‌ ಲಸಿಕೆ ವಿತರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ವಯಸ್ಕ ಜನಸಂಖ್ಯೆಯ ಶೇ.92ಕ್ಕಿಂತ ಹೆಚ್ಚು ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ ಮತ್ತು ಶೇ.68ಕ್ಕಿಂತ ಹೆಚ್ಚು ಜನರು 2ಡೋಸ್​ ಲಸಿಕೆ ಪಡೆದಿದ್ದಾರೆ.

ಲಸಿಕಾ ಅಭಿಯಾನದ ಕೆಲವು ಪ್ರಮುಖ ಅಂಶಗಳು

  • 2021ರ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಚುಚ್ಚುಮದ್ದು ನೀಡುವುದರೊಂದಿಗೆ ಈ ಅಭಿಯಾನವನ್ನು ಪ್ರಾರಂಭಿಸಲಾಯಿತು.
  • ಫೆಬ್ರವರಿ 2ರಿಂದ ಮುಂಚೂಣಿ ಕಾರ್ಯಕರ್ತರಿಗೆ.
  • ಮಾರ್ಚ್ 1 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ.
  • ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ.
  • ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ.
  • ಜನವರಿ 3 ರಿಂದ 15-18 ವರ್ಷ ವಯಸ್ಸಿನ ಹದಿಹರೆಯದವರಿಗೆ.
  • ಜನವರಿ 10ರಿಂದ ಬೂಸ್ಟರ್​​ ಲಸಿಕೆ ನೀಡಲಾಗುತ್ತಿದೆ.

ಲಸಿಕೆ ಹಾಕಲು ಗಣನೀಯವಾಗಿ ಕಡಿಮೆ ಜನಸಂಖ್ಯೆ ಹೊಂದಿರುವ ಅನೇಕ ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಲಸಿಕೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಲಸಿಕೆ ಅಭಿಯಾನದಲ್ಲಿ ದೇಶದ ಮೈಲಿಗಲ್ಲುಗಳು :

  • 9 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 100 ಕೋಟಿ ಡೋಸ್‌ ನೀಡಿದ ಹೆಗ್ಗಳಿಕೆ.
  • ಒಂದೇ ದಿನದಲ್ಲಿ 2.51 ಕೋಟಿ ಡೋಸ್‌ ನೀಡಿಕೆ.
  • ಹಲವಾರು ಬಾರಿ ಒಂದು ದಿನದಲ್ಲಿ ಒಂದು ಕೋಟಿ ಡೋಸ್‌ಗಳನ್ನು ನೀಡಿರುವುದು
  • ಕಳೆದ ವರ್ಷ ಅಕ್ಟೋಬರ್ 21ರಂದು ದೇಶದಲ್ಲಿ ನೀಡಲಾದ ಕೋವಿಡ್ ಲಸಿಕೆ ಡೋಸ್ 100 ಕೋಟಿ ಗಡಿಯನ್ನು ಮೀರಿದೆ.

ಈವರೆಗಿನ ವ್ಯಾಕ್ಸಿನೇಷನ್ ಸ್ಥಿತಿ :

  • ಈವರೆಗೆ ವ್ಯಾಕ್ಸಿನೇಷನ್ ಕವರೇಜ್ 156.76 ಕೋಟಿ ಮೀರಿದೆ.
  • 90.89 ಕೋಟಿ ಮೊದಲ ಡೋಸ್‌ ಪಡೆದವರು
  • 65.44 ಕೋಟಿ 2ನೇ ಡೋಸ್‌ ಪಡೆದವರು
  • 3.51 ಕೋಟಿ ಲಸಿಕೆ ಪಡೆದ ಮಕ್ಕಳ ಪ್ರಮಾಣ
  • 43.19 ಲಕ್ಷಕ್ಕೂ ಹೆಚ್ಚು ಮುನ್ನೆಚ್ಚರಿಕೆ ಡೋಸ್‌ ಪಡೆದವರು.
  • 79.75 ಕೋಟಿ ಲಸಿಕೆ ಪಡೆದ ಪುರುಷರು
  • 76 ಕೋಟಿಗೂ ಹೆಚ್ಚು ಲಸಿಕೆ ಪಡೆದ ಮಹಿಳೆಯರು
  • 6 ಲಕ್ಷಕ್ಕೂ ಹೆಚ್ಚು ಕೈದಿಗಳಿಗೆ ಲಸಿಕೆ
  • 3.69 ಲಕ್ಷಕ್ಕೂ ಹೆಚ್ಚು ಲಸಿಕೆ ಪಡೆದ ಟ್ರಾನ್ಸ್‌ಜೆಂಡರ್
  • ಬುಡಕಟ್ಟು ಜಿಲ್ಲೆಗಳಲ್ಲಿ 11 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಲಸಿಕೆ
  • ಕೋವಿಡ್ ಲಸಿಕೆ ಕೇಂದ್ರಗಳಲ್ಲಿ 40 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ
  • ಗ್ರಾಮೀಣ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ 99 ಕೋಟಿಗೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ.

ಇದನ್ನೂ ಓದಿ: Karnataka Covid update : ರಾಜ್ಯದಲ್ಲಿ ಹಳ್ಳಿ ಹಳ್ಳಿಗಳಿಗೂ ಆವರಿಸಿದ ಕೋವಿಡ್ ಸೋಂಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.