ಟಿ20: ಉಮ್ರಾನ್ ಮಲಿಕ್ ವೇಗದ ಬೌಲಿಂಗ್.. ಐರ್ಲೆಂಡ್ ವಿರುದ್ಧ ಗೆದ್ದ ಭಾರತ

author img

By

Published : Jun 29, 2022, 1:14 PM IST

I backed Umran for final over since he has pace, says Hardik

ಭಾರತದ ಪರವಾಗಿ ದೀಪಕ್ ಹೂಡಾ ತಮ್ಮ ಮೊದಲನೆಯ ಸೆಂಚುರಿ ಬಾರಿಸಿ ತಂಡಕ್ಕೆ ಉತ್ತಮ ಸ್ಕೋರ್ ನೀಡಿದ್ದರು. ಆದರೆ ಪಂದ್ಯ ಕೊನೆಯ ಓವರ್​ನಲ್ಲಿ ತೀರಾ ರೋಮಾಂಚಕವಾಗಿದ್ದು, ಭಾರತ ಜಯಗಳಿಸಿತು.

ಮಾಲಾಹೈಡ್ (ಐರ್ಲೆಂಡ್): ಉಮ್ರಾನ್ ಮಲಿಕ್ ವೇಗದ ಬೌಲಿಂಗ್​ ಮಾಡುತ್ತಾರೆಂಬ ಕಾರಣದಿಂದಲೇ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದ ಕೊನೆಯ ಓವರ್ ಬೌಲಿಂಗ್​ ಅವರಿಗೆ ನೀಡಿದ್ದರು ಎಂದು ತಿಳಿದು ಬಂದಿದೆ. 226 ರನ್ ಗುರಿಯನ್ನು ಬೆನ್ನತ್ತಿದ್ದ ಐರ್ಲೆಂಡ್ ನಾಲ್ಕು ರನ್​ಗಳಿಂದ ಪಂದ್ಯ ಸೋತಿತ್ತು. ಕೊನೆಯ ಓವರ್​ನಲ್ಲಿ ಉಮ್ರಾನ್ 17 ರನ್ ನೀಡಿ ಭಾರತದ ಗೆಲುವಿಗೆ ಕಾರಣರಾದರು.

ಕೊನೆಯ ಓವರ್​ ಬೌಲಿಂಗ್ ಉಮ್ರಾನ್ ಮಲಿಕ್​ರಿಗೆ ನೀಡಿದ್ದನ್ನು ಸಮರ್ಥಿಸಿಕೊಂಡ ಹಾರ್ದಿಕ್ ಪಾಂಡ್ಯ, "ಪ್ರಾಮಾಣಿಕನಾಗಿರಬೇಕೆಂಬ ಒತ್ತಡ ನನಗಿಲ್ಲ. ಒತ್ತಡವನ್ನು ದೂರವಿಟ್ಟು ವಾಸ್ತವದಲ್ಲಿ ಆಡಬೇಕೆಂಬುದು ನನ್ನ ಇಚ್ಛೆ. ಉಮ್ರಾನ್ ಅವರ ಬೌಲಿಂಗ್​ನಲ್ಲಿ ಸಾಕಷ್ಟು ವೇಗ ಇದ್ದುದರಿಂದ ಅವರನ್ನೇ ಆಯ್ಕೆ ಮಾಡಿದೆ. ಅವರ ವೇಗವನ್ನು ಎದುರಿಸಿ ಬಾಲ್ ಹಿಟ್ ಮಾಡುವುದು ಎಂಥವರಿಗೂ ಕಷ್ಟ."​ ಎಂದು ಹೇಳಿದರು.

ಭಾರತದ ಪರವಾಗಿ ದೀಪಕ್ ಹೂಡಾ ತಮ್ಮ ಮೊದಲನೆಯ ಸೆಂಚುರಿ ಬಾರಿಸಿ ತಂಡಕ್ಕೆ ಉತ್ತಮ ಸ್ಕೋರ್ ನೀಡಿದ್ದರು. ಆದರೆ ಪಂದ್ಯ ಕೊನೆಯ ಓವರ್​ನಲ್ಲಿ ತೀರಾ ರೋಮಾಂಚಕವಾಗಿದ್ದು, ಭಾರತ ಜಯಗಳಿಸಿತು.

"ನಾವು ಕ್ರಿಕೆಟ್​ ಆಡಲು ಬಂದಿದ್ದೇವೆ. ಐರ್ಲೆಂಡ್ ತಮ್ಮ ಆಟವನ್ನು ನಮಗೆ ತೋರಿಸುತ್ತಾರೆ. ಅವರೂ ತುಂಬಾ ಚೆನ್ನಾಗಿ ಆಡಿದರು. ಅವರಿಗೆ ಮೆಚ್ಚುಗೆ ಸಲ್ಲಬೇಕು. ಅದೇ ಸಮಯಕ್ಕೆ ನಮ್ಮ ಬೌಲರ್​ಗಳು ಸಹ ಅದ್ಭುತವಾಗಿ ಬೌಲಿಂಗ್​ ಮಾಡಿದರು. ಇಲ್ಲಿನ ಜನ ಕೂಡ ನಮಗೆ ತುಂಬಾ ಪ್ರೋತ್ಸಾಹ ನೀಡಿದರು. ಅದರಲ್ಲೂ ದಿನೇಶ್ ಹಾಗೂ ಸಂಜು ಅವರಿಗೆ ಜನಬೆಂಬಲ ಅಪಾರವಾಗಿತ್ತು. ಕ್ರಿಕೆಟ್ ಫ್ಯಾನ್​ಗಳಿಗೆ ಋಣಿಯಾಗಿರುವೆ." ಎಂದು ಹಾರ್ದಿಕ್ ಪಾಂಡ್ಯ ಖುಷಿಯನ್ನು ಹಂಚಿಕೊಂಡರು.

"ಭಾರತಕ್ಕಾಗಿ ಆಡುವುದು ಬಾಲ್ಯದಿಂದಲೂ ಪ್ರತಿಯೊಬ್ಬರ ಕನಸಾಗಿರುತ್ತದೆ. ತಂಡವನ್ನು ಮುನ್ನಡೆಸುವುದು ಹಾಗೂ ಜಯ ಗಳಿಸುವುದು.. ಜೊತೆಗೆ ಪ್ರಥಮ ಸರಣಿ ಜಯ. ಇದಕ್ಕಾಗಿ ತುಂಬಾ ಹೆಮ್ಮೆಯಿದೆ. ಹೂಡಾ ಅವರ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಉಮ್ರಾನ್ ಕೂಡ ಕಡಿಮೆ ಏನಿರಲಿಲ್ಲ. ಐರ್ಲೆಂಡ್ ತುಂಬಾ ಚೆನ್ನಾಗಿ ಆಡಿದರೂ ನಾವು ಜಯಿಸಿದೆವು." ಎಂದು ಹಾರ್ದಿಕ್ ಪಾಂಡ್ಯ ನುಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.