ETV Bharat / bharat

ಪೋಸ್ಟ್​​ ಆಫೀಸ್ ಠೇವಣಿ ಹಣಕ್ಕೆ ಎಳ್ಳುನೀರು.. ಗ್ರಾಹಕರ ₹1.25 ಕೋಟಿ ರೂ. IPL​​ ಬೆಟ್ಟಿಂಗ್​ ಆಡಿದ ಪೋಸ್ಟ್​ಮಾಸ್ಟರ್​​!

author img

By

Published : May 25, 2022, 8:00 PM IST

ಅನೇಕ ಮಹತ್ವದ ಉದ್ದೇಶವನ್ನಿಟ್ಟುಕೊಂಡು ನೂರಾರು ಜನರು ಪೋಸ್ಟ್ ಆಫೀಸ್​ನಲ್ಲಿ ಠೇವಣಿ ಇಟ್ಟಿದ್ದರು. ಇವರ ಕನಸು ಇದೀಗ ನುಚ್ಚುನೂರಾಗಿದ್ದು, ಪೋಸ್ಟ್ ಮಾಸ್ಟರ್​ ಕೋಟ್ಯಂತರ ರೂಪಾಯಿ ಐಪಿಎಲ್ ಬೆಟ್ಟಿಂಗ್ ಆಡಲು ಬಳಸಿಕೊಂಡಿದ್ದಾನೆ.

Cheating in Bina post office
Cheating in Bina post office

ಸಾಗರ್(ಮಧ್ಯಪ್ರದೇಶ): ಮುಪ್ಪಿನ ಕಾಲ ಹಾಗೂ ಇತರ ಸಂದರ್ಭಗಳಲ್ಲಿ ಸಹಾಯ ಆಗುವ ಉದ್ದೇಶದಿಂದ ಕೋಟ್ಯಂತರ ಜನರು ಅಂಚೆ ಕಚೇರಿಯಲ್ಲಿ ಉಳಿತಾಯ ಠೇವಣಿ ಇಡುತ್ತಾರೆ. ಆದರೆ, ಇಲ್ಲೋರ್ವ ಪೋಸ್ಟ್​ಮಾಸ್ಟರ್​ ಆ ಹಣಕ್ಕೆ ಕನ್ನ ಹಾಕಿ, ಐಪಿಎಲ್​ ಬೆಟ್ಟಿಂಗ್ ಆಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಿನಾ ಎಂಬಲ್ಲಿ ಅಂಚೆ ಕಚೇರಿ ಸಿಬ್ಬಂದಿ ಈ ಮೋಸ ಮಾಡಿದ್ದು, ಪೋಸ್ಟ್​ ಆಫೀಸ್​​ನಲ್ಲಿ ಅನೇಕರು ಠೇವಣಿ ಮಾಡಿದ್ದ ಹಣ ತೆಗೆದು ಬೆಟ್ಟಿಂಗ್ ಆಡಿದ್ದಾನೆ. ಇದರ ಬೆನ್ನಲ್ಲೇ ಠೇವಣಿ ಕಳೆದುಕೊಂಡ ಗ್ರಾಹಕರು ಗೋಳಾಡುತ್ತಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ವಿಶಾಲ್​ ಅಹಿರ್ವಾಲ್​ ಎಂಬಾತನ ಬಂಧನ ಮಾಡಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಬರೋಬ್ಬರಿ 24 ಕುಟುಂಬಗಳಿಗೆ ಆತ 1.25 ಕೋಟಿ ರೂಪಾಯಿ ಮೋಸ ಮಾಡಿದ್ದಾನೆ.

ಗ್ರಾಹಕರ ₹1.25 ಕೋಟಿ IPL​​ ಬೆಟ್ಟಿಂಗ್​ ಆಡಿದ ಪೋಸ್ಟ್​ಮಾಸ್ಟರ್​​!

ಕೋವಿಡ್ ಸಂದರ್ಭದಲ್ಲಿ ಮಹಿಳೆಯೊಬ್ಬರು ಗಂಡನ ಕಳೆದುಕೊಂಡಿದ್ದು, ಅಂಚೆ ಕಚೇರಿಯಲ್ಲಿ 9 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದರು. ಆ ಹಣ ಸಹ ಬೆಟ್ಟಿಂಗ್​​ಗೋಸ್ಕರ ಬಳಕೆ ಮಾಡಲಾಗಿದೆ. ವೃದ್ಧ ಮಹಿಳೆಯೊಬ್ಬಳು ಹೆಣ್ಣು ಮಕ್ಕಳ ಮದುವೆಗೋಸ್ಕರ 4 ಲಕ್ಷ ರೂಪಾಯಿ ಪೋಸ್ಟ್​ ಆಫೀಸ್​ನಲ್ಲಿ ಠೇವಣಿ ಇಟ್ಟಿದ್ದರು. ಅದನ್ನೂ ಸಹ ಉದ್ಯೋಗಿ ಬೆಟ್ಟಿಂಗ್​​ಗೋಸ್ಕರ ಬಳಸಿದ್ದಾನೆ.

Cheating in Bina post office
ಮೋಸ ಹೋದ ಹತ್ತಾರು ಅಂಚೆ ಕಚೇರಿ ಠೇವಣಿ ಗ್ರಾಹಕರು

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ತಮ್ಮ ಹಣ ಲಪಟಾಯಿಸಿರುವ ಬಗ್ಗೆ ಕೆಲವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ವೇಳೆ ವಿಚಾರಣೆ ನಡೆಸಿದಾಗ ಅಂಚೆ ಕಚೇರಿಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿದೆ. ಪೋಸ್ಟ್ ಮಾಸ್ಟರ್ ವಿಶಾಲ್ ಬಂಧಿಸಿ, ವಿಚಾರಣೆ ನಡೆಸಿದಾಗ ತಾನು ಹಣ ಲಪಟಾಯಿಸಿ, ಬೆಟ್ಟಿಂಗ್ ಆಡಿರುವ ವಿಚಾರ ಬಿಚ್ಚಿಟ್ಟಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.