ETV Bharat / bharat

ಒಮಿಕ್ರಾನ್ ಬಿಎಫ್ 7 ತಡೆಗೆ ಭಾರತ ಸಶಕ್ತ ..ವಿಮಾನಯಾನ ನಿರ್ಬಂಧ,ಲಾಕ್​ಡೌನ್ ಹೇರುವ ಅಗತ್ಯವಿಲ್ಲ: ತಜ್ಞರ  ಅಭಿಮತ

author img

By

Published : Dec 24, 2022, 1:48 PM IST

Updated : Dec 24, 2022, 2:31 PM IST

ಭಾರತದಲ್ಲಿ ಪ್ರಸ್ತುತ ಕೋವಿಡ್ ಪ್ರಕರಣದ ಬೆಳವಣಿಗೆ ಅಷ್ಟೇನೂ ದುಷ್ಪರಿಣಾಮವಾಗಿಲ್ಲ. ಅದ್ದರಿಂದ ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧಿಸುವುದು ಹಾಗೂ ಲಾಕ್‌ಡೌನ್ ಹೇರುವಷ್ಟರ ಮಟ್ಟಿಗೆ ಅಪಾಯ ಸ್ಥಿತಿಗೆ ಬಂದಿಲ್ಲ ಎಂದು ಅನೇಕ ತಜ್ಞರು ಸಲಹೆ ನೀಡಿದ್ದಾರೆ.

Increase in Covid cases does not require flight restrictions
ಕೋವಿಡ್​ ಪ್ರಕರಣ ಹೆಚ್ಚಳ ವಿಮಾನಯಾನ ನಿರ್ಬಂಧ ಅಗತ್ಯವಿಲ್ಲ

ನವದೆಹಲಿ: ಭಾರತದಲ್ಲಿ ಪ್ರಸ್ತುತ ಕೋವಿಡ್ ಪ್ರಕರಣದ ಬೆಳವಣಿಗೆಯೂ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ನಿರ್ಬಂಧಿಸುವುದು ಹಾಗೂ ಲಾಕ್‌ಡೌನ್ ಹೇರುವಷ್ಟರ ಮಟ್ಟಿಗೆ ಅಪಾಯಕರ ಸ್ಥಿತಿಗೆ ಬಂದಿಲ್ಲ. ಆದರೆ, ಕೆಲವು ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳದ ಪರಿಣಾಮ ದೇಶದಲ್ಲಿ ಬಿಗಿಯಾದ ಕಣ್ಗಾವಲು ಮತ್ತು ಜಾಗರೂಕತೆ ಅವಶ್ಯವಿದೆ ಎಂದು ವಿವಿಧ ತಜ್ಞರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಡಾ ರಂದೀಪ್ ಗುಲೇರಿಯಾ ಹೇಳುವುದೇನು? ಭಾರತದಲ್ಲಿ 'ಹೈಬ್ರಿಡ್ ಇಮ್ಯುನಿಟಿ' ವ್ಯಾಕ್ಸಿನೇಷನ್‌ನಿಂದ ಬಲವರ್ಧಿತ ನೈಸರ್ಗಿಕ ಸೋಂಕಿನಿಂದ ಉತ್ಪತಿಯಾಗುವ ನಿರೋಧಕ ಶಕ್ತಿಯ ಪ್ರಯೋಜನದಿಂದ ತೀವ್ರವಾದ ಕೋವಿಡ್ ಪ್ರಕರಣಗಳು ಬಹಳ ವಿರಳವಾಗಿದೆ. ಪ್ರಸ್ತುತ ಭಾರತವು ಆರಾಮದಾಯಕ ಪರಿಸ್ಥಿತಿಯಲ್ಲಿದೆ. ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸುವ ಅಥವಾ ಲಾಕ್‌ಡೌನ್ ಹೇರುವ ಅಗತ್ಯವಿಲ್ಲ" ಎಂದು ಎಐಐಎಂಎಸ್ ಮಾಜಿ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.

ಕೋವಿಡ್​ ಹರಡುವಿಕೆ ತಡೆಗೆ ವಿಮಾನಗಳನ್ನು ನಿಷೇಧಿಸುವುದು ಪರಿಣಾಮಕಾರಿಯಲ್ಲ ಎಂದು ಹಿಂದಿನ ಅನುಭವಗಳಿಂದ ಗೊತ್ತಾಗುತ್ತದೆ. ಚೀನಾದಲ್ಲಿ ಭಯಾನಕವಾಗಿ ಜನರನ್ನು ಸತಾಯಿಸುತ್ತಿರುವ ಕೋವಿಡ್ ರೂಪಾಂತರ Omicron BF 7, ಭಾರತ ದೇಶದಲ್ಲಿ ಈಗಾಗಲೇ ಕಂಡುಬಂದಿದೆ ಎಂದಿದ್ದಾರೆ.

ಈಗಾಗಲೇ ಜನರಲ್ಲಿ ರೋಗನಿರೋಧಕ ಶಕ್ತಿ ಬಂದಿದೆ: ಮುಂದಿನ ದಿನಗಳಲ್ಲಿ ಲಾಕ್‌ಡೌನ್ ಅಗತ್ಯವಿದೆಯೇ ಎಂದು ಕೇಳಿದಾಗ, ಡಾ ಗುಲೇರಿಯಾ, "ಉತ್ತಮ ಲಸಿಕೆ ವ್ಯಾಪ್ತಿ ಮತ್ತು ನೈಸರ್ಗಿಕ ಸೋಂಕಿನಿಂದಾಗಿ ಭಾರತೀಯ ಜನಸಂಖ್ಯೆಯು ಈಗಾಗಲೇ ಹೈಬ್ರಿಡ್ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ತೀವ್ರವಾದ ಕೋವಿಡ್ ಪ್ರಕರಣಗಳು ಮತ್ತು ಆಸ್ಪತ್ರೆಗೆ ದಾಖಲಾಗುವುದು ಅಸಂಭವವಾಗಿದೆ" ಎಂದು ಹೇಳಿದರು.

ಎಚ್ಚರಿಕೆ ವಹಿಸಿ, ಲಾಕ್​ಡೌನ್ ತರಹದ ಪರಿಸ್ಥಿತಿ ಇಲ್ಲ; ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯ ಪಲ್ಮನರಿ, ಕ್ರಿಟಿಕಲ್ ಕೇರ್ ಮತ್ತು ಸ್ಲೀಪ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ ನೀರಜ್ ಗುಪ್ತಾ ಮಾತನಾಡಿ, ಚೀನಾ ಮತ್ತು ಇತರ ಕೆಲವು ದೇಶಗಳಲ್ಲಿ ಕೋವಿಡ್ 19 ಪ್ರಕರಣಗಳ ಉಲ್ಬಣವನ್ನು ಗಮನಿಸಿದರೆ ಭಾರತವು ಎಚ್ಚರಿಕೆ ವಹಿಸುವ ಅಗತ್ಯವಿದೆ.

ಆದರೆ, “ಲಾಕ್‌ಡೌನ್ ತರಹದ ಪರಿಸ್ಥಿತಿ ಅಲ್ಲ ಎಂದು ತಿಳಿಸಿದ ಅವರು, ಕಡಿಮೆ ಸಂಖ್ಯೆಯ ಕೋವಿಡ್ ಪಾಸಿಟಿವ್ ಪ್ರಕರಣಗಳಿಂದ ಆತ್ಮತೃಪ್ತಿ ಹೆಚ್ಚಿರುವುದರಿಂದ ಕೋವಿಡ್-ಸೂಕ್ತ ನಡವಳಿಕೆಯನ್ನು ಬಲಪಡಿಸಬೇಕಾಗಿದೆ. ಸಾಂಕ್ರಾಮಿಕ ರೋಗವು ಇನ್ನೂ ಮುಗಿದಿಲ್ಲವಾದ್ದರಿಂದ ಜಾಗತಿಕ ಸನ್ನಿವೇಶವನ್ನು ಗಮನಿಸಿದರೆ ನಾವು ಸಡಿಲಗೊಳ್ಳಲು ಸಾಧ್ಯವಿಲ್ಲ" ಎಂದು ಸಲಹೆ ನೀಡಿದ್ದಾರೆ.

'ಹೈಬ್ರಿಡ್ ಇಮ್ಯುನಿಟಿ'ಯು ವ್ಯಕ್ತಿಯನ್ನು ಭವಿಷ್ಯದ ಸೋಂಕುಗಳ ವಿರುದ್ಧ ರೋಗ/ಮರಣ ಪ್ರಯೋಜನಗಳೊಂದಿಗೆ ಹೆಚ್ಚು ಸುರಕ್ಷಿತವಾಗಿಸುತ್ತದೆ ಎಂದ ಅವರು, "ತಡೆಗಟ್ಟುವಿಕೆ, ಆರಂಭಿಕ ರೋಗ ನಿರ್ಣಯ ಮತ್ತು ಉತ್ತಮ ಲಸಿಕೆ ತಂತ್ರದಂತಹ ಸ್ವಯಂಪ್ರೇರಿತ ಕ್ರಮಗಳನ್ನು ನಾಗರಿಕರು ತೆಗೆದುಕೊಳ್ಳಬೇಕಿದೆ. ಇದರಿಂದ ಅವರಿಗೂ ಹಾಗೂ ದೇಶಕ್ಕೂ ಒಳ್ಳೆಯದಯ ಎಂದು ನೀರಜ್​ ಗುಪ್ತಾ ಹೇಳಿದ್ದಾರೆ.

ಇದನ್ನೂಓದಿ:ಚೀನಾದಿಂದ ​ಬರುವವರಿಗೆ ಆರ್​ಟಿಪಿಸಿಆರ್​, ಪಾಸಿಟಿವ್​ ಬಂದರೆ ಕ್ವಾರಂಟೈನ್​: ಕೇಂದ್ರ ಸರ್ಕಾರದ ಸ್ಟ್ರಿಕ್ಟ್​​ ಆರ್ಡರ್​​​!

Last Updated : Dec 24, 2022, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.