ETV Bharat / bharat

ಇಳಿಕೆಯತ್ತ ಕೋವಿಡ್​ ಪ್ರಕರಣ.. ಇಂದು ದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆ

author img

By

Published : Apr 26, 2022, 10:26 AM IST

India COVID update : ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2,483 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, ಕ್ರಮೇಣ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಾಣುತ್ತಿದೆ.

India Covid tracker, Union Ministry of Health and Family Welfare report, India covid cases, India Tuesday corona report, ಭಾರತದ ಕೋವಿಡ್​ ಸಂಖ್ಯೆ, ಭಾರತದಲ್ಲಿ ಮಂಗಳವಾರದ ಕೋವಿಡ್​ ವರದಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋವಿಡ್​ ವರದಿ, ಭಾರತ ಕೊರೊನಾ ಪ್ರಕರಣಗಳು,
ಇಳಿಕೆಯತ್ತ ಸಾಗುತ್ತಿರುವ ಕೋವಿಡ್​ ಪ್ರಕರಣಗಳು

ನವದೆಹಲಿ : ಹೊಸ ಕೋವಿಡ್ ಸೋಂಕುಗಳ ಸಂಖ್ಯೆಯಲ್ಲಿ ಸ್ಥಿರವಾಗಿ ಇಳಕೆ ಕಾಣುತ್ತಿದ್ದು, ಇಂದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,483 ಹೊಸ ಪ್ರಕರಣಗಳು ದಾಖಲೆಯಾಗಿವೆ. ಕೊರೊನಾ ಪಾಸಿಟಿವ್ ದರವು ಶೇ 0.55ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ತಿಳಿಸಿದೆ.

ನಿನ್ನೆಗೆ ಹೋಲಿಸಿದರೆ ದೇಶದಲ್ಲಿ ಇಂದು ಒಟ್ಟು 58 ಕೋವಿಡ್ ಪ್ರಕರಣ ಕಡಮೆಯಾಗಿವೆ. ದೇಶದಲ್ಲಿ ಸೋಮವಾರ 2,541 ಕೋವಿಡ್ ಪ್ರಕರಣ ಪತ್ತೆಯಾಗಿದ್ದವು. ಸದ್ಯದ ಮಟ್ಟಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳು 15,636 ರಷ್ಟಿವೆ ಎಂದು ತಿಳಿದು ಬಂದಿದೆ.

ಓದಿ: ದೇಶದಲ್ಲಿ ಕೊಂಚ ಇಳಿಕೆಯತ್ತ ಮುಖ ಮಾಡಿದ ಕೊರೊನಾ ಪ್ರಕರಣಗಳು!

ಕಳೆದ 24 ಗಂಟೆಗಳಲ್ಲಿ ಒಟ್ಟು 1,970 ಕೋವಿಡ್ ರೋಗಿಗಳು ರೋಗದಿಂದ ಚೇತರಿಸಿಕೊಂಡಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಒಟ್ಟು ಚೇತರಿಕೆಯ ಸಂಖ್ಯೆ 4,25,23,311ಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ ಶೇ. 98.75 ರಷ್ಟಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿ ನಿರ್ವಹಿಸಲಾದ ಒಟ್ಟು ಲಸಿಕೆ ಡೋಸ್​ಗಳ ಸಂಖ್ಯೆ 187.95 ಕೋಟಿ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.