ETV Bharat / bharat

14 ಅಪರೂಪದ ಕಾಯಿಲೆಗಳಿಗೆ 8 ಪರಿಣಾಮಕಾರಿ ಔಷಧ ಸಿದ್ದಪಡಿಸಿದ ಭಾರತ

author img

By ETV Bharat Karnataka Team

Published : Nov 24, 2023, 11:04 PM IST

ಭಾರತವು ಅಪರೂಪದ ಕಾಯಲೆಗಳಿಗಾಗಿ ಪರಿಣಾಮಕಾರಿ ಔಷಧಿಯನ್ನು ಭಾರತ ಸಿದ್ದಪಡಿಸಿದೆ

ಔಷಧಿಯನ್ನು ಸಿದ್ದಪಡಿಸಿದ ಭಾರತ
ಔಷಧಿಯನ್ನು ಸಿದ್ದಪಡಿಸಿದ ಭಾರತ

ನವದೆಹಲಿ: ದೇಶಾದ್ಯಂತ ಬಹುತೇಕ ಜನರಲ್ಲಿ ಕಂಡು ಬರುವ ಕುಡಗೋಲು ಕಣ ಕಾಯಿಲೆ ಸೇರಿದಂತೆ 14 ಅಪರೂಪದ ಕಾಯಿಲೆಗಳೆಗಾಗಿ ಭಾರತ ಎಂಟು ಪರಿಣಾಮಕಾರಿ ಔಷಧಗಳನ್ನು ಅಭಿವೃದ್ಧಿಪಡಿಸಿದೆ. ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಸದ್ಯ ನಾಲ್ಕು ಔಷಧಗಳನ್ನು ಮಾರುಕಟ್ಟಗೆ ಬಿಡಲು ಅನಮೋದನೆ ಸಿಕ್ಕಿದೆ ಉಳಿದ ನಾಲ್ಕು ಔಷಧಗಳ ಬಿಡುಗಡೆ ಅನುಮೋದನೆ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದರು.

ಇದೀಗಾ ವಿಶ್ವದಲ್ಲಿ ಭಾರತವು ಅತ್ಯಂತ ಪರಿಣಾಮಕಾರಿ ಔಷಧವನ್ನು ಕಡಿಮೆ ಬೆಲೆಯಲ್ಲಿ ತಯಾರಿಸುವ ಮತ್ತು ಮಾರಾಟ ಮಾಡುವ ರಾಷ್ಟ್ರವಾಗಿದೆ. ಅಪರೂಪದ ಕಾಯಿಲೆಗಳಿಗೆ ಔಷಧಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಪರೂಪದ ಕಾಯಿಲೆಗಳ ಚಿಕಿತ್ಸೆಗಳು ತುಂಬಾ ದುಬಾರಿಯಾಗಿದೆ. ಅದಕ್ಕಾಗಿ ಇಂತಹ ಕಾಯಿಲೆಯಿಂದ ಬಳಲುವ ಹಲವಾರು ಜನರಿಗೆ ಸಹಾಯ ಮಾಡಲು ಭಾರತ ಸರ್ಕಾರವು ಔಷಧ ತಯಾರಿಕ ಯೋಜನೆಗಳನ್ನು ಕೈಗೊಂಡಿದೆ. ಈ ಔಷಧಗಳನ್ನು ವಿದೇಶಗಳಿಗೂ ರಫ್ತು ಮಾಡಲು ಅಕಾಡೆಮಿ, ಫಾರ್ಮಾ ಉದ್ಯಮಗಳು, ಸಂಸ್ಥೆಗಳು, ಸಿಡಿಎಸ್‌ಸಿಒ ಮತ್ತು ಫಾರ್ಮಾಸ್ಯುಟಿಕಲ್ಸ್ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಮಾಂಡವಿಯಾ ಹೇಳಿದ್ದಾರೆ.

WHO ಪ್ರಕಾರ, 1000 ಅಥವಾ ಅದಕ್ಕಿಂತ ಕಡಿಮೆ ವ್ಯಕ್ತಿಯಲ್ಲಿ ಬಾಧಿಸುವ ರೋಗವನ್ನು ಅಪರೂಪದ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಇಂತಹ 200ಕ್ಕೂ ಹೆಚ್ಚು ಅಪರೂಪದ ಕಾಯಿಲೆಗಳಿವೆ. ಭಾರತದಲ್ಲಿ, 8.4 ರಿಂದ 10 ಕೋಟಿ ರೋಗಿಗಳು ಕೆಲವು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. 80 ರಷ್ಟು ರೋಗಗಳಿಗೆ ಅನುವಂಶಿಕತೆ ಕಾರಣವಾಗಿದೆ. ಇದೀಗ ಸರ್ಕಾರ 14 ಅಪರೂಪದ ಕಾಯಿಲೆಗಳ ಬಗ್ಗೆ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ. ಈಗ ಭಾರತವು ಈ ಔಷಧಗಳನ್ನು ಕೈಗೆಟುಕುವ ಬೆಲೆಯಲ್ಲಿ ಅಗತ್ಯವಿರುವ ದೇಶಗಳಿಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು

ಇದನ್ನೂ ಓದಿ: ಮುಖ್ಯ ಕಾರ್ಯದರ್ಶಿ ನೇಮಕ: ದೆಹಲಿ ಸಿಎಂ - ಲೆಫ್ಟಿನೆಂಟ್ ಗವರ್ನರ್ ಸಭೆಗೆ ಸುಪ್ರೀಂಕೋರ್ಟ್​ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.