ETV Bharat / bharat

ಕೋವಿಡ್​ ಪ್ರಕರಣಗಳ ಹೆಚ್ಚಳ: ಆರೋಗ್ಯ ಸಚಿವರೊಂದಿಗೆ ಇಂದು ಮಾಂಡವಿಯಾ ಸಭೆ

author img

By

Published : Dec 23, 2022, 6:50 AM IST

ಚೀನಾ ಮತ್ತು ಇತರ ಕೆಲವು ದೇಶಗಳು ಕೋವಿಡ್ ಪ್ರಕರಣಗಳ ಸಂಖ್ಯೆ ಉಲ್ಬಣವಾಗುತ್ತಿದ್ದಂತೆ ಉನ್ನತ ಮಟ್ಟದ ಕೋವಿಡ್ ಪರಿಶೀಲನಾ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕಟ್ಟುನಿಟ್ಟಾಗಿ ಎಚ್ಚರ ವಹಿಸುವಂತೆ ಕರೆ ನೀಡಿದ್ದಾರೆ.

Union Health Minister Mansukh Mandaviya
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ

ನವದೆಹಲಿ: ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್​- 19 ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ನಿನ್ನೆ ರಾಜ್ಯಸಭೆಯಲ್ಲಿ ಈ ಕುರಿತು ಸ್ವತಃ ಮಾಂಡವಿಯಾ ಅವರೇ ತಿಳಿಸಿದ್ದು, ಭಾರತದ ಸನ್ನದ್ಧತೆಯ ಕುರಿತು ಸ್ವಯಂ ಪ್ರೇರಿತ ಹೇಳಿಕೆ ನೀಡಿದ್ದಾರೆ.

ಸದ್ಯದ ಪರಿಸ್ಥಿತಿಯನ್ನು ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಚೀನಾ ಮತ್ತು ಭಾರತದ ನಡುವೆ ನೇರ ವಿಮಾನಗಳಿಲ್ಲ. ಆದರೂ ಜನರು ಇತರ ಮಾರ್ಗಗಳ ಮೂಲಕ ಭಾರತಕ್ಕೆ ಬರುತ್ತಾರೆ. ವೈರಸ್​ನ ಯಾವುದೇ ಅಪರಿಚಿತ ರೂಪಾಂತರವು ಭಾರತಕ್ಕೆ ಪ್ರವೇಶಿಸದಂತೆ ಎಚ್ಚರ ವಹಿಸುವುದರ ಜೊತೆಗೆ ಪ್ರಯಾಣಕ್ಕೆ ಯಾವುದೇ ಅಡೆತಡೆಯಾಗದಂತೆಯೂ ಖಚಿತಪಡಿಸಿಕೊಳ್ಳಲು ಗಮನಹರಿಸಲಾಗಿದೆ ಎಂದು ಹೇಳಿದರು.

ಚೀನಾ ಮತ್ತು ಇತರ ಕೆಲವು ದೇಶಗಳು ಕೋವಿಡ್ ಪ್ರಕರಣಗಳ ಸಂಖ್ಯೆ ಉಲ್ಬಣವಾಗುತ್ತಿದ್ದಂತೆ ಉನ್ನತ ಮಟ್ಟದ ಕೋವಿಡ್ ಪರಿಶೀಲನಾ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕಟ್ಟುನಿಟ್ಟಾಗಿ ಎಚ್ಚರ ವಹಿಸುವಂತೆ ಕರೆ ನೀಡಿದ್ದಾರೆ. ಅದರ ಜೊತೆಗೆ ಪ್ರಸ್ತುತ ಇರುವ ಕಣ್ಗಾವಲು ಕ್ರಮಗಳನ್ನೇ ವಿಶೇಷವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇನ್ನಷ್ಟು ಬಲಪಡಿಸುವಂತೆ ನಿರ್ದೇಶಿಸಿದರು. 'ಕೋವಿಡ್ ಇನ್ನೂ ಮುಗಿದಿಲ್ಲ' ಎಂದು ಒತ್ತಿ ಹೇಳಿದ ಮೋದಿ ಜನನಿಬಿಡ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್​ ಧರಿಸುವಂತೆ ಒತ್ತಾಯಿಸಿದರು.

ಹೊಸ ಅಪರಿಸಿತ ಕೊರೊನಾ ವೈರಸ್​ ದೇಶದ ಒಳಗೆ ಪ್ರವೇಶಿಸುವ ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ, ಡಿ.24 ರಿಂದ ವಿಮಾನ ನಿಲ್ದಾಣಗಳಲ್ಲಿ ಪ್ರತಿ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಬರುವ ಪ್ರಯಾಣಿಕರಲ್ಲಿ ಶೇಕಡಾ ಎರಡರಷ್ಟು ಪ್ರಯಾಣಿಕರಿಗೆ ಕಡ್ಡಾಯವಾಗಿ ಆಗಮನದ ನಂತರದ ಕೋವಿಡ್ ಪರೀಕ್ಷೆ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್​​ ಧರಿಸಿ.. ವಿಮಾನ ನಿಲ್ದಾಣಗಳಲ್ಲಿ ರ‍್ಯಾಂಡಮ್ ಟೆಸ್ಟ್: ಕೇಂದ್ರ ಸಚಿವ ಮಾಂಡವಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.