ETV Bharat / bharat

ವೆಬ್​​ಸಿರೀಸ್​ನಿಂದ ಪ್ರೇರಿತಗೊಂಡು ಅಪಹರಣ​, ಸುಲಿಗೆ: ಹೈದರಾಬಾದ್‌ನಲ್ಲಿ ಗ್ಯಾಂಗ್ ಬಂಧನ

author img

By

Published : Feb 16, 2022, 8:10 AM IST

Updated : Feb 16, 2022, 8:16 AM IST

ಒಟಿಟಿಯಲ್ಲಿ ವೆಬ್​ಸಿರೀಸ್ ನೋಡಿ, ಅದರಿಂದ ಪ್ರೇರಿತಗೊಂಡು ವ್ಯಕ್ತಿಗಳನ್ನು ಅಪಹರಿಸಿ ವಂಚನೆ ಮಾಡುತ್ತಿದ್ದ ಆರೋಪದಲ್ಲಿ ಮಹಿಳೆ ಸೇರಿದಂತೆ ಗ್ಯಾಂಗ್​ ಒಂದನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

Hyderabad police arrests kidnapping gang inspired by web series
ವೆಬ್​​ಸಿರೀಸ್​ನಿಂದ ಪ್ರೇರಿತಗೊಂಡು ಕಿಡ್ನ್ಯಾಪ್​, ಸುಲಿಗೆ.. ಗ್ಯಾಂಗ್ ಬಂಧನ

ಹೈದರಾಬಾದ್(ತೆಲಂಗಾಣ): ವೆಬ್​ಸಿರೀಸ್​​ನಿಂದ ಪ್ರೇರಿತರಾಗಿ ಸುಲಿಗೆ ಮಾಡಲು ಜನರನ್ನು ಅಪಹರಿಸುತ್ತಿದ್ದ ಆರೋಪದಲ್ಲಿ ಮಹಿಳೆ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.

ವೆಬ್​ಸಿರೀಸ್​ನಲ್ಲಿ ಹಲವರನ್ನು 'ನೇಮಕ' ಮಾಡಿಕೊಂಡು ಹಣಕ್ಕಾಗಿ ವ್ಯಕ್ತಿಗಳನ್ನು ಅಪಹರಿಸಲಾಗುತ್ತಿತ್ತು. ಸುರೇಶ್ ಎಂಬಾತ ಮಹಿಳೆ ಸೇರಿದಂತೆ ಹಲವರನ್ನು ನೇಮಿಸಿಕೊಂಡು ಪ್ಲ್ಯಾನ್ ಮಾಡಿ, ಅಮಾಯಕರನ್ನು ಅಪಹರಿಸುತ್ತಿದ್ದ. ನಂತರ ಅವರ ಕುಟುಂಬಸ್ಥರಿಗೆ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ಜೊತೆಗೆ ನೇಮಕಗೊಂಡ ಮಹಿಳೆಯರ ಮೂಲಕ ಸ್ನೇಹಿತರ ವಲಯದಲ್ಲಿರುವವರಿಗೆ ಸಂದೇಶ, ವಾಯ್ಸ್​ ರೆಕಾರ್ಡ್​ ಅನ್ನು ಸಾಮಾಜಿಕ ಜಾಲತಾಣಗಳ ಆ್ಯಪ್​ ಮೂಲಕ ಕಳುಹಿಸಿ, ನಂತರ ಟ್ರ್ಯಾಪ್ ಮಾಡಿ, ಅವರನ್ನು ಅಪಹರಿಸುವ ಕೆಲಸ ಮಾಡುತ್ತಿದ್ದು, ನಂತರ ಅವರನ್ನು ವಂಚಿಸಲಾಗುತ್ತಿತ್ತು. ಮಹಿಳೆಯೊಂದಿಗಿನ ಕುರಿತ ವಿಚಾರವಾದ ಕಾರಣದಿಂದ ಸಂತ್ರಸ್ತ ವ್ಯಕ್ತಿಗಳು ಈ ಕುರಿತು ದೂರು ನೀಡಲು ಹೋಗುತ್ತಿರಲಿಲ್ಲ. ಹೀಗಾಗಿ ವಂಚಕರು ಬಚಾವಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ನಿಂತಿದ್ದ ಟ್ರ್ಯಾಕ್ಟರ್​ಗೆ ವ್ಯಾನ್ ಡಿಕ್ಕಿ: ನಾಲ್ವರ ದುರ್ಮರಣ

ಫೆಬ್ರವರಿ 6ರಂದು ಮಹಿಳೆಯೊಬ್ಬರು ತನ್ನ ಮಗನನ್ನು ಕೆಲವರು ಅಪಹರಿಸಿ, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಸುರೇಶ್ ಮತ್ತು ಆತನ ಗ್ಯಾಂಗ್ ಅನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Last Updated : Feb 16, 2022, 8:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.