ETV Bharat / bharat

ದೇಶದಲ್ಲಿ 3.48 ಲಕ್ಷ ಜನರಿಗೆ ಕೋವಿಡ್​ ದೃಢ, ಒಂದೇ ದಿನ 4,205 ರೋಗಿಗಳು ಸಾವು, ಸೋಂಕಿತರೂ ಹೆಚ್ಚು ಗುಣಮುಖ

author img

By

Published : May 12, 2021, 9:56 AM IST

Updated : May 12, 2021, 11:13 AM IST

ಕಳೆದ 24 ಗಂಟೆಯಲ್ಲಿ ದಾಖಲಾದ ಪ್ರಕರಣಗಳೊಂದಿಗೆ ದೇಶದಲ್ಲಿ ಈವರೆಗಿನ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,33,40,938ಕ್ಕೆ ಏರಿದೆ. ನಿನ್ನೆಯವರೆಗೆ ಒಟ್ಟು 30.75 ಕೋಟಿ ಜನರಿಗೆ ಕೋವಿಡ್​ ಪರೀಕ್ಷೆ ಮಾಡಲಾಗಿದೆ.

India reports 3,48,421 new  COVID19 cases
ಕಳೆದ 24 ಗಂಟೆಗಳಲ್ಲಿ 3.48 ಲಕ್ಷ ಜನರಿಗೆ ಕೋವಿಡ್​ ದೃಢ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,48,421 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 4,205 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 3,55,338 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈವರೆಗಿನ ಅಂಕಿ-ಅಂಶ:

ದೇಶದಲ್ಲಿ ಈವರೆಗೆ ಒಟ್ಟು 2,33,40,938 ಕೊರೊನಾ ಪ್ರಕರಣಗಳು ದಾಖಲಾಗಿವೆ. 1,93,82,642 ಸೋಂಕಿತರು ಗುಣಮುಖರಾಗಿದ್ದಾರೆ. ಸುಮಾರು 2,54,197 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 37,04,099 ಕೋವಿಡ್​ ಪ್ರಕರಣಗಳಿವೆ.

ಇದನ್ನೂ ಓದಿ: ಇತ್ತೀಚಿನ ತಂತ್ರಜ್ಞಾನಗಳು..ಕೊರೊನಾ ವೈರಸ್ ಇರುವಾಗ ಹಾಗು ನಂತರ

ಕೋವಿಡ್ ಪರೀಕ್ಷೆ:

ಮೇ 11ರ ವರೆಗೆ 30,75,83,991 ಮಂದಿಗೆ ಕೊರೊನಾ ಟೆಸ್ಟ್​ ಮಾಡಲಾಗಿದೆ. ನಿನ್ನೆ ಒಂದೇ ದಿನ 19,83,804 ಜನರ ಸ್ಯಾಂಪಲ್​​​ಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ರಿಸರ್ಚ್​ ತಿಳಿಸಿದೆ.

ಲಸಿಕೆ ವಿತರಣೆ:

ದೇಶಾದ್ಯಂತ ಇಲ್ಲಿಯವರೆಗೆ 17,52,35,991 ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ.

Last Updated : May 12, 2021, 11:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.