ETV Bharat / bharat

ದೇಶದಲ್ಲಿ ಕೊಂಚ ಏರಿದ Corona: ಹೊಸದಾಗಿ 37,875 ಕೇಸ್​ ದಾಖಲು

author img

By

Published : Sep 8, 2021, 11:54 AM IST

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಕಾರ, ಈವರೆಗೆ 3,22,64,051 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದು, ಸದ್ಯ ದೇಶದಲ್ಲಿ 3,91,256 ಸಕ್ರಿಯ ಪ್ರಕರಣಗಳಿವೆ.

COVID
ಕೊರೊನಾ

ನವದೆಹಲಿ: ಭಾರತದಲ್ಲಿ ಹೊಸದಾಗಿ 37,875 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,30,96,718ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 369 ಜನರು ವೈರಸ್​ಗೆ ಬಲಿಯಾಗಿದ್ದು, ಮೃತರ ಸಂಖ್ಯೆ 4,41,411 ಆಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಕಾರ, ಈವರೆಗೆ 3,22,64,051 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದು, ಸದ್ಯ ದೇಶದಲ್ಲಿ 3,91,256 ಸಕ್ರಿಯ ಪ್ರಕರಣಗಳಿವೆ.

  • " class="align-text-top noRightClick twitterSection" data="">

ಇದನ್ನು ಓದಿ: ಪ್ರಧಾನಿ ಮೋದಿ 'ಮನ್ ಕಿ ಬಾತ್'ನಲ್ಲಿ ಪ್ರಸ್ತಾಪಿಸಿದ 'ಬಾಕಾಹು'ಗೆ ಬಹುಬೇಡಿಕೆ: ದೇಶವ್ಯಾಪಿ ಕ್ರಾಂತಿಯ ಕಂಪು

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿ ಇಲ್ಲಿಯವರೆಗೆ ದೇಶದಲ್ಲಿ ನೀಡಲಾದ ಕೋವಿಡ್ -19 ಲಸಿಕೆ ಪ್ರಮಾಣಗಳು 70.75 ಕೋಟಿ ಮೀರಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ಕೇರಳವು 25,772 ಹೊಸ ಕೊರೊನಾ ಪ್ರಕರಣಗಳನ್ನು ದಾಖಲಿಸಿದ್ದು, 189 ಮಂದಿ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.